ಕಳೆದ ವರ್ಷ 23 ಲಕ್ಷ ಬೆಂಝ್‌ ಕಾರು ಮಾರಾಟ- ಭಾರತ ಈಗ ಲಕ್ಸುರಿ ರಾಷ್ಟ್ರ!

By Web Desk  |  First Published Jan 16, 2019, 11:01 AM IST

2018ರಲ್ಲಿ ಬೆಂಝ್ ಕಾರು ಭಾರತದ ಮಾರುಕಟ್ಟೆ ಆಕ್ರಮಿಸಿಕೊಂಡಿದೆ ಲಕ್ಸರು ಕಾರು ವಿಭಾಗದಲ್ಲಿ ಬೆಂಝ್ ಈಗ ಅಗ್ರಸ್ಥಾನಕ್ಕೇರಿದೆ. 2018ರಲ್ಲಿ ಬೆಂಝ್ ಮಾರಾಟದ ವಿವರ ಇಲ್ಲಿದೆ.
 


ನವದೆಹಲಿ(ಜ.16):  ಭಾರತದಲ್ಲಿ ಐಶಾರಾಮಿ ಕಾರು ತಯಾರಿಸುವ ಕಂಪನಿ ಮರ್ಸಿಡೆಸ್‌ ಮರ್ಸಿಡಿಸ್‌ ಬೆಂಝ್‌ ಕಾರು ಕಳೆದ ವರ್ಷ ದಾಖಲೆ ಬರೆದಿದೆ. ಕಂಪನಿಯ ಕಾರ್‌ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದ್ದು ಕಳೆದ 2018ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ ಹೆಚ್ಚು ಮಾರಾಟವಾಗಿದೆ. 

Latest Videos

undefined

ಇದನ್ನೂ ಓದಿ: ಕವಾಸಕಿ ನಿಂಜಾ ZX-6R ಬೈಕ್ ಬಿಡುಗಡೆ--ಬೆಲೆ 10.49 ಲಕ್ಷ

ಭಾರತದಲ್ಲಿ 2018ರ ಜನವರಿಯಿಂದ ಡಿಸೆಂಬರ್‌ವರೆಗೆ 15,538 ಕಾರ್‌ಗಳು ಮಾರಾಟವಾಗಿದೆ. ವಿಶ್ವದಾದ್ಯಂತ ಸುಮಾರು 2.3 ಮಿಲಿಯನ್‌ ಮರ್ಸಿಡಿಸ್‌ ಬೆಂಝ್‌ ಕಾರು ಮಾರಾಟವಾಗಿದೆ. ಇದು ಕಂಪನಿಯ ಇತಿಹಾಸದಲ್ಲೇ ಅತಿ ಹೆಚ್ಚಿನ ಮಾರಾಟ ಸಂಖ್ಯೆ ಎನ್ನಲಾಗಿದೆ.

ಇದನ್ನೂ ಓದಿ: 20 ಸಾವಿರಕ್ಕೆ ಬುಕ್ ಮಾಡಿ ನೂತನ ಮಹೀಂದ್ರ XUV300 ಕಾರು!

ಅಲ್ಲದೆ 2019ಕ್ಕೆ ಮರ್ಸಿಡಿಸ್‌ ಬೆಂಝ್ಗೆ 25 ವರ್ಷ ಪೂರೈಸುತ್ತದೆ.  ದೇಶದ ಅತಿ ಹೆಚ್ಚು ಬೇಡಿಕೆ ಹಾಗೂ ಮಾರಾಟವಾಗುವ ಲಕ್ಷುರಿ ಕಾರ್‌ಗಳಲ್ಲಿ ಅಗ್ರ ಸ್ಥಾನದಲ್ಲಿದೆ. ಈ ವರ್ಷ ಮಾರಾಟದಲ್ಲಿ ಮತ್ತಷ್ಟು ಏರಿಕೆ ಕಾಣೋ ವಿಶ್ವಾಸದಲ್ಲಿದೆ. ಈ ಮೂಲಕ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳೋ ಲೆಕ್ಕಾರಾದಲ್ಲಿದೆ.

click me!