ಕವಾಸಕಿ ನಿಂಜಾ ZX-6R ಬೈಕ್ ಬಿಡುಗಡೆ--ಬೆಲೆ 10.49 ಲಕ್ಷ

By Web Desk  |  First Published Jan 16, 2019, 10:47 AM IST

ಖವಾಸಕಿ ಇಂಡಿಯಾ ಬರೋಬ್ಬರಿ 10.49 ಲಕ್ಷ ರೂಪಾಯಿ ಮೌಲ್ಯದ ನಿಂಜಾ ಬೈಕ್ ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ಈ ಬೈಕ್ ವಿಶೇಷತೆ ಏನು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
 


ನವದೆಹಲಿ(ಜ.16): ಖವಾಸಕಿ ಇಂಡಿಯಾ ಇದೀಗ ನೂತನ ನಿಂಜಾ ಸೂಪರ್ ಬೈಕ್ ಬಿಡುಗಡೆ ಮಾಡಿದೆ. ನಿಂಜಾ ZX-6R ನೂತನ ಬೈಕ್ ಬಿಡುಗಡೆ ಮಾಡಿರುವ ಖವಾಸಕಿ ಈಗಾಗಲೇ ಬುಕಿಂಗ್ ಕೂಡ ಆರಂಭಗೊಂಡಿದೆ. ನೂತನ ಬೈಕ್ ಫೆಬ್ರವರಿಯಲ್ಲಿ ಗ್ರಾಹಕರ ಕೈಸೇರಲಿದೆ.

Tap to resize

Latest Videos

undefined

ಇದನ್ನೂ ಓದಿ: ರಸ್ತೆಗಿಳಿಯುವಂತಿಲ್ಲ 2 ಸ್ಟ್ರೋಕ್ ವಾಹನ- ಯಮಹಾ RX100,ಯಜೆಡಿ ಗತಿಯೇನು?

ನಿಂಜಾ ZX-6R ಬೈಕ್ ಬೆಲೆ 10.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದಿರುವ ನೂತನ ನಿಂಜಾ ZX-6R ಬೈಕ್ ಭಾರತದಲ್ಲೇ ಬಿಡಿ ಭಾಗಗಳ ಜೋಡಣೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬುಲೆಟ್ 500 ABS ಬಿಡುಗಡೆ-ಬೆಲೆ ಎಷ್ಟು?

ನಿಂಜಾ ZX-6R ಬೈಕ್ 636 ಸಿಸಿ, 4 ಸಿಲಿಂಡರ್ ಎಂಜಿನ್, 128 bhp ಪವರ್ ಹಾಗೂ 70.5nm ಪೀಕ್ ಟಾರ್ಕ್ ಉತ್ವಾದಿಸಲಿದೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇನ್ನು ಖವಾಸಕಿ ಇಂಟೆಲಿಜೆಂಟ್ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್(KIBS),ಖವಾಸಕಿ ಟ್ರಾಕ್ಷನ್ ಕಂಟ್ರೋಲ್(KTRC), ಖವಾಸಕಿ ಕ್ವಿಕ್ ಶಿಫ್ಟರ್( KQS) ತಂತ್ರಜ್ಞಾನ ಹೊಂದಿದೆ. 

click me!