ಹ್ಯುಂಡೈ ವೆನ್ಯೂ ಪೈಪೋಟಿ; ಮಾರುತಿ ಬ್ರೆಜಾ ಕಾರಿಗೆ ಭರ್ಜರಿ ಆಫರ್!

Published : Jul 21, 2019, 06:21 PM IST
ಹ್ಯುಂಡೈ ವೆನ್ಯೂ ಪೈಪೋಟಿ; ಮಾರುತಿ ಬ್ರೆಜಾ ಕಾರಿಗೆ ಭರ್ಜರಿ ಆಫರ್!

ಸಾರಾಂಶ

ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾದ ಬಳಿಕ ಗ್ರಾಹಕರ ಮಾರುತಿ ಬ್ರೆಜಾ ಆಯ್ಕೆ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮಾರಾಟದಲ್ಲಿ ಬ್ರೆಜಾ ಇಳಿಮುಖ ಕಂಡಿದೆ. ಇದಕ್ಕಾಗಿ ಮಾರುತಿ ಬ್ರೆಜಾ ಕಾರು ಖರೀದಿಸೋ ಗ್ರಾಹಕನಿಗೆ ಭರ್ಜರಿ ಆಫರ್ ಘೋಷಿಸಿದೆ.

ನವದೆಹಲಿ(ಜು.21): ಹ್ಯುಂಡೈ ವೆನ್ಯೂ SUV ಕಾರು ಬಿಡುಗಡೆಯಾದ ಬಳಿಕ ಮಾರುತಿ ಬ್ರೆಜಾ ತೀವ್ರ ಹೊಡೆತ ನೀಡಿದೆ. ಪ್ರತಿ ತಿಂಗಳೂ ಸರಾಸರಿ 15,000 ಕಾರುಗಳು ಮಾರಟವಾಗುತ್ತಿದ್ದ ಬ್ರೆಜಾ ಕಾರಿನ ಸಂಖ್ಯೆ ಇದೀಗ ಸರಾಸರಿ 8,000ಕ್ಕೆ ಇಳಿದಿದೆ. ಹೀಗಾಗಿ ಮತ್ತೆ ಮಾರಾಟ ಹೆಚ್ಚಿಸಲು ಮಾರುತಿ ಬ್ರೆಜಾ ಸ್ಪೆಷಲ್ ಆಫರ್ ಘೋಷಿಸಿದೆ.

ಇದನ್ನೂ ಓದಿ: ಬ್ರೆಜಾ, ನೆಕ್ಸಾನ್ ಪ್ರತಿಸ್ಪರ್ಧಿ; ಬರುತ್ತಿದೆ ಟೊಯೊಟಾ SUV ಕಾರು!

ಹ್ಯುಂಡೈ ವೆನ್ಯೂ ಆರ್ಭಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಮಾರುತಿ ಬ್ರೆಜಾ ಇದೀಗ ಹೊಸ ಆಫರ್ ನೀಡಿದೆ. ಮಾರುತಿ ಬ್ರೆಜಾ  ಕಾರು ಖರೀದಿಸುವ ಗ್ರಾಹಕನಿಗೆ 5 ವರ್ಷ ಉಚಿತ ವಾರೆಂಟಿ ನೀಡಲಿದೆ. ಇಷ್ಟೇ ಅಲ್ಲ 30,000 ರೂಪಾಯಿ ಡಿಸ್ಕೌಂಟ್ ಕೂಡ ನೀಡಲಿದೆ. ಈ ಹಿಂದೆ 2 ವರ್ಷ ಅಥವಾ 40,000 ಕಿ.ಮೀ ಉಚಿತ ವಾರೆಂಟಿ ನೀಡಲಾಗುತ್ತಿತ್ತು. 

ಇದನ್ನೂ ಓದಿ: ಮಾರುತಿ ಬ್ರೆಜಾ to ಹ್ಯುಂಡೈ ವೆನ್ಯೂ: ಇಲ್ಲಿದೆ ಭಾರತದ SUV ಕಾರು ಬೆಲೆ ಪಟ್ಟಿ!

ವಿಶೇಷ ಕೊಡುಗೆಯಲ್ಲಿ 5 ವರ್ಷ ಅಥವಾ 1 ಲಕ್ಷ ಕಿ.ಮೀ ಉಚಿತ ವಾರೆಂಟಿ ನೀಡಲಾಗಿದೆ. ಮಾರುತಿ ಬ್ರೆಜಾ ಆಫರ್ ಮಾರಾಟದಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. 2019ರ ಮಾರ್ಚ್ ತಿಂಗಳಲ್ಲಿ 14,181 ಬ್ರೆಜಾ ಕಾರುಗಳು ಮಾರಾಟವಾಗಿತ್ತು. ಆದರೆ ಮೇ ತಿಂಗಳಲ್ಲಿ ಹ್ಯುಂಡೈ ವೆನ್ಯೂ ಬಿಡುಗಡೆಯಾದ ಬಳಿಕ ಬ್ರೆಜಾ ಕಳೆದ ಜೂನ್ ತಿಂಗಳಲ್ಲಿ 8871ಕ್ಕೆ ಇಳಿದಿದೆ.
 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ