ಬಜಾಜ್ ಆಟೋ ಲಿಮಿಟೆಡ್ ಇದೀಗ ತನ್ನ ಖ್ಯಾತ ಪಲ್ಸರ್ ಬೈಕ್ ಮತ್ತಷ್ಟು ಆಕರ್ಷಕ ಮಾಡಿ ಬಿಡುಗಡೆ ಮಾಡಿದೆ. 125, ಸ್ಪ್ಲಿ ಟ್ ಸೀಟ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಶೇಡ್ ಕಲರ್ ಸೇರಿದಂತೆ ಹಲವು ವಿಶೇಷತೆಗಳನ್ನು ಈ ಬೈಕ್ ಹೊಂದಿದೆ. ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಮುಂಬೈ(ಜೂ.18): ಬಜಾಜ್ ಪಲ್ಸರ್ ಭಾರತದಲ್ಲಿ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಕಳೆದ ಆಗಸ್ಟ್‌ನಲ್ಲಿ ಆಧನಿಕ ತಂತ್ರಜ್ಞಾನದೊಂದಿದೆ ಬಜಾಜ್ 125 ಪಲ್ಸರ್ ಬೈಕ್ ಬಿಡುಗಡೆ ಮಾಡಲಾಗಿತ್ತು. ಇದೀಗ ಅಪ್‌ಗ್ರೇಡ್, BS6, ಹಾಗೂ ಹೆಚ್ಚು ಇಂಧನ ಕ್ಷಮತೆ ಹೊಂದಿರುವ ನೂತನ ಪಲ್ಸರ್ 125 ಬಿಡುಗಡೆ ಮಾಡಲಾಗಿದೆ. ಪರ್ಫಾಮೆನ್ಸ್, ವಿನ್ಯಾಸ, ಆಕರ್ಷಕ ಶೈಲಿ, ಸ್ಲಿಟ್ ಸೀಟ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ.
ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಜಾಜ್ ಡೀಲರ್‌ಶಿಪ್, ಸರ್ವೀಸ್ ಸೆಂಟರ್ ಆರಂಭ!
ಬಜಾಜ್ ಪಲ್ಸರ್ 125 ಬೈಕ್ ಬೆಲೆ 79,091 ರೂಪಾಯಿ(ಎಕ್ಸ್ ಶೋ ರೂಂ). ಡಿಸ್ಕ್ ಬ್ರೇಕ್ ಹಾಗೂ ಡ್ರಂ ಬ್ರೇಕ್ ಆಯ್ಕೆಗಳು ಲಭ್ಯವಿದೆ. ಡ್ರಂ ಬ್ರೇಕ್ ಬೈಕ್‌ಗಿಂತ ಡಿಸ್ಕ್ ಬ್ರೇಕ್ ಬೈಕ್ 8,096 ರೂಪಾಯಿ ಹೆಚ್ಚಾಗಲಿದೆ. 125 ಸ್ಪ್ಲಿಟ್ ಸೀಟ್ ಬೈಕ್ ನಿಯೋನ್ ಗ್ರೀನ್, ಬ್ಲಾಕ್ ರೆಡ್, ಹಾಗೂ ಬ್ಲಾಕ್ ಸಿಲ್ವರ್ ಕಲರ್‌ಗಳಲ್ಲಿ ಲಭ್ಯವಿದೆ.
ಬಿಡುಗಡೆಯಾಗಲಿದೆ ಬಜಾಜ್-KTM ಎಲೆಕ್ಟ್ರಿಕ್ ಮೊಪೆಡ್!...
ವೋಲ್ಫ್ ಹೆಡ್‌ಲ್ಯಾಂಪ್ಸ್, ಕ್ಲಸ್ಟರ್ ಹಾಗೂ ಟ್ವಿನ್ ಪೈಲೆಟ್ ಲ್ಯಾಂಪ್ಸ್, ಸ್ಟ್ರಿಪ್ LED ಟೈಲ್ ಲ್ಯಾಂಪ್ಸ್, ತ್ರಿಡಿ ಲೋಗೋ, 311 mm ಟೆಲಿಸ್ಕೋಪಿಕ್ ಫೋರ್ಕ್, ಟ್ವಿನ್ ಗ್ಸಾಸ್ ಶಾಕ್‌ಆಬ್ಸರ್ಸ್, 17 ಇಂಚಿನ್ ಚಕ್ರ, ಫ್ರಂಟ್ 240 mm ಡಿಸ್ಕ್ ಹಾಗೂ ರೇರ್ 130 mm ಡ್ರಂ ಬ್ರೇಕ್ ಹೊಂದಿದೆ.
ಪಲ್ಸರ್ 125 ಸ್ಪ್ಲಿಟ್ ಬೈಕ್ 125 cc, BS6 ಹಾಗೂ DTS-i ಎಂಜಿನ್ ಹೊಂದಿದೆ. 11.6 bhp ಪವರ್ ಹಾಗೂ 10.8 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಗೇರ್ ಬಾಕ್ಸ್ ಹೊಂದಿದೆ. ಬೈಕ್ 142 kg ತೂಕ ಹೊಂದಿದೆ.