ಜಾಗ್ವಾರ್‌ನ ಮೊತ್ತ ಮೊದಲ ಎಲೆಕ್ಟ್ರಿಕ್ SUV ಕಾರಿನ ಬುಕಿಂಗ್ ಆರಂಭ!

By Suvarna News  |  First Published Nov 5, 2020, 3:51 PM IST

 8 ವರ್ಷಗಳ ಅಥವಾ 1,60,000 ಕಿ.ಮೀ ಬ್ಯಾಟರಿ ವ್ಯಾರಂಟಿ ಹಾಗೂ 5 ವರ್ಷಗಳ ದುರಸ್ತಿ ಸೇವೆ ಪ್ಯಾಕೇಜ್, 5 ವರ್ಷಗಳ ಜಾಗ್ವಾರ್ ರೋಡ್ ಸೈಡ್ ಅಸಿಸ್ಟೆನ್ಸ್ , ಸುಲಭ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡ ಹೊಚ್ಚ ಹೊಸ ಜಾಗ್ವಾಗ್ ಎಲೆಕ್ಟ್ರಿಕ್  SUV  ಕಾರಿನ ಬುಕಿಂಗ್ ಆರಂಭಗೊಂಡಿದೆ.


ಬೆಂಗಳೂರು(ನ.05):  ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ತನ್ನ ಜಾಗ್ವಾರ್ ಐಪೇಸ್ ಎಲೆಕ್ಟ್ರಿಕ್ SUV  ಕಾರಿನ ಬುಕಿಂಗ್ ಆರಂಭಿಸಿದೆ. . ಈ ವಾಹನದಲ್ಲಿ ಅತ್ಯಾಧುನಿಕ 90 KWh ಲಿಥಿಯಂ ಅಯಾನ್ ಬ್ಯಾಟರಿ ಅಳವಾಡಿಸಲಾಗಿದ್ದು, ಇದರ ಎರಡು ಮೋಟಾರ್ ಗಳು 400 PS ಶಕ್ತಿ ಉತ್ಪಾದಿಸುತ್ತವೆ. ಈ ಬ್ಯಾಟರಿಗೆ 8 ವರ್ಷಗಳ ಅಥವಾ 1,60,000 ಕಿಮೀ ಗಳ ವಾರಂಟಿ ಲಭ್ಯವಿದೆ. ಇದಲ್ಲದೆ, ಐಪೇಸ್ ಗ್ರಾಹಕರಿಗೆ ಹೆಚ್ಚುವರಿಯಾಗಿ 5 ವರ್ಷಗಳ ದುರಸ್ತಿಸೇವಾ ಪ್ಯಾಕೇಜ್, 5 ವರ್ಷಗಳ ಜಾಗ್ವಾರ್ ರಸ್ತೆ ಬದಿ ನೆರವು, ಜೊತೆಗೆ 7.4 KW  AC ವಾಲ್ ಮೌಂಟ್ ಚಾರ್ಜರ್ ಕೂಡ ಲಭ್ಯವಿರುತ್ತದೆ. ಕೇವಲ 4.8 ಸೆ ನಲ್ಲಿ 0-100 KM/h ವೇಗ ತಲುಪುವ ಈ ವಾಹನವು ತನ್ನ ದಕ್ಷತೆ ಮತ್ತು ಶಕ್ತಿಯನ್ನು ಪ್ರದರ್ಶಿಸಿದೆ. ಐಪೇಸ್  ಕಾರು S, SE ಮತ್ತು HSE ಎಂಬ ಮೂರು ಆವೃತ್ತಿಗಳಲ್ಲಿ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ನೂತನ ಜಾಗ್ವಾರ್ ಲ್ಯಾಂಡ್‌ ರೋವರ್ ರೀಟೈಲರ್ ಘಟಕ ಉದ್ಘಾಟನೆ!

Latest Videos

undefined

ಜಾಗ್ವಾರ್ ಐಪೇಸ್ ಮೂಲಕ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಪಯಣ ಆರಂಭಗೊಂಡಿದೆ.  ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನದ ಮಹತ್ವದವನ್ನು ಅರಿತು ಜ್ವಾಗ್ವಾರ್ ಅತ್ಯುತ್ತಮ ಕಾರನ್ನು ನೀಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ, ಅತ್ಯಂತ ಸುರಕ್ಷತೆಯ ಕಾರನ್ನು ಪರಿಚಯಿಸಿದ್ದೇವೆ ಎಂದು  ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಪುರಿ ಹೇಳಿದ್ದಾರೆ.

ಜಾಗ್ವಾರ್ ಕಾರು ಖರೀದಿ ಇನ್ನು ಸುಲಭ; ಬೆಂಗಳೂರಿನಲ್ಲಿ ಡಿಜಿಟಲ್ ಶೋ ರೂಂ.
 
ಜಾಗ್ವಾರ್ ಐಪೇಸ್ ಪ್ರತಿಷ್ಠಿತ 2019 ವರ್ಷದ ವಿಶ್ವದ ಕಾರು, ವರ್ಷದ ವಿಶ್ವದ ಕಾರು ವಿನ್ಯಾಸ, ಮತ್ತು ವಿಶ್ವದ ಹಸಿರು ಕಾರು ಸೇರಿದಂತೆ 80ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನೂ ಪ್ರಶಂಸೆಗಳನ್ನೂ ಪಡೆದಿದೆ. ಈ ಮೂರೂ ವಿಶ್ವ ಕಾರು ಪ್ರಶಸ್ತಿಗಳನ್ನು ಒಟ್ಟಿಗೆ ಗೆದ್ದ ಮೊದಲ ಕಾರ್ ಆಗಿರುವ ಐಪೇಸ್ ಎಲೆಕ್ಟ್ರಿಕ್ ಕಾರುಗಳಲ್ಲಿ ಹೊಸ ಸಂಚಲನ ಮೂಡಿಸಲಿದೆ.

ತನ್ನ ಗ್ರಾಹಕರಿಗೆ ಆತಂಕರಹಿತ ಇವಿ ಅನುಭವ ನೀಡಲು ಜಾಗ್ವಾರ್ ಲ್ಯಾಂಡ್ ರೋವರ್ ಬದ್ಧವಾಗಿದೆ. ಇದಕ್ಕಾಗಿ ಐಪೇಸ್ ನ ಗ್ರಾಹಕರಿಗೆ ಕಛೇರಿಯಲ್ಲಿ ಮತ್ತು ಮನೆಯಲ್ಲಿ ಚಾರ್ಜಿಂಗ್ ಸೌಲಭ್ಯ ಒದಗಿಸಲು ಜಾಗ್ವಾರ್ ಲ್ಯಾಂಡ್ ರೋವರ್ ಈಗಾಗಲೇ ಟಾಟಾ ಪವರ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದಲ್ಲದೆ, ತನ್ನ  ಇವಿ ಚಾರ್ಜಿಂಗ್ ಜಾಲದ ಭಾಗವಾಗಿ ಟಾಟಾ ಪವರ್ ಈಗಾಗಲೇ ದೇಶಾದ್ಯಂತ ಸುಮಾರು 200 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ. ಇವುಗಳನ್ನು ಮಾಲ್, ರೆಸ್ಟಾರೆಂಟ್, ಕಛೇರಿಗಳು, ವಸತಿ ಸಮುಚ್ಛಯಗಳು ಮತ್ತು ಹೆದ್ದಾರಿಗಳಂತಹ ಅನುಕೂಲಕರ ಸ್ಥಳಗಳಲ್ಲಿ ಸ್ಥಾಪಿಸಲಾಗಿವೆ.

click me!