ದೇಶಾದ್ಯಂತ ರಾಯಲ್ ಎನ್‌ಫೀಲ್ಡ್ ಎಲ್ಲಾ ಶೋ ರೂಂಗಳು, ಮಾರಾಟ ಮಳಿಗೆ, ಕಚೇರಿ ಆರಂಭಗೊಂಡಿದೆ. ಇದರೊಂದಿಗೆ ಗ್ರಾಹಕರಿಗೆ ಡಿಜಿಟಲ್ ಸೇವೆಯನ್ನು ಪರಿಚಯಿಸಿದೆ. ಕೇವಲ 3 ಟಚ್ ಮೂಲಕ ರಾಯಲ್ ಎನ್‌ಫೀಲ್ಡ್ ಬೈಕ್ ಮನೆಗೆ ಬರಲಿದೆ.
ಬೆಂಗಳೂರು(ಜೂ.15): ಭಾರತದಲ್ಲಿ ಜನಪ್ರಿಯವಾಗಿರುವ ರಾಯಲ್ ಎನ್‌ಫೀಲ್ಡ್ ಮತ್ತೆ ಆರಂಭಗೊಂಡಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಮಾರ್ಚ್ 22 ರಿಂದ ರಾಯಲ್ ಎನ್‌ಫೀಲ್ಡ್ ರೇಟಲ್ ಶೋ ರೂಂ ಮುಚ್ಚಲಾಗಿತ್ತು. ಮೇ 5 ರಿಂದ ರಾಯಲ್ ಎನ್‌ಫೀಲ್ಡ್ ಹಂತ ಹಂತವಾಗಿ ಕಾರ್ಯಚರಣೆ ಪುನರ್ ಆರಂಭಿಸಿದೆ. ಬೆಂಗಳೂರಿನಲ್ಲಿರುವ 20 ಮಳಿಗೆಗಳು ಮತ್ತು 1 ಸ್ಟುಡಿಯೋ ಸ್ಟೋರ್‌ನೊಂದಿಗೆ ಪ್ರಾರಂಭವಾಗಿದೆ.
BS6 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಬುಲೆಟ್ 350 ಬೈಕ್ ಬೆಲೆ ಹೆಚ್ಚಳ!
undefined
ಭಾರತದಾದ್ಯಂತ 850ಕ್ಕೂ ಹೆಚ್ಚು ಮಳಿಗೆಗಳು ಮತ್ತು 425 ಸ್ಟುಡಿಯೊ ಮಳಿಗೆಗಳು ಮಾರಾಟ ಮತ್ತು ಸರ್ವೀಸ್ ನೀಡುತ್ತಿದೆ. ಬೆಂಗಳೂರಿನಲ್ಲಿ 20 ಮಳಿಗೆಗಳು ಮತ್ತು 1 ಸ್ಟೋಡಿಯೋ ಸ್ಟೋರ್‌ರೂಂ ಮತ್ತೆ ಆರಂಭಗೊಂಡಿದೆ. ಇನ್ನು ಕರ್ನಾಟಕದಲ್ಲಿ 30 ಸ್ಟೋರ್ ಹಾಗೂ 17 ಸ್ಟೂಡಿಯೋ ಸ್ಟೋರ್ಸ್ ಕಾರ್ಯರಂಭಗೊಂಡಿದೆ.
ನೂತನ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್, ಬೆಲೆ 1.21 ಲಕ್ಷ ರೂ!..
ಪುನರ್ ಆರಂಭಗೊಂಡಿರುವ ಬಹುತೇಕ ಸ್ಟೋರ್ ರೂಂ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿೆ. ಕೆಲ ನಗರಗಳಲ್ಲಿನ ಮಳಿಗೆಗಳು ಸ್ಥಳೀಯ ಸಂಸ್ಥೆಗಳ ಮಾರ್ಗದರ್ಶಿಗಳ ಸೂಚನೆಯಂತೆ ಭಾಗಶಃ ಆರಂಭಿಸಲಾಗಿದೆ. ಗ್ರಾಹಕರಿಗೆ ಅನೂಕೂಲವಾಗುವಂತೆ ರಾಯಲ್ ಎನ್‌ಫೀಲ್ಡ್ ಹಲವಾರ ಉಪಕ್ರಮಗಳನ್ನು ಆರಂಭಿಸಿದೆ.
ಕೊರೋನಾ ವೈರಸ್ ಕಾರಣ ಸಾಮಾಜಿಕ ಅಂತರ ಅಗತ್ಯ. ಹೀಗಾಗಿ ಗ್ರಾಹಕರಿಗೆ ಡಿಜಿಟಲ್ ಸೇವೆ ನೀಡಲಾಗಿದೆ. ಗ್ರಾಹಕರ ಜೊತೆ ನಿರಂತರ ಸಂಪರ್ಕ, ಸಂವಹನ, ಉನ್ನತ ಕಾರ್ಯಕ್ಷಮತೆ ಮತ್ತು ಬಹಳ ಮುಖ್ಯವಾಗಿ ಅಸಾಧಾರಣ ಗ್ರಾಹಕ ಅನುಭವ ನೀಡುವ ಹೊಸ ಡಿಜಿಟಲ್ ಫೀಚರ್ಸ್ ಪರಿಚಯಿಸುವ ಗುರಿ ಹೊಂದಿದ್ದೇವೆ ಎಂದು ಚೀಫ್ ಕಮರ್ಷಿಯಲ್ ಆಫೀಸರ್ ಲಲಿತ್ ಮಲಿಕ್ ಹೇಳಿದರು.
ಗ್ರಾಹಕರು ಈಗ ಅವರ ನೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕನ್ನು ಶೋ ರೂಂ ಪ್ರವೇಶಿಸದೆ ಮೂರು ಸರಳ ಹೆಜ್ಜೆಗಳಲ್ಲಿ ಮನೆಗೆ ತರಬಹುದು. ರಾಯಲ್ ಎನ್‍ಫೀಲ್ಡ್ ವೆಬ್‍ಸೈಟ್‍ನಲ್ಲಿ ಬೈಕನ್ನು ಆನ್‍ಲೈನ್ ಡಿಸ್ಕವರಿ ಮಾಡಿ ನಂತರ ಹೋಮ್ ಟೆಸ್ಟ್ ಡ್ರೈವ್ ಪಡೆಯಿರಿ ಮತ್ತು ವೆಬ್‍ಸೈಟ್‍ನಲ್ಲಿಯೇ ಆನ್‍ಲೈನ್ ಬುಕಿಂಗ್ ಸೌಲಭ್ಯ ದೊರೆಯುತ್ತದೆ. ಗ್ರಾಹಕರು ಮೋಟಾರ್ ಸೈಕಲ್ ವಿಧಗಳು ಮತ್ತು ಬಣ್ಣದ ಆಯ್ಕೆಗಳ ಗ್ಯಾಲರಿಯನ್ನು ವೀಕ್ಷಿಸಬಹುದು, ಮೋಟಾರ್ ಸೈಕಲ್ ಕಾರ್ಯಕ್ಷಮತೆ ಮತ್ತು ಮತ್ತಷ್ಟು ಆಕರ್ಷಿಕವಾಗಿ ಕಾಣಿಸಲು ಅಧಿಕೃತ ಅಕ್ಸೆಸರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಬೈಕ್ ಆಯ್ಕೆ ಮಾಡಿದ ಬಳಿಕ ಗ್ರಾಹಕರು ಹತ್ತಿರದ ಡೀಲರ್‌ರೊಂದಿಗೆ ಸಂಪರ್ಕಿಸಿ ರಾಯಲ್ ಎನ್‍ಫೀಲ್ಡ್ ಡೀಲರ್‌ಶಿಪ್ ಲಭ್ಯವಿರುವ ಇ-ಪೇಮೆಂಟ್ ಆಯ್ಕೆಗಳ ಮೂಲಕ ಪಾವತಿಯನ್ನು ಪೂರ್ಣಗೊಳಿಸಬಹುದು. ಅಷ್ಟೇ ವೇಗದಲ್ಲಿ ಡೀಲರ್ ಬೈಕ್‌ನ್ನು ಗ್ರಾಹಕರ ಮನೆಬಾಗಿಲಿಗೆ ಪೂರೈಸುತ್ತಾರೆ.