ಆರಾಮದಾಯಕ, ಸುರಕ್ಷತೆಯ ಪ್ರಯಾಣಕ್ಕೆ ಫಾಲ್ಕನ್‌ನ ಹೊಸ ಟೈರ್‌ ಲಾಂಚ್!

By Web Desk  |  First Published Oct 16, 2019, 12:47 PM IST

ಫಾಲ್ಕನ್ ಕಂಪನಿ ಹೊಸ ಟೈರ್ ಬಿಡುಗಡೆ ಮಾಡಿದೆ. ಭಾರತದ ರಸ್ತೆಗಳಿಗೆ ಅನುಗುಣವಾಗಿ ನೂತನ ಟೈರ್ ಬಿಡುಡೆ ಮಾಡಲಾಗಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ಫಾಲ್ಕನ್ ಟೈರ್ ಹೆಚ್ಚಿನ ಮಾಹಿತಿ ಇಲ್ಲಿದೆ.


ನವದೆಹಲಿ(ಅ.16):  ಇಂದು ಉತ್ತಮ ಗುಣಮಟ್ಟದ ಕಾರ್‌ಗಳನ್ನು ಖರೀದಿಸುವವರೇ ಹೆಚ್ಚು. ಅದಕ್ಕೆ ತಕ್ಕಂತೆ ಟೈರ್‌ಗಳು ಬೇಕಲ್ವಾ. ಈ ಹಿನ್ನೆಲೆಯಲ್ಲಿ ಜಪಾನ್‌ನ ಟೈರ್‌ ತಯಾರಕ ಸಂಸ್ಥೆಯಾದ ಫಾಲ್ಕನ್‌ ಟೈರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಹೊಸ ಟೈರ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರ ಹೆಸರು ಸಿನ್ಸೆರ ಎಸ್‌ಎನ್‌832ಐ. 

ಇದನ್ನೂ ಓದಿ: ಟಯರ್ ಆಯ್ಕೆಯಲ್ಲಿ ನಿರ್ಲಕ್ಷ್ಯ ಬೇಡ- ಇಲ್ಲಿದೆ ಭಾರತದ ಟಾಪ್ 5 ಟಯರ್

Latest Videos

undefined

ಇದು ಸಣ್ಣ ಮತ್ತು ಮಿಡ್‌ ಸೈಜ್‌ ಹ್ಯಾಚ್‌ಬ್ಯಾಕ್, ಸೆಡಾನ್, ಎಂಯುವಿ ಮತ್ತು ಕಾಂಪಾಕ್ಟ್ ಎಸ್‌ಯುವಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. 27 ವಿವಿಧ ಸೈಜ್‌ನಲ್ಲಿ, 12 ಇಂಚಿನಿಂದ 16 ಇಂಚಿನವರೆಗೂ ಸಿಗಲಿದೆ. ಡ್ರೈವ್‌ ಮಾಡುವಾಗ ಒಳ್ಳೆಯ ಗ್ರಿಪ್‌ ಹಾಗೂ ಉತ್ತಮ ಫೀಲ್‌ ನೀಡುತ್ತೆ ಎನ್ನುವುದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ: ದುಬಾರಿ ಬೆಂಟ್ಲಿ ಕಾರಿಗೆ ಟ್ಯಾಂಕ್ ರೂಪ- ಇದು ವಿಶ್ವದ ವಿಚಿತ್ರ ಕಾರು!

ಭಾರತದಲ್ಲಿ MRF, ಆಪೋಲೋ, ಸಿಯೆಟ್ ಸೇರಿದಂತೆ ಹಲವು ಕಂಪನಿಗಳ ಟೈರ್‌ಗಳು ಮಾರುಕಟ್ಟೆಯಲ್ಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಟಾಪ್ 10 ಟೈರ್ ವಿವರ ಇಲ್ಲಿದೆ

1 MRF
2 ಅಪೋಲೊ
3 JK ಟೈರ್
4 ಸಿಯೆಟ್ ಟೈರ್
5 ಟಿವಿಎಸ್ ಶ್ರೀ ಚಕ್ರ
6 ಗುಡ್ ಇಯರ್ ಇಂಡಿಯಾ
7 ಫಾಲ್ಕನ್ ಟೈರ್
8 ಬಾಲಕೃಷ್ಣ ಇಂಡಸ್ಟ್ರಿ
9 ಬ್ರಿಡ್ಜ್‌ಸ್ಟೋನ್
10 ಪಿರೆಲ್ಲಿ

click me!