ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾದ ಕಿಯಾ ಸೆಲ್ಟೋಸ್ ಕಾರು ಭಾರತದಲ್ಲಿ ಹೊಸ ಸಂಚಲನ ಮೂಡಿಸಿದೆ. ನೂತನ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟಗೊಂಡಿದೆ. ನೂತನ ಕಾರು ಎಷ್ಟು ಸುರಕ್ಷತೆ ಹೊಂದಿದೆ. ಈ ಕುತೂಹಲಕ್ಕ ಇಲ್ಲಿದೆ ಉತ್ತರ.
ನವದೆಹಲಿ(ಡಿ.30): ಸೌತ್ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಈಗಾಗಲೇ ಸೆಲ್ಟೋಸ್ ಕಾರು ಬಿಡುಗಡೆ ಮಾಡೋ ಮೂಲಕ ಹೊಸ ಇತಿಹಾಸ ರಚಿಸಿದೆ. ಮಿಡ್ ಸೆಗ್ಮೆಂಟ್ suv ಕಾರುಗಳ ಪೈಕಿ ಕಿಯಾ ಸೆಲ್ಟೋಸ್ ಕಾರು ದಾಖಲೆಯ ಮಾರಾಟ ಕಂಡಿದೆ. ಆಂಧ್ರಪ್ರದೇಶದ ಅನಂತಪುರಂನಲ್ಲಿ ಕಿಯಾ ಕಾರು ಘಟಕ ಹೊಂದಿದ್ದು, ಭಾರತ, ಮಿಡಲ್ ಈಸ್ಟ್, ಸೌತ್ ಆಫ್ರಿಕಾ ಸೇರಿದಂತೆ ಬಹುತೇಕ ರಾಷ್ಟ್ರಗಳಿಗೆ ಕಿಯಾ ಕಾರು ರಫ್ತಾಗುತ್ತಿದೆ.
undefined
ಇದನ್ನೂ ಓದಿ: ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ; ಬಿಡುಗಡೆಯಾಗುತ್ತಿದೆ ಸಣ್ಣ ಮಾರುತಿ ಕಾರು!
ನಾರ್ತ್ ಅಮೇರಿಕಾ ಹಾಗೂ ಆಸ್ಟ್ರೇಲಿಯಾದಲ್ಲೂ ಕಿಯಾ ಸೆಲ್ಟೋಸ್ ಕಾರು ಭರ್ಜರಿಯಾಗಿ ಮಾರಾಟವಾಗುತ್ತಿದೆ. ಈ ಎರಡು ದೇಶಗಳು ಸೌತ್ ಕೊರಿಯಾದಿಂದಲೇ ಸೆಲ್ಟೋಸ್ ಕಾರನ್ನು ಆಮದು ಮಾಡಿಕೊಳ್ಳುತ್ತಿದೆ. ಇದೀಗ ಆಸ್ಟ್ರೇಲಿಯಾದಲ್ಲಿ ಕಿಯಾ ಸೆಲ್ಟೋಸ್ ಕಾರಿನ ಸುರಕ್ಷತೆಯನ್ನು ಪರೀಕ್ಷಿಸಿ ಫಲಿತಾಂಶ ಬಹಿರಂಗ ಪಡಿಸಿದೆ. ಆಸ್ಟ್ರೇಲಿಯಾದಲ್ಲಿ ಮಾರಾಟವಾಗುತ್ತಿರುವ ಕಿಯಾ ಸೆಲ್ಟೋಸ್ ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಹೊಸ ಕಾರು; ಭಾರತಕ್ಕೆ ಬರುತ್ತಿದೆ ಚೀನಾ ಕಾರು!
ಆಸ್ಟ್ರೇಲಿಯಾದ ANCAP ನಡೆಸಿದ ಸುರಕ್ಷತಾ ಫಲಿತಾಂಶ ಪ್ರಕಟಿಸಿದೆ. ಕಿಯಾ ಸೆಲ್ಟೋಸ್ ಕ್ರಾಶ್ ಟೆಸ್ಟ್‌ನಲ್ಲಿ ವಯಸ್ಕರ ಸುರಕ್ಷತೆಯಲ್ಲಿ 85%, ಮಕ್ಕಳ ಸುರಕ್ಷತೆಯಲ್ಲಿ 83%,, ಕಾರಿನ ಸೇಫ್ಟಿ ಫೀಚರ್ಸ್‌ನಿಂದ 70% ಸುರಕ್ಷತೆ ಸಿಗಲಿದೆ ಎಂದು ಕ್ರಾಶ್ ಟೆಸ್ಟ್ ಫಲಿತಾಂಶ ಬಹಿರಂಗ ಪಡಿಸಿದೆ.
ಆಸ್ಟ್ರೇಲಿಯಾದಲ್ಲಿನ ಕಿಯಾ ಸೆಲ್ಟೋಲ್ ಎಲ್ಲಾ ವೇರಿಯೆಂಟ್ ಕಾರು 6 ಏರ್‌ಬ್ಯಾಗ್ ಹೊಂದಿದೆ. ಭಾರತದಲ್ಲಿ ಶೀಘ್ರದಲ್ಲೇ ಕಿಯಾ ಸೆಲ್ಟೋಸ್ ಕಾರಿನ ಕ್ರಾಶ್ ಟೆಸ್ಟ್ ಫಲಿತಾಂಶ ಹೊರಬೀಳಲಿದೆ. ಸದ್ಯ ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಗರಿಷ್ಠ ಸುರಕ್ಷತೆ ನೀಡುವ ಕಾರುಗಳ ಪೈಕಿ ಟಾಟಾ ನೆಕ್ಸಾನ್ ಮೊದಲ ಸ್ಥಾನದಲ್ಲಿದೆ. ನೆಕ್ಸಾನ್ 5 ಸ್ಟಾರ್ ರೇಟಿಂಗ್ ಪಡೆದಿದೆ.