
ಮುಂಬೈ(ಏ.24): ಮಹೀಂದ್ರ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರ ಈಗಾಗಲೇ ದೇಶದ ನಾಗರೀಕರ ವಿನೂತನ ಐಡಿಯಾ, ಸಹಾಯ ಸೇರಿದಂತೆ ಹಲವು ವಿಚಾರಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬೆಳಕು ಚೆಲ್ಲಿದ್ದಾರೆ. ಇದೀಗ ಆನಂದ್ ಮಹೀಂದ್ರ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಜೀವನ ನಿರ್ವಹಣೆಗಾಗಿ ಮಾಡುವ ಹೊಸ ಐಡಿಯಾದ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸ್ಕೂಟರ್‌ನಲ್ಲಿ ತಾಯಿ ಸುತ್ತಾಡಿಸಿದ ಮೈಸೂರಿಗನಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!.
ಇ ರಿಕ್ಷಾ ಚಾಲಕನೋರ್ವ ತನ್ನ ರಿಕ್ಷಾದಲ್ಲಿ ಪ್ರಯಾಣ ಮಾಡುವವರಿಗೆ ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ವಿನೂತನವಾಗಿ ವಿನ್ಯಾಸ ಮಾಡಿಸಿದ್ದಾರೆ. ರಿಕ್ಷಾದಲ್ಲಿ 4 ಕಂಪಾರ್ಟ್‌ಮೆಂಟ್ ಮಾಡಿರುವ ಚಾಲಕ, ಒಬ್ಬರಿಗೊಬ್ಬರು ಅಂಟಿಕೊಂಡು ಕೂರುವ ಅಗತ್ಯತೆ ಇಲ್ಲಿಲ್ಲ. ಇಷ್ಟೇ ಅಲ್ಲ ಪ್ರಯಾಣಿಕರು ಯಾವುದೇ ಆತಂಕವಿಲ್ಲದೆ ಇ ರಿಕ್ಷಾದಲ್ಲಿ ಪ್ರಯಾಣ ಮಾಡಬಹುದು.
ಅಪರೂಪದ ಫೋಟೋಗೆ ಕ್ಯಾಪ್ಶನ್ ಸ್ಪರ್ಧೆ; ಉತ್ತರಕ್ಕೆ ಸುಸ್ತಾದ ಮಹೀಂದ್ರ!
ಈ ವಿಡಿಯೋ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರ, ಸಂದರ್ಭಕ್ಕೆ ತಕ್ಕಂತೆ ಭಾರತೀಯರು ಹೊಂದಿಕೊಳ್ಳುತ್ತಾರೆ. ಜೊತೆಗೆ ಹೊಸ ಹೊಸ ಆವಿಷ್ಕಾರದ ಮೂಲಕ ಬದುಕು ಸಾಗಿಸುತ್ತಾರೆ. ಈತನ ವಿನೂತನ ಐಡಿಯಾವೇ ಇದಕ್ಕೆ ಸಾಕ್ಷಿ. ನಮಗೆ ಈತ ಬೇಕು. ಎಲ್ಲಿದ್ದರೂ ಹುಡುಕಿ, ನಮ್ಮ ಗ್ರಾಮೀಣ ಅಭಿವೃದ್ದಿ ವಿಭಾಗದ ಸಲಹಾಗಾರನಾಗಿ ನೇಮಿಸಿ ಎಂದು ಮಹೀಂದ್ರ ಗ್ರೂಪ್ ಆಫ್ ಕಂಪನಿಗ ಸೂಚಿಸಿದ್ದಾರೆ.
ಸಾಮಾನ್ಯವಾಗಿ ಇ ರಿಕ್ಷಾದಲ್ಲಿ ಇಬ್ಬರಿಗೆ ಕುಳಿತುಕೊಳ್ಳಲು ಜಾಗವಿದೆ. ಆದರೆ ಈ ಚಾಲಕ 4 ಮಂದಿ ಯಾವುದೇ ಅಪಾಯವಿಲ್ಲದೆ ಕುಳಿತುಕೊಂಡು ಪ್ರಯಾಣ ಮಾಡುವಂತೆ ಡಿಸೈನ್ ಮಾಡಿಸಿದ್ದಾನೆ. ಇದೀಗ ಕೊರೋನಾ ಇ ರಿಕ್ಷಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ.