ಕಿಯಾ ಸೆಲ್ಟೊಸ್ SUV ಅನಾವರಣ-ಇಲ್ಲಿದೆ ಕಾರಿನ ಬೆಲೆ, ವಿಶೇಷತೆ !

Published : Jun 20, 2019, 05:29 PM IST
ಕಿಯಾ ಸೆಲ್ಟೊಸ್ SUV ಅನಾವರಣ-ಇಲ್ಲಿದೆ ಕಾರಿನ ಬೆಲೆ, ವಿಶೇಷತೆ !

ಸಾರಾಂಶ

ಸೌತ್ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಮೊಟ್ಟ ಮೊದಲಲ ಬಾರಿಗೆ ಕಾರು ಅನಾವರಣ ಮಾಡಿದೆ. SUV ಕಾರಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಿಯಾ ಇದೀಗ  ಸೆಲ್ಟೊಸ್ SUV ಕಾರು ಅನಾವರಣ ಮಾಡಿದೆ. ಈ ಕಾರಿನ  ಬೆಲೆ , ಫೀಚರ್ಸ್ ಹಾಗು ವಿಶೇಷತೆ ಇಲ್ಲಿದೆ.

ನವದೆಹಲಿ(ಜೂ.20): ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಕಾರು ಅನಾವರಣ ಮಾಡಿದೆ. ಕಿಯಾ ಸೆಲ್ಟೊಸ್ SUV ಕಾರನ್ನು ನವದೆಯಲ್ಲಿ ಅನಾವರಣ ಮಾಡಲಾಯಿತು. 2018ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಲಾದ ಕಿಯಾ SP ಕಾನ್ಸೆಪ್ಟ್ ಕಾರು ಇದೀಗ 2019ರಲ್ಲಿ ಅನಾವರಣಗೊಂಡಿದೆ. ಈಗಾಗಲೇ ಹಲವು ಟೀಸರ್ ಬಿಡುಗಡೆ ಮಾಡಿದ್ದ ಕಿಯಾ ಇದೀಗ ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ SUV ಕಾರು ಅನಾವರಣ ಮಾಡಿದೆ. 

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಬಳಕೆಗೆ ಮೋದಿ ಸರ್ಕಾರ ಹೊಸ ಯೋಜನೆ- ರಿಜಿಸ್ಟ್ರೇಶನ್ ಉಚಿತ!

ಆಂಧ್ರಪ್ರದೇಶದ ಅನಂತಪುರ ಘಟಕದಲ್ಲಿ ಕಿಯಾ ಸೆಲ್ಟೊಸ್ ಕಾರು ನಿರ್ಮಾಣವಾಗುತ್ತಿದೆ. BS 6 ಎಮಿಶನ್ ಎಂಜಿನ್ ಹೊಂದಿದೆ.  1.4 ಲೀಟರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್,  1.5-ಲೀಟರ್ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ.  ಇದರಲ್ಲಿ 1.4-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ 7 ಸ್ಪೀಡ್ DCT ಟ್ರಾನ್ಸ್‌ಮಿಶನ್ ಹೊಂದಿದ್ದು, ಇತರ ಎರಡು ವೇರಿಯೆಂಟ್ ಎಂಜಿನ್‌ಗಳು 6 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ.  1.5-ಲೀಟರ್ ಪೆಟ್ರೋಲ್ ಎಂಜಿನ್ ವೇರಿಯೆಂಟ್‌ನಲ್ಲಿ  IVT ಆಯ್ಕೆ ಲಭ್ಯವಿದೆ. ಇನ್ನು 1.5- ಲೀಟರ್ ಡೀಸೆಲ್ ಎಂಜಿನ್ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

ಇದನ್ನೂ ಓದಿ: ರೆನಾಲ್ಟ್ ಟ್ರೈಬರ್ ಕಾರಿನ ಟೀಸರ್ ಬಿಡುಗಡೆ- ದೊಡ್ಡ ಕಾರು, ಕಡಿಮೆ ಬೆಲೆ!

ಕಿಯಾ ಸೆಲ್ಟೊಸ್ ಕಾರು 3 ಡ್ರೈವಿಂಗ್ ಮೂಡ್ ಹೊಂದಿದೆ. ನಾರ್ಮಲ್, ಇಕೋ ಹಾಗೂ ಸ್ಪೂರ್ಟ್. ಇಕೋ  SUV ರೇಂಜ್ ಡ್ರೈವಿಂಗ್ ಅನುಭವ ನೀಡಲಿದೆ. 

ಕಿಯಾ ಸೆಲ್ಟೊಸ್ ಬೆಲೆ
ಕಿಯಾ ಸೆಲ್ಟೊಸ್ ಕಾರಿನ ಅಧೀಕೃತ ಬೆಲೆ ಬಹಿರಂಗವಾಗಿಲ್ಲ. ಆದರೆ 11 ರಿಂದ 17 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. 

ಬಿಡುಗಡೆ ದಿನಾಂಕ
ಸದ್ಯ  ಕಿಯಾ ಸೆಲ್ಟೊಸ್ ಕಾರು ಅನಾವರಣಗೊಂಡಿದೆ. ಈ ವರ್ಷದ ಅಂತ್ಯದಲ್ಲಿ ಈ ಕಾರು ಮಾರುಕಟ್ಟೆ ಪ್ರವೇಶಿಸೋ ಸಾಧ್ಯತೆ ಇದೆ.

ಕಿಯಾ ಸೆಲ್ಟೊಸ್ ಪ್ರತಿಸ್ಪರ್ಧಿ
ಹ್ಯುಂಡೈ ಕ್ರೆಟಾ, ಟಾಟಾ ಹರಿಯರ್, ನಿಸಾನ್ ಕಿಕ್ಸ್ ಹಾಗೂ ಜೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಸೆಲ್ಟೊಸ್ ಕಾರು ಬಿಡುಗಡೆಯಾಗುತ್ತಿದೆ. 

ಕಿಯಾ ಸೆಲ್ಟೊಸ್ Exterior Features
ಟೈಗರ್ ನೋಸ್ ಗ್ರಿಲ್
ಡ್ಯುಯೆಲ್ ಹೆಡ್‌ಲ್ಯಾಂಪ್ಸ್
ವರ್ಟಿಕಲ್ LED ಫಾಗ್ ಲ್ಯಾಂಗ್ಸ್
ಫುಲ್ LED ಟೈಲ್ ಲೈಟ್ಸ್
ಫಾಕ್ಸ್ ಸ್ಕಿಡ್ ಪ್ಲೇಟ್
ಕ್ರಿಸ್ಟಲ್ ಕಟ್ ಅಲೋಯ್ ವೀಲ್ಹ್ 
3D ಮಲ್ಟಿಪ್ಲೇಯರ್ ಸೈಡ್ ಟರ್ನ್ ಇಂಡಿಕೇಟರ್

ಕಿಯಾ ಸೆಲ್ಟೊಸ್  Features
10.25 ಇಂಚಿನ ಟಚ್ ಸ್ಕ್ರೀನ್(ಇನ್ಫೋಟೈನ್‌ಮೆಂಟ್ ಸಿಸ್ಟಮ್)
7 ಇಂಚಿನ LCD ಇನ್ಸ್‌ಟ್ರುಮೆಂಟ್ ಕ್ಲಸ್ಟರ್
8 ಸ್ಪೀಕರ್ ಬೊಸೆ ಸೌಂಡ್ ಸಿಸ್ಟಮ್
USB ಚಾರ್ಜರ್
ನ್ಯಾವಿಗೇಶನ್, ಸುರಕ್ಷತೆ ಮತ್ತು ಭದ್ರತೆ
ರಿಮೂಟ್ ಕಂಟ್ರೋಲ್ ಸೇರಿದಂತೆ 37 ಫೀಚರ್ಸ್

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ