ಬೆಂಗ್ಳೂರು ಟ್ರಾಫಿಕ್ ಕಿರಿಕಿರಿ: ಜಂಕ್ಷನ್ ಕ್ಲಿಯರ್‌ಗೆ ಕಮಿಷನರ್ ಸಲಹೆ ಕೇಳ್ಯಾರ್ ರೀ!

By Web Desk  |  First Published Oct 5, 2019, 9:55 PM IST

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿಕೊಡಲು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮುಂದಾಗಿದ್ದಾರೆ. ನಗರದ 40 ಜಂಕ್ಷನ್‌ಗಳಲ್ಲಿ ಸುಗಮ ಸಂಚಾರ ಸಾರ್ವಜನಿಕರಲ್ಲಿ ಸಲಹೆ ಕೇಳಿದ್ದಾರೆ. ನೀವು ಅಮೂಲ್ಯ ಸಲಹೆ ನೀಡಿ ಬೆಂಗಳೂರಿನ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಿ.


ಬೆಂಗಳೂರು(ಅ.05): ನಗರದಲ್ಲಿ ಟ್ರಾಫಿಕ್ ಸಮಸ್ಯೆ ಇಂದು ನಿನ್ನೆಯದಲ್ಲ. ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ರಸ್ತೆ ಅಗಲೀಕರಣ, ಫ್ಲೈ ಓವರ್ ನಿರ್ಮಾಣ ಮಾಡಿದರೂ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಇದರ ನಡುವೆ ನಗರದಲ್ಲಿ ಹಲವು ಜಂಕ್ಷನ್‌ಗಳಲ್ಲಿ ಮಿತೀ ಮೀರಿದ ಸಂಚಾರ ದಟ್ಟಣೆ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ತಂದೊಡ್ಡುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ನಗರ ಪೊಲೀಸ್ ಇಲಾಖೆ ಮುಂದಾಗಿದೆ. ಖುದ್ದು ಬೆಂಗಳೂರು ಪೊಲೀಸರ್ ಕಮಿಷನರ್ ಭಾಸ್ಕರ್ ರಾವ್ ಸಾರ್ವಜನಿಕರಲ್ಲೆ ಸಲಹೆ ಕೇಳಿದ್ದಾರೆ.

ಇದನ್ನೂ ಓದಿ: 6 ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!

Tap to resize

Latest Videos

ನಗರದ 40 ಜಂಕ್ಷನ್‌ಗಳನ್ನು ಪಟ್ಟಿ ಮಾಡಿರುವ ಭಾಸ್ಕರ್ ರಾವ್, ಈ ಜಂಕ್ಷನ್‌ಗಳಲ್ಲಿ ಸಂಚಾರ ಸುಗಮವಾಗಿಸಲು ಉಪಯುಕ್ತ ಸಲಹೆ ಕೇಳಿದ್ದಾರೆ. ಕಾರ್ಯಗತಗೊಳಿಸಬಹುದಾದ ಸಲಹೆ ನೀಡಲು ಭಾಸ್ಕರ್ ರಾವ್ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ. ಟ್ವಿಟರ್, ವಾಟ್ಸಾಪ್,ಎಸ್‌ಎಂಎಸ್ ಮೂಲಕ  ಸಾರ್ವಜನಿಕರು ಸಲಹೆ ನೀಡಬಹುದು ಎಂದಿದ್ದಾರೆ.

 

Junctions where we need intervention. Please give action able and doable suggestions.Kindly write, email, WhatsApp, sms or Tweet, we sincerely await your feedback.. pic.twitter.com/9HuXy7ci9b

— Bhaskar Rao IPS (@deepolice12)

ಇದನ್ನೂ ಓದಿ: ಹೊಸ ಟ್ರಾಫಿಕ್ ನಿಯಮ; ಹೊರಬಿತ್ತು ಕುತೂಹಲಕಾರಿ ಮಾಹಿತಿ!

ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ವಾಹನ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ದಿನ ಸರಾಸರಿ 2000 ವಾಹನಗಳು ನೊಂದಾವಣೆಗೊಳ್ಳುತ್ತಿದೆ. ಇನ್ನು 2018ರ ಅಂತ್ಯದಲ್ಲಿ ಬೆಂಗಳೂರಿನಲ್ಲಿ  80 ಲಕ್ಷಕ್ಕೂ ಅಧಿಕ ವಾಹನಗಳು ನೊಂದಾವಣೆಯಾಗಿದೆ. ಇನ್ನು ಇತರ ರಾಜ್ಯದ ವಾಹನ, ಪ್ರವಾಸಿ ವಾಹನ ಸೇರಿದಂತೆ ಒಟ್ಟು 1 ಕೋಟಿ ಸನಿಹದಲ್ಲಿದೆ. ಜುಲೈ 31, 2019ರ ಅಂತ್ಯಕ್ಕೆ ಬೆಂಗಳೂರಿನಲ್ಲಿ 6,491 BMTC ಬಸ್‌ಗಳ ಓಡಾಡುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಒ    ಟ್ಟು 2.10 ಕೋಟಿ ವಾಹನಗಳಿವೆ. 

click me!