ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಜ್ಜಾಗಿದೆ. 4ಜಿ ಸಿಮ್ ಹೊಂದಿರುವ ಈ ಬೈಕ್ ಹಲವು ವಿಶೇಷತೆ ಹೊಂದಿದೆ. ಜೂನ್ 25 ರಿಂದ ಬುಕಿಂಗ್ ಆರಂಭಗೊಳ್ಳಲಿದೆ. ಅಮೇಜಾನ್ ಮೂಲಕ ನೂತನ ಬೈಕ್ ಬುಕ್ ಮಾಡಿಕೊಳ್ಳಬಹುದು.
ನವದೆಹಲಿ(ಜೂ.19): ಭಾರತದಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗತೊಡಗಿದೆ. ಭಾರತದ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇನ್ನು ಮಾರುತಿ ಸುಜುಕಿ, ಹ್ಯುಂಡೈ ಸೇರಿದಂತೆ ಕಾರು ಕಂಪನಿಗಳು ಕೂಡ ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ. ಇದೀಗ ರಿವೋಲ್ಟ್ ನೂತನ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ: ಹೆಲ್ಮೆಟ್ ಇಲ್ಲದ ರೈಡರ್‌ಗಳನ್ನು ಅಡ್ಡಹಾಕಬೇಡಿ, ದಂಡ ಹಾಕಿ-ಮುಖ್ಯಮಂತ್ರಿ!
undefined
ಜುಲೈ ತಿಂಗಳಲ್ಲಿ ನೂತನ ರಿವೋಲ್ಟ್ ಬೈಕ್ ಬಿಡುಗಡೆಯಾಗಲಿದೆ. ಜೂನ್ 25 ರಿಂದ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಬುಕಿಂಗ್ ಆರಂಭಗೊಳ್ಳಲಿದೆ. ವಿಶೇಷ ಅಂದರೆ ಅಮೇಜಾನ್ ಆನ್‌ಲೈನ್ ಶಾಪಿಂಗ್ ಮೂಲಕ ನೂತನ ಬೈಕ್ ಬುಕ್ ಮಾಡೋ ಅವಕಾಶ ನೀಡಲಾಗಿದೆ. ನೂತನ ಬೈಕ್ ಬೆಲೆ 1.5 ಲಕ್ಷ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಸ್ಕೂಟರ್ ಏರಿ ಅರ್ಧ ದಾರಿ ತಲುಪಿದಾಗ ಹೆಡೆ ಬಿಚ್ಚಿದ ನಾಗಣ್ಣ!
ರಿವೋಲ್ಟ್ ಬೈಕ್ ಹಲವು ವಿಶೇಷತೆ ಹೊಂದಿದೆ. ಈ ಬೈಕ್‌ನಲ್ಲಿ 4ಜಿ ಸಿಮ್ ಹಾಕೋ ಸ್ಲಾಟ್ ಕೂಡ ಇದೆ. ರಿವೋಲ್ಟ್ RV400 ಎಲೆಕ್ಟ್ರಿಕ್ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 156 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 4 ಗಂಟೆ ಸಮಯ ತೆಗೆದುಕೊಳ್ಳಲಿದೆ. ಬ್ಲೂಟೂಥ್ ಮೂಲಕ ಫೋನ್ ಬೈಕ್ ಕೆನೆಕ್ಟ್ ಮಾಡಿಕೊಳ್ಳಬಹುದು.