ಕಡಿಮೆ ಬೆಲೆಯಲ್ಲಿ ದಾಟ್ಸನ್ ಹೊರತಂದಿದೆ 2 ಹೊಸ ಕಾರು!

By Web Desk  |  First Published Oct 16, 2019, 12:31 PM IST

ದೀಪಾವಳಿ ಹಬ್ಬಕ್ಕೆ ಅಟೋಮೊಬೈಲ್ ಕಂಪನಿಗಳು ಹೊಸ ಕಾರುಗಳ ಜೊತೆ ಹೊಸ ಆಫರ್ ನೀಡುತ್ತಿದೆ. ಇದೀಗ ದಾಟ್ಸನ್ ಇಂಡಿಯಾ ಕಡಿಮೆ ಬೆಲೆಯಲ್ಲಿ 2 ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ. ನೂತನ ಕಾರಿನ ವಿವರ ಇಲ್ಲಿದೆ.


ನವದೆಹಲಿ(ಅ.16):  ದೀಪಾವಳಿ ಬಂತು ಹೊಸ ಕಾರ್‌ ಅನ್ನು ಮನೆಗೆ ತರಬೇಕು ಎನ್ನುವವರಿಗೆ ಡಾಟ್ಸನ್‌ ಇಂಡಿಯಾ ಹೊಸ ಕಾರ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರ ಹೆಸರು ಡಾಟ್ಸನ್‌ ಗೋ ಮತ್ತು ಗೋ+. ಇದೇನು ದುಬಾರಿ ಕಾರ್‌ ಅಲ್ಲ. ಹೊಸ ತಂತ್ರಜ್ಞನವನ್ನು ಬಳಸಿ ಹೊರ ತಂದ ಇದರ ಬೆಲೆ ಕ್ರಮವಾಗಿ ರು.5.94 ಹಾಗೂ ರು.6.58 ಲಕ್ಷ.

ಇದನ್ನೂ ಓದಿ: ದಾಟ್ಸನ್ ಗೋ CVT ಆಟೋಮ್ಯಾಟಿಕ್ ಕಾರು ಬಿಡುಗಡೆ!

Tap to resize

Latest Videos

undefined

ಗೋ ಹಾಗೂ ಗೋ+ನಲ್ಲಿ ಗಮನಿಸಲೇ ಬೇಕಾದ ಅಂಶ ಎಂದರೆ ಅದು ಸೇಫ್‌, ಸ್ಮಾರ್ಟ್‌, ಸ್ಪೇಸ್‌, ಸ್ಟೈಲ್‌ ಹಾಗೂ ಶ್ಯೂರಿಟಿ. ಇದಿಷ್ಟನ್ನು ಕಂಪನಿ ಕಾರ್‌ ಕೊಳ್ಳುವವರಿಗೆ ಪ್ರಾಮಿಸ್‌ ಮಾಡುತ್ತೆ. ಅಷ್ಟೇ ಅಲ್ಲದೆ ಮೊದಲ ಬಾರಿಗೆ ಸಿವಿಟಿ ತಂತ್ರಜ್ಞಾನವನ್ನು ಅಳವಡಿಸಿದ್ದು, 7 ಇಂಚಿನ ಟಚ್‌ ಸ್ಕ್ರೀನ್‌, ಆ್ಯಂಡ್ರಾಯ್ಡ್‌ ಆಟೋ, ಆ್ಯಪಲ್‌ ಕಾರ್‌, ಆ್ಯಕ್ಸಲರೇಷನ್‌ನಲ್ಲಿ ಕ್ಯಾಬಿನ್‌, ಡ್ಯುಯಲ್‌ ಏರ್‌ಬ್ಯಾಗ್‌, 185 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್‌ ಎಲ್ಲವನ್ನೂ ಇದರಲ್ಲಿ ಕಾಣಬಹುದು. ಒಟ್ಟಿನಲ್ಲಿ ಲುಕ್‌ನಲ್ಲಿ ಇದು ಸ್ಪೋಟ್ಸ್‌ರ್‍ ಕಾರ್‌ನಂತೆ ಕಾಣುತ್ತದೆ.

ಇದನ್ನೂ ಓದಿ: ದೀಪಾವಳಿಗೆ ಖರೀದಿಸಹುದಾದ 10 ಲಕ್ಷ ರೂ ಒಳಗಿನ ಟಾಪ್ 5 ಕಾರು!

ರೂಬಿರೆಡ್‌, ವಿವಿಡ್‌ ಬ್ಲ್ಯೂಮ ಬ್ರಾನ್ಸ್‌ ಗ್ರೇ, ಆಂಬರ್‌ ಆರೆಂಜ್‌, ಕ್ರಿಸ್‌್ಲ ಸಿಲ್ವರ್‌, ಓಪಲ್‌ ವೈಟ್‌ ಬಣ್ಣಗಳಲ್ಲಿ 2 ವರ್ಷದ ವಾರಂಟಿ ಪ್ಯಾಕೇಜ್‌ನಲ್ಲಿ ಲಭ್ಯವಿದೆ.

click me!