ದೀಪಾವಳಿಗೆ ಖರೀದಿಸಹುದಾದ 10 ಲಕ್ಷ ರೂ ಒಳಗಿನ ಟಾಪ್ 5 ಕಾರು!

Published : Oct 16, 2019, 11:22 AM IST
ದೀಪಾವಳಿಗೆ ಖರೀದಿಸಹುದಾದ 10 ಲಕ್ಷ ರೂ ಒಳಗಿನ ಟಾಪ್ 5 ಕಾರು!

ಸಾರಾಂಶ

ಈ ವರ್ಷದ ದೀಪಾವಳಿಯನ್ನು ಹೊಸ ಕಾರಿನೊಂದಿಗೆ ಆಚರಿಸಿ ಅನ್ನೋದು ಬಹುತೇಕ ಆಟೋಮೊಬೈಲ್ ಕಂಪನಿಗಳ ಜಾಹೀರಾತು. ಆದರೆ ಈ ದೀಪಗಳ ಹಬ್ಬದಲ್ಲಿ ಕಾರು ಖರೀದಿಸುವವರಿಗೆ ಹೆಚ್ಚುವರಿಗೆ ರಿಯಾಯಿತಿ, ಆಫರ್ ಸಿಗಲಿದೆ. ಕಾರಣ ಈಗಾಗಲೇ ವಾಹನ ಮಾರಾಟ ಕುಸಿತ ಗೊಂಡಿದೆ. 10 ಲಕ್ಷ ರೂಪಾಯಿ ಒಳಗಡೆ ಖರೀದಿಸಬಹುದಾದ ಟಾಪ್ 5 ಕಾರುಗಳ ವಿವರ ಇಲ್ಲಿದೆ.

ಬೆಂಗಳೂರು(ಅ.16): ದೀಪಾವಳಿ ಹಬ್ಬಕ್ಕೆ ತಯಾರಿ ಜೋರಾಗಿದೆ. ಇತ್ತ ಆಟೋಮೊಬೈಲ್ ಕಂಪನಿಗಳು ಕೂಡ ದೀಪಾವಳಿ ಹಬ್ಬಕ್ಕೆ ವಿಶೇಷ ಆಫರ್ ನೀಡಲು ರೆಡಿಯಾಗಿದೆ. ವಾಹನ ಮಾರಾಟ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಹೆಚ್ಚುವರಿ ಆಫರ್ ಕೂಡ ಘೋಷಿಸಲು ವಾಹನ ಕಂಪನಿಗಳು ಮುಂದಾಗಿದೆ. ಈ ದೀಪಾವಳಿ ಹಬ್ಬದ ಸಡಗರದಲ್ಲಿ 10 ಲಕ್ಷ ರೂಪಾಯಿ ಒಳಗಡೆ ಖರೀದಿಸಬಹುದಾದ ಟಾಪ್ 5 ಕಾರುಗಳ ಈ ಕಳೆಗಿನಂತಿವೆ.

ಇದನ್ನೂ ಓದಿ: ಮಾರುತಿ ಬ್ರೆಜಾ to ಹ್ಯುಂಡೈ ವೆನ್ಯೂ: ಇಲ್ಲಿದೆ ಭಾರತದ SUV ಕಾರು ಬೆಲೆ ಪಟ್ಟಿ!

ಹೊಂಡಾ ಅಮೇಜ್


ಬೆಲೆ: 7.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಎಂಜಿನ್: 1.2 ಲೀಟರ್ ಪೆಟ್ರೋಲ್
ಪವರ್: 89 bhp ಪವರ್,  110Nm ಪೀಕ್ ಟಾರ್ಕ್
  
ಹ್ಯುಂಡೈ ವೆನ್ಯೂ


ಬೆಲೆ:  6.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಎಂಜಿನ್: 1.0 ಲೀಟರ್
ಪವರ್: 82 bhp ಪವರ್,  114 Nm ಪೀಕ್ ಟಾರ್ಕ್

ಮಾರುತಿ ಸ್ವಿಫ್ಟ್


ಬೆಲೆ: 5.14 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಎಂಜಿನ್: 1.2 ಲೀಟರ್ ಪೆಟ್ರೋಲ್
ಪವರ್: 82bhp ಪವರ್, 114Nm ಪೀಕ್ ಟಾರ್ಕ್

ಹ್ಯುಂಡೈ ಗ್ರ್ಯಾಂಟ್ i10 


ಬೆಲೆ: 4.98  ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಎಂಜಿನ್: 1.2 ಲೀಟರ್ ಪೆಟ್ರೋಲ್
ಪವರ್: 81bhp ಪವರ್, 113Nm ಪೀಕ್ ಟಾರ್ಕ್

ಮಾರುತಿ ಸುಜುಕಿ ಬಲೆನೊ


ಬೆಲೆ: 5.59 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಎಂಜಿನ್: 1.2 ಲೀಟರ್ K ಪೆಟ್ರೋಲ್ ಎಂಜಿನ್
ಪವರ್: 84PS ಪವರ್,115Nm ಪೀಕ್ ಟಾರ್ಕ್

ಸೂಚನೆ: ಕಾರಿನ ಬೆಲೆಗಳು ಡೀಲರ್ ಹಾಗೂ ನಗರಗಳಲ್ಲಿ ವ್ಯತ್ಯಾಸವಾಗಲಿದೆ. ಬೇಸ್ ವೇರಿಯೆಂಟ್ ಬೆಲೆ ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಡೀಲರನ್ನು ಸಂಪರ್ಕಿಸಿ.
 

PREV
click me!

Recommended Stories

ಹೊಸ ‘ಪಂಚ್‌’ ಕೊಟ್ಟ ಟಾಟಾ ‘ಕಮಾಂಡ್ ಮ್ಯಾಕ್ಸ್’!
ಬೆಂಗಳೂರು ಮಾರುಕಟ್ಟೆಗೆ ಎಂಟ್ರಿಕೊಟ್ಟ ಅಮೆರಿಕ ಟೆಸ್ಲಾ ಕಾರು, ಕೇವಲ 22 ಸಾವಿರ ರೂ.ಗೆ ಬುಕಿಂಗ್