ಭಾರತದಲ್ಲಿ 2ನೇ ಘಟಕ ತೆರೆಯುತ್ತಿದೆ ಕಿಯಾ ಮೋಟಾರ್ಸ್, ಕರ್ನಾಟಕ ಅಥವಾ ಮಹಾರಾಷ್ಟ್ರ?

By Suvarna NewsFirst Published Apr 25, 2020, 3:57 PM IST
Highlights


ಕಿಯೋ ಮೋಟಾರ್ಸ್ ಭಾರತದಲ್ಲಿ ವ್ಯವಹಾರ ವಿಸ್ತರಣೆಗೆ ಪ್ಲಾನ್ ಹಾಕಿಕೊಂಡಿದೆ. ಸದ್ಯ ಆಂಧ್ರಪ್ರದೇಶದ ಅನಂತಪುರದಲ್ಲಿರುವ ಏಕೈಕ ಘಟಕದಿಂದ ಸಂಪೂರ್ಣ ಭಾರತಕ್ಕೆ ಕಾರುಗಳ ಕಿಯಾ ಕಾರುಗಳ ಸರಬರಾಜು ನಡೆಯುತ್ತಿದೆ. ಅಲ್ಪ ಅವಧಿಯಲ್ಲಿ ಯಶಸ್ಸುಕಂಡಿರುವ ಕಿಯಾ ಇದೀಗ ಕಾರು ಉತ್ಪಾದನೆಗೆ 2ನೇ ಘಟಕ ಆರಂಭಿಸುವ ಸಿದ್ಧತೆ ನಡಿಸಿದೆ. ಕಿಯಾದ 2ನೇ ಘಟಕ ಕರ್ನಾಟಕದಲ್ಲೋ ಅಥವಾ ಮಹಾರಾಷ್ಟ್ರದಲ್ಲೂ? ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.
 

ಅನಂತಪುರಂ(ಏ.25):  ಕಿಯಾ ಮೋಟಾರ್ಸ್ ಭಾರತದಲ್ಲಿ ಹಲವು ಸವಾಲು ಎದುರಿ ಕಾರು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ 8 ತಿಂಗಳಿಗೆ ಲಾಕ್‌ಡೌನ್ ಕಾರಣ ಮತ್ತೆ ಅಡೆ ತಡೆ ಎದುರಿಸುತ್ತಿದೆ. ಆದರೆ 8 ತಿಂಗಳಲ್ಲಿ ಕಿಯಾ 84,903 ಕಾರು ಮಾರಾಟ ಮಾಡಿ ಅತೀ ಕಡಿಮೆ ಅವಧಿಯಲ್ಲಿ ಯಶಸ್ಸು ಸಾಧಿಸಿದೆ. ಕಿಯಾ ಸೆಲ್ಟೋಸ್ ಕಾರು ಬಿಡುಗಡೆ ಮಾಡಿದ ಬೆನ್ನಲ್ಲೇ ಕಿಯಾ ಕಾರ್ನಿವಲ್ MPV ಕಾರನ್ನು ಬಿಡುಗಡೆ ಮಾಡಿತು. ಈ ಮೂಲಕ ಕಿಯಾ ಮೋಟಾರ್ಸ್ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳತೊಡಗಿದೆ.

ಬೆಂಗಳೂರಿನಲ್ಲಿ ದಾಖಲೆ ಬರೆದ ಕಿಯಾ ಕಾರ್ನಿವಲ್ ಕಾರು!

ಸೌತ್ ಕೊರಿಯಾದ 2ನೇ ಅತೀ ದೊಡ್ಡ ಆಟೋಮೇಕರ್ ಕಿಯಾ ಸದ್ಯ ಭಾರತದಲ್ಲಿ ಏಕೈಕ ಉತ್ಪಾದನ ಘಟಕ ಹೊಂದಿದೆ. ಆಂಧ್ರ ಪ್ರದೇಶದ ಅನಂತಪುರದಲ್ಲಿ ಅತೀ ದೊಡ್ಡ ಹಾಗೂ ಅತ್ಯಾಧುನಿಕ ಘಟಕ ನಿರ್ಮಿಸಿದೆ. ಕೊರೋನಾ ವೈರಸ್ ಕಾರು ಚೀನಾದಲ್ಲಿರುವ ಬಿಡಿ ಭಾಗಗಳ ಘಟಕ ಸಂಪೂರ್ಣ ಮುಚ್ಚಲಾಗಿದೆ. ಇದು ತೀವ್ರ ಹೊಡೆತ ನೀಡಿದೆ. ಹೀಗಾಗಿ ಚೀನಾದಲ್ಲಿನ ಘಟಕವನ್ನು ಭಾರತಕ್ಕೆ ಸ್ಥಳಾಂತರ ಮಾಡೋ ಮೂಲಕ  ಭಾರತದಲ್ಲಿ ವ್ಯವಹಾರ ವಿಸ್ತರಿಸಲು ಕಿಯಾ ಮೋಟಾರ್ಸ್ ಉದ್ದೇಶಿಸಿದೆ. 

ಇಲ್ಲಾ,ಇಲ್ಲಾ, ಇಲ್ಲಾ...ನಾವ್ ಆಂಧ್ರ ಬಿಟ್ಟು ಹೋಗಲ್ಲ; ಕಿಯಾ ಸ್ಪಷ್ಟನೆ!

2ನೇ ಘಟಕಕ್ಕೆ ಕಿಯಾ ಮೋಟಾರ್ಸ್ ಮಹಾರಾಷ್ಟ್ರವನ್ನು ಬಹುತೇಕ ಖಚಿತ ಪಡಿಸಿದೆ. ಇದಕ್ಕೆ ಕಾರಣವಿದೆ. ಕಿಯಾ ಮೋಟಾರ್ಸ್ ಭಾರತದಲ್ಲಿ ಕಾರು ಬಿಡುಗಡೆ ಮಾಡಲು 2014ರಲ್ಲಿ ಮುಂದಾಗಿತ್ತು. 2015ರಲ್ಲಿ ಹಿಂದಿನ ಕರ್ನಾಟಕ ಸರ್ಕಾರವನ್ನು ಕಿಯಾ ಸಂಪರ್ಕಿಸಿತ್ತು. ತುಮಕೂರಿನಲ್ಲಿ ಕಿಯಾ ಕಾರು ಘಟಕ ತಲೆ ಎತ್ತಲು ಪ್ಲಾನ್ ಮಾಡಿತ್ತು. ಆದರೆ ಸರ್ಕಾದಿಂದ ಸಕಾರಾತ್ಮಕ ಸ್ಪಂದನೆ ಸಿಗದ ಕಾರಣ ಪಕ್ಕದ ಆಂಧ್ರ ಪ್ರದೇಶಕ್ಕೆ ತೆರಳಿ ಅನಂತಪುರದಲ್ಲಿ ಘಟಕ ಸ್ಥಾಪಿಸಿತು.

ಹೀಗಾಗಿ ಕರ್ನಾಟಕದಲ್ಲಿ ಘಟಕ ಸ್ಥಾಪಿಸಲು ಕಿಯಾಗೆ ಸದ್ಯ ಯಾವುದೇ ಉತ್ಸಾಹವಿಲ್ಲ. ಅತ್ತ ಮಹಾರಾಷ್ಟ್ರದಿಂದ ದೇಶದ ಎಲ್ಲಾ ಭಾಗಗಳಿಗೆ ಜೊತೆ ವಿದೇಶಗಳಿಗೆ ರಫ್ತು ಮಾಡಲು ಅನೂಕೂಲವಾಗಲಿದೆ. ವಿದೇಶಗಳಿಗೆ ಸಮುದ್ರ ಮಾರ್ಗ ಮೂಲಕ ಕಾರುಗಳ ರವಾನೆ ಸುಲಭವಾಗಲಿದೆ. ಹೀಗಾಗಿ ಕಿಯಾ ಕಾರು ಇದೀಗ  2ನೇ ಘಟಕಕ್ಕೆ ಮಹಾರಾಷ್ಟ್ರವೇ ಸೂಕ್ತ ಎಂದಿದೆ.  ಕೊರೋನಾ ವೈರಸ್ ಕಾರಣ 2021ರಲ್ಲಿ ಆರಂಭವಾಗಬೇಕಿದ್ದ 2ನೇ ಘಟಕದ ಕಾರ್ಯಗಳು ಇದೀಗ 2022ರಲ್ಲಿ ಆರಂಭವಾಗಲಿದೆ. 

click me!