ಸೆಪ್ಟೆಂಬರ್ 2019ರ ವರೆಗಿನ ಜಾವಾ ಬೈಕ್ ಸೋಲ್ಡ್ ಔಟ್!

By Web Desk  |  First Published Dec 24, 2018, 3:02 PM IST

ಜಾವಾ ಬೈಕ್ ಬಿಡುಗಡೆಯಾಗುತ್ತಿದೆ ಎಂದಾಗಲೇ ಎಲ್ಲ ಕಿವಿ ನೆಟ್ಟಗಾಗಿತ್ತು. ಇದೀಗ ಜಾವಾ ಬೈಕ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ದಾಖಲೆ ಪ್ರಮಾಣದ ಬುಕಿಂಗ್‌ನಿಂದ 2019ರ ಸೆಪ್ಟೆಂಬರ್ ವರೆಗಿನ ಜಾವಾ ಬೈಕ್ ಮಾರಾಟವಾಗಿದೆ. 


ನವದೆಹಲಿ(ಡಿ.23): ಕ್ಲಾಸಿಕ್ ಲೆಜೆಂಡ್ಸ್ ಹಾಗೂ ಮಹೀಂದ್ರ ಸಹಭಾಗಿತ್ವದಲ್ಲಿ ಬಿಡುಗಡೆಯಾಗಿರುವ ಜಾವಾ ಬೈಕ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆನ್‌ಲೈನ್ ಮೂಲಕ ಬುಕಿಂಗ್ ಆರಂಭಿಸಿದ್ದ ಜಾವಾ ಇದೀಗ ಡಿಸೆಂಬರ್ 25ಕ್ಕೆ ಬುಕಿಂಗ್ ತಾತ್ಕಾಲಿಕವಾಗಿ ನಿಲ್ಲಿಸುತ್ತಿದೆ. ಕಾರಣ ಸದ್ಯ ನಿರ್ಮಾಣಗೊಂಡಿರುವ ಎಲ್ಲಾ ಜಾವಾ ಬೈಕ್‌ಗಳು ಸೋಲ್ಡ್ ಔಟ್ ಆಗಿದೆ.

Tap to resize

Latest Videos

undefined

ಇದನ್ನೂ ಓದಿ: ಬೆಂಗಳೂರಿನಲ್ಲಿ 3 ಜಾವಾ ಬೈಕ್ ಶೋ ರೂಂ ಆರಂಭ-ಖರೀದಿ ಇನ್ನೂ ಸುಲಭ!

2019ರ ಸೆಪ್ಟೆಂಬರ್ ವರೆಗೆ ಜಾವಾ ಬೈಕ್ ಸಿಗೋದು ಕಷ್ಟ. ಕಾರಣ ಈಗಾಗಲೇ ಬುಕಿಂಗ್ ಮಾಡಿದವರ ವೈಟಿಂಗ್ ಸಮಯ ಸೆಪ್ಟೆಂಬರ್ ವರೆಗಿದೆ. ಇದಾದ ಬಳಿಕ ಉಳಿದ ಗ್ರಾಹಕರಿಗೆ ಜಾವಾ ಕೈಸೇರಲಿದೆ. ಪುಣೆ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜಾವಾ ತನ್ನ ಶೋ ರೂಂ ತೆರೆದಿದೆ. ಮಾರ್ಚ್ 2019ರ ವೇಳೆಗೆ 104 ಡೀಲರ್‌ಶಿಪ್‌ಗಳಲ್ಲಿ ಬೈಕ್ ಲಭ್ಯವಾಗಲಿದೆ.

ಇದನ್ನೂ ಓದಿ: ನಿದ್ದೆ ಕಣ್ಣಿನಲ್ಲಿ BMW ಕಾರನ್ನ ವಿಮಾನ ತರ ಹಾರಿಸಿದ ಭೂಪ-ವೀಡಿಯೋ ವೈರಲ್!

ಗ್ರಾಹಕರ ಭರ್ಜರಿ ಪ್ರತಿಕ್ರಿಯೆಗೆ ನಾವು ಚಿರಋಣಿಯಾಗಿದ್ದೇವೆ. ದಾಖಲೆಯ ಪ್ರಮಾಣದ ಬುಕಿಂಗ್ ಆಗಿದೆ. ಹೀಗಾಗಿ 2019ರ ಸೆಪ್ಟೆಂಬರ್ ವರೆಗಿನ ಜಾವಾ ಬೈಕ್‌ಗಳು ಮಾರಾಟವಾಗಿದೆ. ಸದ್ಯ ಬುಕಿಂಗ್ ಮಾಡಿದವರಿಗೆ ಸೆಪ್ಟೆಂಬರ್‌ನಲ್ಲಿ ಬೈಕ್ ಡೆಲಿವರಿಯಾಗಲಿದೆ. 2019ರ ಮಾರ್ಚ್‌ನಿಂದ ಜಾವಾ ಮೋಟರ್‌ಸೈಕಲ್ ಡೆಲಿವರಿ ಆರಂಭಿಸಲಿದೆ ಎಂದು ಕ್ಲಾಸಿಕ್ ಲೆಜೆಂಡ್ಸ‌್ನ ಸಹ ಸಂಸ್ಥಾಪಕ ಅನುಪಮ್ ತರೇಜಾ ಹೇಳಿದ್ದಾರೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!