
ನವದೆಹಲಿ(ಜು.17): ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆ(MoRTH) ವಾಹನ ರಿಜಿಸ್ಟ್ರೇಶನ್ ನಿಮಯದಲ್ಲಿ ಕೆಲ ಬದಲಾವಣೆ ಮಾಡಿದೆ. ಇಷ್ಟು ನೂತನ ವಾಹನ ಖರೀದಿ ಬಳಿಕ ತಾತ್ಕಾಲಿಕ ನಂಬರ್ ಪ್ರಿಂಟ್ ಮಾಡಿ ಕಾರಿಗೆ ಅಥವಾ ವಾಹನಕ್ಕೆ ಅಂಟಿಸಿ ಓಡಾಟ ಶುರು ಮಾಡಲಾಗುತ್ತಿತ್ತು. ಈ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ. ಇದೀಗ ಎಲ್ಲಾ ಹೊಸ ವಾಹನಗಳ ತಾತ್ಕಾಲಿಕ ನಂಬರ್ ಪ್ಲೇಟ್‌ನಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಲಾಗಿದೆ.
ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ಚಳಿ ಬಿಡಿಸಿದ ಮಹಿಳೆ!
ಹೊಸ ವಾಹನಗಳ ತಾತ್ಕಾಲಿಕ ನಂಬರ್ ಪ್ಲೇಟ್‌ಗೂ ಕಲರ್ ಕೋಡ್ ನೀಡಲಾಗಿದೆ. ಹಳದಿ ಪ್ಲೇಟ್ ಮೇಲೆ ಕೆಂಪು ಬಣ್ಣದಲ್ಲಿ ನಂಬರ್ ನಮೂದಿಸಿರಬೇಕು. ಡೀಲರ್ ಬಳಸುವ ನೂತನ ಕಾರುಗಳಿಗೆ ಕೆಂಪು ಪ್ಲೇಟ್ ಮೇಲೆ ಬಿಳಿ ಬಣ್ಣದಲ್ಲಿ ಬರೆದಿರಬೇಕು. ಎಲೆಕ್ಟ್ರಿಕ್ ವಾಹನದ ತಾತ್ಕಾಲಿಕ ನಂಬರ್ ಪ್ಲೇಟ್ ಹಸಿರು ಪ್ಲೇಟ್ ಮೇಲೆ ಹಳಿದ ಬಣ್ಣದಲ್ಲಿ ನಂಬರ್ ನಮೂದಿಸಿರಬೇಕು.
ನಾಯಿಯನ್ನು ಬೈಕ್‌ನಲ್ಲಿ ಕರೆದೊಯ್ದ ಮಾಲೀಕನಿಗೆ ಬಿತ್ತು ದುಬಾರಿ ದಂಡ
ರಿಜಿಸ್ಟ್ರೇಶನ್ ಆಗಿ ಶಾಶ್ವತ ನಂಬರ್ ಪ್ಲೇಟ್ ಮೇಲೆ ಯಾವುದೇ ಲೋಗೋ, ಇತರ ಅಕ್ಷರಗಳು ಸೇರಿದಂತೆ ಏನೂ ಬರೆಯುವಂತಿಲ್ಲ. ಇದರ ಜೊತೆಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಪರಿಣಾಮಕಾರಿಯಾಗಿ ಜಾರಿ ಮಾಡಲು ಹಲವು ಸೂತ್ರಗಳನ್ನು ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆ ನಿರ್ಧರಿಸಿದೆ.