ಕ್ರೆಟಾ ಹಿಂದಿಕ್ಕಿದ ಕಿಯಾ ಸೆಲ್ಟೋಸ್; ಗರಿಷ್ಠ ಮಾರಾಟವಾದ SUV ಕಾರು!

By Web Desk  |  First Published Oct 6, 2019, 9:03 PM IST

ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಸೌತ್ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಸೆಲ್ಟೋಸ್ ಕಾರು ಬಿಡುಗಡೆ ಮಾಡಿದೆ. ಆಗಸ್ಟ್‌ನಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದ ಸೆಲ್ಟೋಸ್, 2 ತಿಂಗಳಲ್ಲಿ ದಾಖಲೆ ಬರೆದಿದೆ. ಕ್ರೆಟಾ, ಹೆಕ್ಟರ್ ಕಾರು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ.
 


ಅನಂತಪುರಂ(ಅ.06): ಸಾಲು ಸಾಲು ಹಬ್ಬಗಳಿದ್ದರೂ ಭಾರತದಲ್ಲಿ ವಾಹನ ವಾಹನ ಏರಿಕೆ ಕಂಡಿಲ್ಲ. ಕಳೆದ 6 ತಿಂಗಳಿನಿಂದ ತೀವ್ರ ಕುಸಿತ ಕಂಡಿರುವ ವಾಹನ ಮಾರಾಟಕ್ಕೆ ಚೇತರಿಕೆ ನೀಡಲು ಆಟೋಮೊಬೈಲ್ ಕಂಪನಿಗಳು ಬೆಲೆ ಕಡಿತ ಸೇರಿದಂತೆ ಹೆಚ್ಚುವರಿ ಆಫರ್ ಘೋಷಿಸಿದೆ. ಆದರೆ ಈ ಸಂಕಷ್ಟದಲ್ಲೂ ಕಿಯಾ ಮೋಟಾರ್ಸ್ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಭಾರತದಲ್ಲಿ ಬಿಡುಗಡೆಯಾದ ಮೊತ್ತ ಮೊದಲ ಕಿಯಾ ಸೆಲ್ಟೋಸ್ ಕಾರು ಗರಿಷ್ಠ ಮಾರಾಟವಾದ suv ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 

Latest Videos

undefined

ಇದನ್ನೂ ಓದಿ: ಬಹುನಿರೀಕ್ಷಿತ KIA ಸೆಲ್ಟೋಸ್ ಕಾರು ಬಿಡುಗಡೆ; ಬೆಲೆ 9.69 ಲಕ್ಷ ರೂ!

2019ರ ಆಗಸ್ಟ್ ತಿಂಗಳಲ್ಲಿ ಕಿಯಾ ಸೆಲ್ಟೋಸ್ ಕಾರು ಭಾರತದಲ್ಲಿ ಬಿಡುಗಡೆಯಾಯಿತು. ಸೌತ್ ಕೋರಿಯಾ ಮೂಲದ ಈ ಕಾರು ಆಗಸ್ಟ್ ತಿಂಗಳಲ್ಲಿ 6236 ಮಾರಾಟವಾಗಿತ್ತು. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ 7754 ಕಾರುಗಳು ಮಾರಾಟವಾಗಿದೆ. ಮೊದಲ ಸ್ಥಾನದಲ್ಲಿದ್ದ ಹ್ಯುಂಡೈ ಕ್ರೆಟಾ ಇದೀಗ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. 

ಸೆಪ್ಟೆಂಬರ್ ತಿಂಗಳಲ್ಲಿ ಕ್ರೆಟಾ 6001 ಕಾರುಗಳು ಮಾರಾಟವಾಗಿದ್ದರೆ, MG ಹೆಕ್ಟರ್ 2000 ಕಾರುಗಳು ಮಾರಾಟವಾಗಿದೆ. ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ 40,000 ಕಾರು ಬುಕಿಂಗ್ ಆಗಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಗರಿಷ್ಠ ಬುಕಿಂಗ್ ಆದ suv ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

ಇದನ್ನೂ ಓದಿ: ಕಿಯಾ ಕಾರು ತುಮಕೂರಿನಿಂದ ಅನಂತಪುರಕ್ಕೆ ಹೋದದ್ದು ಏಕೆ?

9.69 ಲಕ್ಷ ರೂಪಾಯಿಯಿಂದ ಆರಂಭವಾಗೋ(ಎಕ್ಸ್ ಶೋ ರೂಂ ಬೆಲೆ) ಕಿಯಾ ಸೆಲ್ಟೋಸ್, ಈ ಸೆಗ್ಮೆಂಟ್ ಕಾರುಗಳಲ್ಲಿ ಕಡಿಮೆ ಬೆಲೆ ಹಾಗೂ ಆಕರ್ಷಕ ಲುಕ್ ಹೊಂದಿದೆ. ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಇತರ ಕಾರಿಗಿಂತ ಬಲಿಷ್ಠವಾಗಿದೆ.   BS-VI ಎಮಿಶನ್ ಎಂಜಿನ್ ಹೊಂದಿದೆ. 

ಇದನ್ನೂ ಓದಿ: ಕಡಿಮೆ ಬೆಲೆ, ಲಕ್ಸುರಿ ಫೀಚರ್ಸ್; ಕಿಯಾ ಸೆಲ್ಟೋಸ್ ಕಾರು!

3 ವೇರಿಯೆಂಟ್ ಎಂಜಿನ್‌ಗಳು ಸೆಲ್ಟೋಸ್ ಕಾರಿನಲ್ಲಿ ಲಭ್ಯ. 1.5L ಪೆಟ್ರೋಲ್ ಎಂಜಿನ್, 115hp ಪವರ್ ಹಾಗೂ 144 Nm ಪೀಕ್ ಟಾರ್ಕ್, 1.4L ಟರ್ಬೋ ಪೆಟ್ರೋಲ್ 140hp ಪವರ್ ಹಾಗೂ 242Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 1.5 ಡೀಸೆಲ್ ಎಂಜಿನ್ 115hp ಪವರ್ ಹಾಗೂ 250Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 
 

click me!