ಕೊರೋನಾದಿಂದ ಹಳ್ಳಿಯತ್ತ ಜನ, ಕಾರು ಬೈಕ್‌ಗಿಂತ ಟ್ರಾಕ್ಟರ್ ಖರೀದಿಯಲ್ಲಿ ಏರಿಕೆ!

By Suvarna News  |  First Published Jul 17, 2020, 8:16 PM IST

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಹೊಡೆತದಿಂದ ಭಾರತೀಯ ಆಟೋಮೊಬೈಲ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಆತಂಕ ಎದುರಾಗುತ್ತಿದೆ. ಕೊರೋನಾ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಸಾವಿನ ಸಂಖ್ಯೆ ಏರುತ್ತಿದೆ. ಹೀಗಾಗಿ ನಗರಗಳು ಮತ್ತೆ ಲಾಕ್‌ಡೌನ್ ಆಗುತ್ತಿದೆ. ಜನ ಹಳ್ಳಿಯತ್ತ ಮುಖ ಮಾಡುತ್ತಿದ್ದಾರೆ. ಜೂನ್ ತಿಂಗಳಲ್ಲಿ ಬಿಡುಗಡೆಯಾಗಿರುವ ಆಟೋಮೊಬೈಲ್ ವರದಿ ಹೊಸ ಅಂಶ ಬಹಿರಂಗ ಪಡಿಸಿದೆ.
 


ನವದೆಹಲಿ(ಜು.17): ಕೊರೋನಾ ವೈರಸ್ ನಡುವೆ ಜೂನ್ ತಿಂಗಳ ಆಟೋಮೊಬೈಲ್ ಮಾರಾಟ ವರದಿ ಬಹಿರಂಗ ಗೊಂಡಿದೆ. ಕಳೆದ ಮಾರ್ಚ್ ತಿಂಗಳಿನಿಂದ ಆಟೋಮೊಬೈಲ್ ಎದುರಿಸುತ್ತಿರುವ ಕುಸಿತ ಜೂನ್ ತಿಂಗಳಲ್ಲೂ ಮುಂದುವರಿದಿದೆ. ಕಾರು, ಬೈಕ್, ಆಟೋ ರಿಕ್ಷಾ, ಟ್ರಕ್ ಸೇರಿದಂತೆ ಘನ ವಾಹನಗಳ ಮಾರಾಟದಲ್ಲಿ ಶೇಕಡಾ 43 ರಷ್ಟು ಕುಸಿತ ಕಂಡಿದೆ. ಆದರೆ ರೈತ ಮಿತ್ರ ಟ್ರಾಕ್ಟರ್ ಮಾರಾಟದಲ್ಲಿ ಏರಿಕೆಯಾಗಿದೆ.

ನಂಬರ್ ಪ್ಲೇಟ್ ರಿಜಿಸ್ಟ್ರೇಶನ್‌ನಲ್ಲಿ ಬದಲಾವಣೆ; ಹೊಸ ನಿಯಮ ಪ್ರಕಟಿಸಿದ MoRTH!

Latest Videos

undefined

ಹಲವರು ನಗರದ ತೊರೆದು ಹಳ್ಳಿ ಸೇರುತ್ತಿದ್ದಾರೆ. ತಮ್ಮ ಖಾಲಿ ಬಿದ್ದ ಹೊಲ ಜಮೀನಿನಲ್ಲಿ ಕೃಷಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಟ್ರಾಕ್ಟರ್ ಖರೀದಿಯಲ್ಲಿ ಹೆಚ್ಚಳವಾಗಿದೆ. ಇನ್ನು ಎಂದಿನಂತೆ ಜೂನ್ ತಿಂಗಳಲ್ಲಿ ಮಳೆಗಾಲ ಆರಂಭವಾಗುವ ಕಾರಣ ರೈತರು ತಮ್ಮ ಕೃಷ್ಟಿ ಚಟುವಟಿಕೆಗಳಿಗೆ ಟ್ರಾಕ್ಟರ್ ಖರೀದಿಗೆ ಮುಂದಾಗುತ್ತಾರೆ. ಈ ಹಿಂದಿನ ವರ್ಷಗಳಲ್ಲಿ ಟ್ರಾಕ್ಟರ್ ಖರೀದಿ ಪ್ರಮಾಣ ಜೂನ್ ತಿಂಗಳಲ್ಲಿ 4 ರಿಂದ 6 ಶೇಕಡ ಹೆಚ್ಚಳವಾಗಿದೆ.

ಕೊರೋನಾ ವೈರಸ್ ಹೊಡೆತದ ಬಳಿಕ ಈ ಬಾರಿ ಜೂನ್ ತಿಂಗಳಲ್ಲಿ ಟ್ರಾಕ್ಟರ್ ಖರೀದಿಯಲ್ಲಿ ಶೇಕಡಾ 10 ರಷ್ಟು ಹೆಚ್ಚಳವಾಗಿದೆ. 2020ರ ಜೂನ್ ತಿಂಗಳಲ್ಲಿ ಬರೋಬ್ಬರಿ 44,042 ಟ್ರಾಕ್ಟರ್ ಮಾರಾಟವಾಗಿದೆ. 2019ರ ಜೂನ್ ತಿಂಗಳಲ್ಲಿ ಇದೇ ಟ್ರಾಕ್ಟರ್ ಮಾರಾಟದ ಸಂಖ್ಯೆ 39,962.

ಟ್ರಾಕ್ಟರ್ ಏರಿಕೆ ಕಂಡಿದೆ. ಆದರೆ ಭಾರಿ ಕುಸಿತ ಕಂಡಿರುವುದು ಆಟೋ ರಿಕ್ಷಾ ಮಾರಾಟ. ಜೂನ್ ತಿಂಗಳಲ್ಲಿ ಶೇಕಡ 76 ರಷ್ಟು ಆಟೋ ಮಾರಾಟ ಕುಸಿತ ಕಂಡಿದೆ. 

click me!