ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಸಾರ್ವಜನಿಕರು ಮಾತ್ರವಲ್ಲ, ಪೊಲೀಸರು ಕೂಡ ಅಷ್ಟೇ ಜಾಗರೂಕರಾಗಿರಬೇಕು. ನಿಯಮ ಉಲ್ಲಂಘಿಸಿದರೆ ನಮಗೆ ದಂಡ ಹಾಕವವರು ಯಾರು? ಎಂದುಕೊಂಡರೆ ತಪ್ಪು. ಇದೀಗ ನಿಯಮ ಉಲ್ಲಂಘಿಸಿದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್(IG) ಕಾರಿಗೆ ಡಬಲ್ ದಂಡ ಹಾಕಿದ ಘಟನೆ ನಡೆದಿದೆ.
ಚಂಡಿಘಡ(ಜ.02): ಹೊಸ ಟ್ರಾಫಿಕ್ ನಿಯಮ ಹಾಗೂ ದಂಡದಿಂದ ಸಣ್ಣ ತಪ್ಪಿಗೂ ದುಬಾರಿ ದಂಡ ತೆರಬೇಕಾಗುತ್ತೆ. ನಿಯಮ ಎಲ್ಲರಿಗೂ ಒಂದೆ. ಅದರಲ್ಲೂ ಪೊಲೀಸರು ನಿಯಮ ಉಲ್ಲಂಘಿಸಿದರೆ ಡಬಲ್ ಫೈನ್. ರೆಡ್ ಸಿಗ್ನಲ್ ಇದ್ದಾಗ ವಾಹನಗಳು ಜೀಬ್ರಾ ಕ್ರಾಸ್ ದಾಟುವಂತಿಲ್ಲ. ಆದರೆ ಚಂಡೀಘಡ ಇನ್ಸ್‌ಪೆಕ್ಟರ್ ಜನರಲ್ ಪೊಲೀಸ್ ಜೀಬ್ರಾ ಲೈನ್ ಕ್ರಾಸ್ ಮಾಡೋ ಮೂಲಕ ದುಪ್ಪಟ್ಟು ದಂಡ ಕಟ್ಟಿದ್ದಾರೆ.
ಇದನ್ನೂ ಓದಿ: ಪದೇ ಪದೇ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಲೈಸೆನ್ಸ್ ರದ್ದು!
undefined
ಚಂಡಿಘಡದ ಹಲ್ಲೊಮಾರ್ಜ ಸಿಗ್ನಲ್ ಬಿದ್ದಿತ್ತು. ಚಂಡಿಘಡ ಇನ್ಸ್‌ಪೆಕ್ಟರ್ ಜನರಲ್ ಪೊಲೀಸ್ ಟೊಯೊಟಾ ಫಾರ್ಚುನರ್ ಕಾರು ಜೀಬ್ರಾ ಕ್ರಾಸಿಂಗ್ ಲೈನ್ ಪಾಸ್ ಮಾಡಿ ಮುಂದೆ ನಿಲ್ಲಿಸಲಾಯಿತು. ತಕ್ಷಣವೇ ಇದೇ ಸಿಗ್ನಲ್‌ನಲ್ಲಿ ನಿಂತಿದ್ದ ಪ್ರಯಾಣಿಕರು ಕಾರಿನ ಫೋಟೋ ತೆಗೆದು ಪಂಜಾಬ್ ಪೊಲೀಸರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ಫೈನ್; ನಡುರಸ್ತೆಯಲ್ಲಿ ಬೈಕ್ ಪುಡಿ ಪುಡಿ!
ತಕ್ಷಣವೇ ಸಾವಿರಾರು ಸಾರ್ವಜನಿಕರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಟ್ವಿಟರ್ ಖಾತೆಯಲ್ಲಿ ಬಂದ ಫೋಟೋ ಪರಿಶೀಲಿಸಿದ ಪೊಲೀಸ್ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಕಾರಣ ಇನ್ಸ್‌ಪೆಕ್ಟರ್ ಜನರಲ್ ಪೊಲೀಸ್ ಅವರ ಕಾರು ನಿಯಮ ಉಲ್ಲಂಘನೆ ಮಾಡಿತ್ತು. ಹೀಗಾಗಿ ಅನಿವಾರ್ಯವಾಗಿ ಇನ್ಸ್‌ಪೆಕ್ಟರ್ ಜನರಲ್ ಪೊಲೀಸ್ ಕಾರಿಗೆ ಡಬಲ್ ಫೈನ್ ಹಾಕಲಾಗಿದೆ.
ಇದನ್ನೂ ಓದಿ: ಟ್ರಾಫಿಕ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋದವರಿಗೆ 15 ಸಾವಿರ ದಂಡ !
ಜಿಬ್ರಾ ಕ್ರಾಸಿಂಗ್ ಲೈನ್ ಪಾಸಾದರೆ ನೂತನ ನಿಯಮ ಪ್ರಕಾರ 500 ರೂಪಾಯಿ ದಂಡ. ಆದರೆ ಪೊಲೀಸರಿಗೆ ನಿಯಮ ಉಲ್ಲಂಘಿಸಿದರೆ ಡಬಲ್ ಫೈನ್. ಹೀಗಾಗಿ ಚಂಡೀಘಡ ಇನ್ಸ್‌ಪೆಕ್ಟರ್ ಜನರಲ್ ಪೊಲೀಸ್ 1000 ರೂಪಾಯಿ ದಂಡ ಕಟ್ಟಬೇಕಾಯಿತು.