65 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ ಸರ್ಕಾರ!

Suvarna News   | Asianet News
Published : Jun 19, 2020, 04:06 PM ISTUpdated : Jun 19, 2020, 04:07 PM IST
65 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ ಸರ್ಕಾರ!

ಸಾರಾಂಶ

ಚೀನಾದಿಂದ ಬಂದ ಕೊರೋನಾ ವರಸ್ ಹಾಗೂ ಲಡಾಖ್‌ನಲ್ಲಿ ಚೀನಾ ಆಕ್ರಮಣದಿಂದ ಇದೀಗ ಭಾರತದ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ಸಿಗುತ್ತಿದೆ.  ಇದರ ಬೆನ್ನಲ್ಲೇ ಸರ್ಕಾರಗಳು ಭಾರತದ ಉತ್ಪನ್ನಗಳನ್ನೇ ಬಳಸಲು ನಿರ್ಧರಿಸಿದೆ. ಇದೀಗ ಸರ್ಕಾರ ಇಲಾಖೆಗಳಲ್ಲಿನ ವಿದೇಶಿ ಕಾರುಗಳ ಬದಲು ಭಾರತದ ಕಾರು ಬಳಸಲು ನಿರ್ಧರಿಸಿದೆ. ಇದರ ಮೊದಲ ಅಂಗವಾಗಿ 65 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದೆ. 

ಕೇರಳ(ಜೂ.19): ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಲಭ್ಯವಿರುವ ಕೈಗೆಟುವು ದರ ಹಾಗೂ ಅತ್ಯುತ್ತಮ ಎಲೆಕ್ಟ್ರಿಕ್ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಕೇರಳ ಸರ್ಕಾರ 65 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದೆ. ಕೇರಳದ ಮೋಟಾರು ವಾಹನ ಇಲಾಖೆಗೆ(MVD) 65 ಕಾರುಗಳನ್ನು ನೀಡಲು ಸರ್ಕಾರ ಮುಂದಾಗಿದೆ. 

300 ರೂಪಾಯಿಗೆ 312 ಕಿ.ಮೀ ಮೈಲೇಜ್,ಇದು ಟಾಟಾ ನೆಕ್ಸಾನ್EV ಕಾರು ಬಾರು!

ಮೋಹಾರು ವಾಹನ ಇಲಾಖೆಗೆ ಬರಲಿರುವ ನೂತನ ಕಾರುಗಳಿಗೆ ಹೆಚ್ಚುವರಿ ಫೀಚರ್ಸ್ ಸೇರಿಸಲಾಗುತ್ತದೆ. ಸೈರನ್, ರಾಡರ್, ಸ್ಪೀಡ್ ಕ್ಯಾಮರಾ ಸೇರಿದಂತೆ ಹಲವು ಫೀಚರ್ಸ್ ಸೇರಿಕೊಳ್ಳಲಿದೆ. ದಿನದ 24 ಗಂಟೆಯೂ ಸಾರ್ವಜನಿಕರ ಸುರಕ್ಷತೆಗೆ ಲಭ್ಯವಾಗಲಿದೆ ಎಂದು ಮೋಟಾರು ವಾಹನ ಇಲಾಖೆ ಹೇಳಿದೆ.

ಹ್ಯುಂಡೈ, MG ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!.

ಈಗಾಗಲೇ ಕೇರಳ ಮೋಟಾರು ವಾಹನ ಇಲಾಖೆಯ ನೂತನ ಕಾರುಗಳನ್ನು ಚಾರ್ಜಿಂಗ್ ಮಾಡುಲ ಸ್ಟೇಶನ್ ಅಳವಡಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ಇದು ಕೇರಳ ಇಲಾಖೆ ಕಾರುಗಳಿಗೆ ಮಾತ್ರ ಲಭ್ಯವಾಗಲಿದೆ. ಕ್ರಮೇಣ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಟಾಟಾ ನೆಕ್ಸಾನ್ ಕಾರಿನ ಆರಂಭಿಕ ಬೆಲೆ 13.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ), ಇನ್ನು ಗರಿಷ್ಠ ಬೆಲೆ 15.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಫಾಸ್ಟ್ ಚಾರ್ಜಿಂಗ್ ಮೂಲಕ 50 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಸಂಪೂರ್ಣ ಚಾರ್ಜ್ ಮಾಡಿದರೆ 312 ಕಿ.ಮೀ ಮೈಲೇಜ್ ಸಿಗಲಿದೆ. 
 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ