ಮಹೀಂದ್ರಾ ಎಸ್‌ಯುವಿ ಇಲೆಕ್ಟ್ರಿಕ್ ಗಾಡಿಯೊಂದನ್ನು ಮಾಲೀಕ ಕಸದ ಡಬ್ಬಿಯಾಗಿ ಪರಿವರ್ತಿಸಿ ಮಹೀಂದ್ರ ವಾಹನ ಸಂಸ್ಥೆಯ ವಿರುದ್ಧ ವಿಭಿನ್ನವಾಗಿ ಆಕ್ರೋಶ ಹೊರ ಹಾಕಿದ್ದಾರೆ.
ಗಾಜಿಯಾಬಾದ್: ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹೀಂದ್ರಾ ಎಸ್‌ಯುವಿ ಇಲೆಕ್ಟ್ರಿಕ್ ಗಾಡಿಯೊಂದನ್ನು ಮಾಲೀಕ ಕಸದ ಡಬ್ಬಿಯಾಗಿ ಪರಿವರ್ತಿಸಿ ಮಹೀಂದ್ರ ವಾಹನ ಸಂಸ್ಥೆಯ ವಿರುದ್ಧ ವಿಭಿನ್ನವಾಗಿ ಆಕ್ರೋಶ ಹೊರ ಹಾಕಿದ್ದಾರೆ. ವರದಿಗಳ ಪ್ರಕಾರ, ಈ ಮಹೀಂದ್ರಾ ಬ್ರಾಂಡ್ ನೀಡಿದ ಭರವಸೆಗೆ ತಕ್ಕಂತೆ ಉನ್ನತ ಶ್ರೇಣಿಯ ಗುಣಮಟ್ಟ ಒದಗಿಸಿಲ್ಲ ಎಂಬುದು ಕಾರು ಮಾಲೀಕರ ಆರೋಪವಾಗಿದ್ದು, ಹೀಗಾಗಿ ಮಹೀಂದ್ರಾ ಸಂಸ್ಥೆ ವಿರುದ್ಧ ವಿಭಿನ್ನ ಪ್ರತಿಭಟನೆಗೆ ಮುಂದಾದ ಅವರು ತಮ್ಮ XUV400 EV ಗಾಡಿಯನ್ನು ಕಸದ ಡಬ್ಬಿಯಾಗಿ ಪರಿವರ್ತಿಸಿ ಮಹೀಂದ್ರ ಶೋ ರೂಮ್ ಮುಂದೆಯೇ ತಂದು ನಿಲ್ಲಿಸಿದ್ದಾರೆ.
ಗ್ರೇಟರ್ ನೋಯ್ಡಾದ ವ್ಯಕ್ತಿಯೊಬ್ಬರು ಈ ರೀತಿ ಮಾಡಿದ್ದಾಗಿ ತಿಳಿದು ಬಂದಿದೆ. ಕಾರಿನ ಮಾಲೀಕ ದೊಡ್ಡದಾಗಿ ಪೋಸ್ಟರೊಂದನ್ನು ಸಿದ್ಧಪಡಿಸಿದ್ದು ಅದರಲ್ಲಿ ಎಸ್‌ಯುವಿ ಗಾಡಿಯ ಹಿಂಭಾಗದ ಎಲ್ಲಾ ಭಾಗಗಳನ್ನು ಸೇರಿಸಿ ಪೋಸ್ಟರ್ ಬರೆದಿದ್ದು, ಅದನ್ನು ಗಾಜಿಯಾಬಾದ್‌ನ ಮಹೀಂದ್ರಾ ಶೋರೂಮ್ ಬಳಿ ನಿಲ್ಲಿಸಿದ್ದಾರೆ.
Mahindra Thar.e: ಶೀಘ್ರದಲ್ಲೇ ರಸ್ತೆಗಳಿಗೆ ಲಗ್ಗೆ ಇಡಲಿದೆ ಮಹೀಂದ್ರಾ ಎಲೆಕ್ಟ್ರಿಕ್ ಥಾರ್: ವೈಶಿಷ್ಟ್ಯತೆಗಳು ಹೀಗಿವೆ..
ಪೋಸ್ಟರ್‌ನಲ್ಲಿ ಬರೆದಿರುವುದೇನು?
ನೀವು XUV400 ಇಲೆಕ್ಟಿಕ್ ಗಾಡಿ ಖರೀದಿಸುವುದು ಹಾಗೂ ನಿಮ್ಮ ಸ್ವಂತ ಮನೆಯನ್ನು ಸುಟ್ಟು ಹಾಕುವುದು ಎರಡು ಒಂದೇ. ಮನೆಯಲ್ಲಿ ಈ ಗಾಡಿಯನ್ನು ಚಾರ್ಜ್ ಮಾಡಬೇಕಾದರೆ 10 ಕಿಲೋ ವ್ಯಾಟ್ ವಿದ್ಯುತ್ ಸಂಪರ್ಕದ ಅಗತ್ಯವಿದೆ. ಒಂದು ವೇಳೆ ಮನೆಯಿಂದ ಹೊರಗೆ ಚಾರ್ಜ್ ಮಾಡುವುದಾದರೆ 1000 ರೂಪಾಯಿ ಬರೀ ಚಾರ್ಜಿಂಗ್‌ಗೆ ವೆಚ್ಚವಾಗುತ್ತದೆ. ಇಷ್ಟು ವೆಚ್ಚಕ್ಕೆ ಇದು 150 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಆದರೆ ಮಹೀಂದ್ರ ಸಂಸ್ಥೆ ತನ್ನ ಈ ಎಸ್‌ಯುವಿ ಗಾಡಿ 300 ರಿಂದ 350 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಪ್ರಚಾರ ನೀಡಿದೆ. ನಿಜವಾಗಿಯೂ ಮಹೀಂದ್ರಾ ಸಂಸ್ಥಗೆ ನಾಚಿಕೆಯಾಗಬೇಕು ಎಂದು ಅವರು ಪೋಸ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಸ್ವದೇಶಿ ಮಹೀಂದ್ರಾ ವಾಹನ ಸಂಸ್ಥೆಯ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಅವರು ಯಾರೂ ಕೂಡ ಈ ಮಹೀಂದ್ರ ( Mahindra XUV400) ಇಲೆಕ್ಟ್ರಿಕ್ ಗಾಡಿಯನ್ನು ಖರೀದಿಸದೆ ಇರುವಂತೆ ಮನವಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಟ್ವಿಟ್ಟರ್ ಬಳಕೆದಾದರರು ಕೂಡ ಈ ವಾಹನ ಸಂಸ್ಥೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಕೆಲವರು ಸಂಸ್ಥೆಯನ್ನು ಸಮರ್ಥಿಸಿಕೊಂಡರೆ ಮತ್ತೆ ಕೆಲವರು ಬೈಯ್ಯಲು ಶುರು ಮಾಡಿದ್ದಾರೆ. XUV400 ಗಾಡಿಯ ಬಗ್ಗೆ ದೂರು ಇದೇ ಮೊದಲೇನಲ್ಲ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹೀಂದ್ರಾ ಶೋ ರೂಮ್ ಒಳಗೆ ಪ್ರತಿಭಟನೆ ಮಾಡಿದ್ದರು. ಮಹೀಂದ್ರಾ XUV400 ಗಾಡಿಗಿರುವ ಬೆಲೆಗೆ ತಕ್ಕಂತೆ ಅದರ ಸಾಮರ್ಥ್ಯ ಇಲ್ಲವೆನ್ನುವುದು ಮಾಲೀಕರ ಆರೋಪವಾಗಿತ್ತು.
ವಿಶ್ವದ ಮೊದಲ ಸಮುದ್ರದಾಳದ ಹೊಟೇಲ್ ಇದು: ವೀಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ ಹೇಳಿದ್ದೇನು?