ಜೀಪ್‌ ಕಂಪಾಸ್‌ ಲಾಂಗಿಟ್ಯೂಡ್‌(ಓ)-ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ!

By Web DeskFirst Published Jan 16, 2019, 11:13 AM IST
Highlights

ಪೆಟ್ರೋಲ್‌ ಚಾಲಿತ ಜೀಪ್‌ ಕಂಪಾಸ್‌ನ ಲಾಂಗಿಟ್ಯೂಡ್‌(ಓ) ಈಗ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಭ್ಯವಿದೆ. ಭಾರತದಲ್ಲಿ ಇದರ ಬೆಲೆ 18.90 ಲಕ್ಷ.

ನವದೆಹಲಿ(ಜ.16): ಈಗ ಎಸ್‌ಯುವಿಗಳದೇ ಕಾರುಬಾರು. ಹಾಗಾಗಿ ಜೀಪ್‌ ಕಂಪಾಸ್‌ ಈಗಾಗಲೇ ಚಾಲ್ತಿಯಲ್ಲಿರುವ ಮಹೀಂದ್ರ ಎಕ್ಸ್‌ಯುವಿ500, ಹ್ಯುಂಡೈ ಟಕ್ಸನ್‌, ಹ್ಯುಂಡೈ ಕ್ರೆಟಾ ಹೀಗೆ ಹಲವು ಕಾರುಗಳಿಗೆ ಸ್ಪರ್ಧೆಯೊಡ್ಡಲಿದೆ. ಈ ಜೀಪ್‌ ಕಂಪಾಸ್‌ ಪೆಟ್ರೋಲ್‌ ಕಾರ್‌ ನಾಲ್ಕು ರೀತಿಯಲ್ಲಿ ಮಾರುಕಟ್ಟೆಯಲ್ಲಿ ದೊರಕಲಿದೆ. 

ಇದನ್ನೂ ಓದಿ: ಕಳೆದ ವರ್ಷ 23 ಲಕ್ಷ ಬೆಂಝ್‌ ಕಾರು ಮಾರಾಟ- ಭಾರತ ಈಗ ಲಕ್ಸುರಿ ರಾಷ್ಟ್ರ!

ಸ್ಪೋರ್ಟ್‌ ಲಾಂಗಿಟ್ಯೂಡ್‌(ಓ), ಲಿಮಿಟೆಡ್‌ ಮತ್ತು ಲಿಮಿಟೆಡ್‌ ಪ್ಲಸ್‌. ಈ ಕಾರ್‌ನ ವಿಶೇಷತೆ ಏನೆಂದರೆ ಎಲ್‌ಇಡಿಯ ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌ ಇದರಲ್ಲಿದ್ದು, 17 ಇಂಚಸ್‌ನ ಅಲಾಯ್‌ ವೀಲ್‌, ಕೀಲೆಸ್‌ ಎಂಟ್ರಿ, ಪುಶ್‌ ಬಟನ್‌ ಸ್ಟಾರ್ಟ್‌, ರೇರ್‌ ಫಾಗ್‌ ಲ್ಯಾಂಪ್‌ ಇದರಲ್ಲಿದೆ. ಅಲ್ಲದೆ ಎಸ್‌ಯುವಿನಲ್ಲಿ 7 ಇಂಚಸ್‌ನ ಟಚ್‌ ಸಕ್ರೀನ್‌ ಇನ್ಫೊಟೈನ್‌ಮೆಂಟ್‌ ವ್ಯವಸ್ಥೆ, ಡ್ಯುಯಲ್‌ ಜೋನ್‌ ಆಟೋ ಕ್ಲೈಮೇಟ್‌ ಕಂಟ್ರೋಲ್‌, ರಿವರ್ಸ್‌ ಪಾರ್ಕಿಂಗ್‌ ಸೆಂಸಾರ್‌, ಆರು ಸ್ಪೀಕರ್‌ ಇದ್ದು, ಉಳಿದ ಹಲವು ಉಪಕರಣಗಳು ಇದೆ. 

ಇದನ್ನೂ ಓದಿ: ಬ್ರೇಕ್ ಫೇಲ್ ಆದಾಗ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ?

ಜೀಪ್‌ ಕಾಂಪಸ್‌ ಪೆಟ್ರೋಲ್‌ನಲ್ಲಿ 1.4 ಲೀಟರ್‌ ಮಲ್ಟೀ ಏರ್‌ ಟರ್ಬೋಚಾಜ್‌ರ್‍ ಇಂಜಿನ್‌ ಇದ್ದು, 160 ಬಿಹೆಚ್‌ಪಿ ಮತ್ತು 260ಎನ್‌ಎಂ ಪೀಕ್‌ ಟಕ್ರ್ಯೂ ಇದರಲ್ಲಿದೆ. 7 ಸ್ಪೀಡ್‌ ಡಿಡಿಸಿಟಿ ಡ್ಯುಎಲ್‌ ಕ್ಲಚ್‌ ಆಟೊಮೆಟಿಕ್‌ ಟ್ರ್ಯಾನ್ಸ್‌ಮಿಷ ಲಾಂಗಿಟ್ಯೂಡ್‌(ಓ)ನಲ್ಲಿದೆ. ಜೀಪ್‌ ಕ್ಯಾಂಪಸ್‌ನಲ್ಲಿ ಎಆರ್‌ಎಐ ಸರ್ಟಿಫೈಡ್‌ನ 14.3ಕೆಎಂಪಿಎಲ್‌ ಪೆಟ್ರೋಲ್‌ ಮಾನ್ಯುಯಲ್‌ ವರ್ಶನ್‌ ಇದೆ. ಜೀಪ್‌ ಕಂಪಾಸ್‌ನ ಟ್ರೈಲ್‌ಹೌಕ್‌ನ ಬೆಲೆ 25 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ನೀಲಿ, ಕಪ್ಪು, ಕಂದು, ಕೆಂಪು, ಬಿಳಿ ಬಣ್ಣಗಳಲ್ಲಿ ಲಭ್ಯವಿದೆ

click me!