2019ರಲ್ಲಿ ಹಲವು ಏರಿಳಿತ ತಂಡ ಭಾರತದ ಆಟೋಮೊಬೈಲ್ ಮಾರುಕಟ್ಟೆ ಇದೀಗ ಹೊಸ ವರ್ಷದಲ್ಲಿ ತ್ವರಿತಗತಿಯ ಅಭಿವೃದ್ದಿಯ ವಿಶ್ವಾಸದಲ್ಲಿದೆ. ಪಾತಾಳಕ್ಕೆ ಕುಸಿದಿದ್ದ ಮಾರಾಟ ಇದೀಗ ಚೇತರಿಕೆ ಕಂಡಿದೆ. ಹೀಗಾಗಿ 2020ರಲ್ಲಿ ಪೈಪೋಟಿ ಹೆಚ್ಚಾಗಲಿದೆ. 2020ರ ಹೊಸ ವರ್ಷಕ್ಕೆ ಹೊಸ ಕಾರು ಭಾರತಕ್ಕೆ ಎಂಟ್ರಿ ಕೊಡುತ್ತಿದೆ. ಚೀನಾದ ಈ ಕಾರು ಭಾರತದಲ್ಲಿರುವ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ. ಈ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಡಿ.29): 2019ರಲ್ಲಿ ಚೀನಾ ಮೂಲದ ಬ್ರಿಟೀಷ್ ಕಾರು ಎಂಜಿ ಮೋಟಾರ್ಸ್ ತನ್ನ ಹೆಕ್ಟರ್ SUV ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಎಂಜಿ ಕಾರು ಬಿಡುಗಡೆ ಮಾಡಿತ್ತು. ಇದೀಗ ಚೀನಾದ ಮತ್ತೊಂದು ಕಾರು ಕಂಪನಿಯಾದ ಹೈಮಾ ಆಟೋಮೊಬೈಲ್ ಗ್ರೂಪ್ ಭಾರತಕ್ಕೆ ಕಾಲಿಡುತ್ತಿದೆ.
undefined
ಇದನ್ನೂ ಓದಿ: ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ; ಬಿಡುಗಡೆಯಾಗುತ್ತಿದೆ ಸಣ್ಣ ಮಾರುತಿ ಕಾರು!.
ಚೀನಾದ ದೊಡ್ಡ ಕಾರು ಕಂಪನಿ ಹೈಮಾ ಗ್ರೂಪ್ SUV, ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳಿಂದಲೇ ಪ್ರಖ್ಯಾತಿ ಹೊಂದಿದೆ. ವಿಶೇಷ ಅಂದರೆ ಹೈಮಾ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಜನಪ್ರಿಯವಾಗಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಿದೆ. 2020ರ ಅಂತ್ಯದಲ್ಲಿ ಚೀನಾ ಕಾರು ಘಟಕ ಭಾರತದಲ್ಲಿ ತಲೆ ಎತ್ತುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಜ.22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ; ಬುಕಿಂಗ್ ಬೆಲೆ 21 ಸಾವಿರ!
ಹೈಮಾ ಆಟೋಮೊಬೈಲ್ ಗ್ರೂಪ್ ಕಂಪನಿ 1988ರಲ್ಲಿ ಸ್ಥಾಪನೆಯಾಯಿತು. ಜಪಾನ್ ಮೂಲಕ ಮಜ್ದಾ ಕಂಪನಿ ಸಹಭಾಗಿತ್ವದಲ್ಲಿ ಹೈಮಾ ಕಂಪನಿ ಆರಂಭಗೊಂಡಿತು. ಮಜ್ದಾ ಮಾಡೆಲ್ ಹಾಗೂ ಮಜ್ದಾ ಕಾರು ಘಟಕದಲ್ಲೇ ಹೈಮಾ ಕಾರುಗಳು ನಿರ್ಮಾಣಗೊಳ್ಳುತ್ತಿತ್ತು. ಆದರೆ ಕೆಲ ವರ್ಷಗಳಿಂದ ಹೈಮಾ ಸ್ವತಂತ್ರ ಮಾಡೆಲ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಕಂಪನಿ ಭಾರತಕ್ಕೂ ವಿಸ್ತರಿಸಲು ಮುಂದಾಗಿದೆ.