ಛೀಮಾರಿ ಹಾಕಿಸಿಕೊಂಡ್ರೂ ಬುದ್ದಿ ಕಲಿತಿಲ್ಲ ಚೀನಾ, ಟಾಟಾ ನೆಕ್ಸಾನ್ ಡಿಸೈನ್ ಕಾಪಿ!

By Suvarna NewsFirst Published Apr 24, 2020, 3:31 PM IST
Highlights

ಒರಿಜನಲ್ ಉತ್ಪನ್ನಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಚೀನಾ ಡೂಪ್ಲಿಕೇಟ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ವಿಶ್ವದ ಹಲವು ಕಾರುಗಳ ಡಿಸೈನ್ ಕದ್ದು ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿರುವ ಚೀನಾ ತನ್ನು ಬುದ್ದಿ ಮಾತ್ರ ಬಿಟ್ಟಿಲ್ಲ. ಚೀನಾ ಎಲ್ಲಾ ಆಟೋಮೊಬೈಲ್ ಕಂಪನಿಗಳ ಮೇಲೆ ಡಿಸೈನ್ ಕದ್ದ ಕೇಸ್‌ಗಳಿವೆ. ಇದೀಗ ಚೀನಾದ ಪ್ರತಿಷ್ಠಿತ ಆಟೋಮೊಬೈಲ್ ಕಂಪನಿ ಭಾರತದ ಹೆಮ್ಮೆಯ ಟಾಟಾ ಕಾರಿನ ವಿನ್ಯಾಸ ಕದ್ದು ಮುಖಭಂಗಕ್ಕೆ ಗುರಿಯಾಗಿದೆ.

ಚೀನಾ(ಏ.24):  ಬ್ರಾಂಡೆಡ್ ಉತ್ಪನ್ನಗಳ ತಲೆ ಮೇಲೆ ಹೊಡೆದ ಹಾಗೆ ಚೀನಾ ಉತ್ಪನ್ನಗಳು ಅದೇ ಡಿಸೈನ್, ಎಲ್ಲೂ ಅನುಮಾನ ಬರದ ರೀತಿಯಲ್ಲಿ ಹಾಗೂ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿಶ್ವದ ಅದೆಷ್ಟು ಯಶಸ್ವಿ ಬ್ರಾಂಡೆಡ್ ಉತ್ಪನ್ನಗಳಿವೆಯೋ ಅಷ್ಟೇ ಡೂಪ್ಲಿಕೇಟ್ ಉತ್ಪನ್ನಗಳನ್ನು ಚೀನಾ ತಯಾರು ಮಾಡುತ್ತದೆ. ಇದು ಚೀನಾ ಆಟೋಮೊಬೈಲ್ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಚೀನಾ ಆಟೋಮೊಬೈಲ್ ಕಂಪನಿಗಳು ಇದುವರೆಗೂ ತಾವೇ ಡಿಸೈನ್ ಮಾಡಿ ಕಾರು ಬಿಡುಗಡೆ ಮಾಡಿದ ಉದಾಹರಣೆ ಇಲ್ಲ. ಇತರ ಯಶಸ್ವಿ ಕಾರುಗಳ ಡಿಸೈನ್ ಕದ್ದು ಅಥವಾ ಒಂದೆರಡು ಕಾರುಗಳ ಡಿಸೈನ್ ಕದ್ದು ಹೊಸ ಕಾರು ತಯಾರಿಸುತ್ತಾರೆ. ಇದೀಗ ಮತ್ತೆ ಚೀನಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಖಭಂಗ ಅನುಭವಿಸಿದೆ.

ಹ್ಯುಂಡೈ, MG ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!

ಟಾಟಾ ನೆಕ್ಸಾನ್ ಕಾರು ಅತ್ಯಂತ ಯಶಸ್ವಿ ಕಾರು. ಭದ್ರತೆ, ಡಿಸೈನ್, ಬೆಲೆ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಟಾಟಾ ನೆಕ್ಸಾನ್ ಕಾರು ಭಾರತೀಯರ ಹಾಗೂ ವಿಶ್ವದ ಗಮನಸೆಳೆದಿದೆ. ಇದೀಗ ಇದೇ ಟಾಟಾ ನೆಕ್ಸಾನ್ ಕಾರಿನ ಡೈಸನ್ ಕಾಪಿ ಮಾಡಿರುವ ಚೀನಾದ ಗೀಲೆ ಕಾಂಡಿ ಆಟೋಮೊಬೈಲ್ ಸಂಸ್ಥೆಯ ಸಹೋದರ ಸಂಸ್ಥೆಯಾಗಿರುವ ಫೆಂಗ್‌ಶೆಂಗ್ ಆಟೋಮೊಬೈಲ್ ಟಾಟಾ ನೆಕ್ಸಾನ್ ಕಾರಿನ ಡಿಸೈನ್ ಕಾಪಿ ಮಾಡಿ ಮ್ಯಾಪಲ್ 30x ಕಾರು ಬಿಡುಗಡೆ ಮಾಡಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಡಿಸೈನ್ ಹಾಗೂ ನೆಕ್ಸಾನ್ ಫ್ಯುಯೆಲ್ ಕಾರಿನ ಡಿಸೈನ್ ಕದ್ದು ಮ್ಯಾಪಲ್ ಕಾರು ಬಿಡುಗಡೆ ಮಾಡಿದೆ. ಮುಂಭಾಗದ ಗ್ರಿಲ್ ಹಾಗೂ ಹೆಡ್‌ಲ್ಯಾಂಪ್ಸ್ ಕೊಂಚ ಬದಲಾಯಿಸಿದೆ. ಈ ಮೂಲಕ ಯಾರಿಗೂ ಅನುಮಾನ ಬರದಂತೆ ನೋಡಿಕೊಳ್ಳುವ ಪ್ರಯತ್ನ ನಡೆಸಿದೆ. ಇನ್ನುಳಿದಂತೆ ಯಾವುದೇ ಬದಲಾವಣೆ ಮಾಡಿಲ್ಲ. ಹಿಂಭಾದಲ್ಲಿ ಟೈಲ್ ಲ್ಯಾಂಪ್ ಹಾಗೂ ಬಂಪರ್‌ನಲ್ಲಿ ತಮ್ಮತನ ಇದೆ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಕೂಡ ಕೈಕೊಟ್ಟಿದೆ.

ಟಾಟಾ ಮೋಟಾರ್ಸ್ ಮಾಲೀಕತ್ವದ ರೇಂಜ್ ರೋವರ್ ಕಾರಿನ ಡೈಸನ್ ಕದ್ದು ಕಾರು ಬಿಡುಗಡೆ ಮಾಡಿದ ಚೀನಾ ಕಂಪನಿ ಮೇಲೆ ಟಾಟಾ ಕೇಸ್ ದಾಖಲಿಸಿದೆ. ಈಗಾಗಲೇ ಚೀನಾ ಆಟೋಮೊಬೈಲ್ ಕಂಪನಿಗಳಿಗೆ ಕೋರ್ಟ್ ಛೀಮಾರಿ ಹಾಕಿದೆ. ಇಷ್ಟೇ ಅಲ್ಲ ನಷ್ಟಪರಿಹಾರ ನೀಡುವಂತೆ ಸೂಚಿಸಿದೆ. ಇಷ್ಟಾದರೂ ಚೀನಾ ಕದಿಯುವುದನ್ನು ಇನ್ನೂ ಬಿಟ್ಟಿಲ್ಲ. 

ಮ್ಯಾಪಲ್ ಕೂಡ ಎಲೆಕ್ಟ್ರಿಕ್ ಕಾರಾಗಿದ್ದು ಒಂದು ಸಂಪೂರ್ಣ ಚಾರ್ಜ್‌ಗೆ 306 ಕಿ.ಮೀ ಮೈಲೇಜ್ ನೀಡಲಿದೆ. ಭಾರತದ ಟಾಟಾ ನೆಕ್ಸಾನ್ ಒಂದು ಸಂಪೂರ್ಣ ಚಾರ್ಜ್‌ಗೆ 312 ಕಿ.ಮೀ ಮೈಲೇಜ್ ನೀಡಲಿದೆ. 

click me!