ಕಡಿಮೆ ಬೆಲೆಯ ದಾಟ್ಸನ್ SUV ಕಾರು ಬಿಡುಗಡೆಗೆ ರೆಡಿ!

Suvarna News   | Asianet News
Published : Jan 02, 2020, 06:28 PM IST
ಕಡಿಮೆ ಬೆಲೆಯ ದಾಟ್ಸನ್ SUV ಕಾರು ಬಿಡುಗಡೆಗೆ ರೆಡಿ!

ಸಾರಾಂಶ

ದಾಟ್ಸನ್ ಕಂಪನಿ ಭಾರತದಲ್ಲಿ ಕಡಿಮೆ ಬೆಲೆಯ ಕಾರುಗಳನ್ನು ಬಿಡುಗಡೆ ಮಾಡೋ ಮೂಲಕ ಭಾರತದಲ್ಲಿ ಜನಪ್ರಿಯವಾಗಿದೆ. ಡಾಟ್ಸನ್ ರಿಡಿ ಗೋ, ದಾಟ್ಸನ್ ಪ್ಲಸ್ ಸೇರಿದಂತೆ ಎಲ್ಲಾ ಕಾರುಗಳು ಕಡಿಮೆ ಬೆಲೆಯ ಹಾಗೂ ಅತ್ಯುತ್ತಮ ಕಾರುಗಳನ್ನು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ದಾಟ್ಸನ್ 4m SUV ಕಾರು ಬಿಡುಗಡೆ ಮಾಡುತ್ತಿದೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನವದೆಹಲಿ(ಜ.02): ಸಬ್ 4 ಮೀಟರ್ SUV ವಿಭಾಗದಲ್ಲಿ ಮಾರುತಿ ಬ್ರೆಜ್ಜಾ ಅಗ್ರಸ್ಥಾನ ಕಾಪಾಡಿಕೊಂಡು ಬಂದಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಮಹಿಂದ್ರ XUV300, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಸೇರಿದಂತೆ ಹಲವು ಕಾರುಗಳು ಬಿಡುಗಡೆಯಾಗಿದೆ. ಇದೀಗ ದಾಟ್ಸನ್ ಮೊದಲ SUV ಕಾರು ಬಿಡುಗಡೆ ಮಾಡುತ್ತಿದೆ.  ಈ ಹಿಂದಿನ ಕಾರುಗಳಂತೆ ದಾಟ್ಸನ್ ಕಡಿಮೆ ಬೆಲೆಯಲ್ಲಿ SUV ಕಾರು ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ ದಾಟ್ಸನ್ ಹೊರತಂದಿದೆ 2 ಹೊಸ ಕಾರು!..

ಆಕರ್ಷಕ ವಿನ್ಯಾಸ, ಆಧುನಿಕ ತಂತ್ರಜ್ಞಾನ ಹಾಗೂ ಕಡಿಮೆ ಬೆಲೆ ಮೂಲಕ ಮಾರುತಿ ಬ್ರೆಜ್ಜಾ ಕಾರಿಗೆ ಪೈಪೋಟಿ ನೀಡಲು ದಾಟ್ಸನ್ ರೆಡಿಯಾಗಿದೆ. ನೂತನ ಕಾರಿಗೆ ದಾಟ್ಸನ್ ಮಾಗ್ನೈಟ್ ಅನ್ನೋ ಹೆಸರಿಡಲಾಗಿದೆ. ದಾಟ್ಸನ್ ಪಾರ್ಟ್ನರ್ ಕಂಪನಿ ರೆನಾಲ್ಟ್ ಕೂಡ SUV ಕಾರು ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ದಾಟ್ಸನ್ SUV ಕಾರಿನ ಮೂಲಕ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. 

ಇದನ್ನೂ ಓದಿ: ನಿಸಾನ್‌, ಡಾಟ್ಸನ್‌ ಕಾರು ಕೊಳ್ಳುವವರಿಗೆ ಭರ್ಜರಿ ಆಫರ್!.

ದಾಟ್ಸನ್ ನೂತನ ಕಾರು 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿದೆ. ಈ ಕಾರಿನಲ್ಲಿ ಡಿಸೆಲ್ ವೆರಿಯೆಂಟ್ ಲಭ್ಯವಿಲ್ಲ. ನೂತನ ಕಾರಿನ ಬೆಲೆ 6 ಲಕ್ಷ ರೂಪಾಯಿಂದ ಗರಿಷ್ಠ 9 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಬ್ ಕಾಂಪಾಕ್ಟ್ SUV ಕಾರುಗಳ ಬೈಲೆ ಪೈಕಿ ಇದು ಅತ್ಯಂತ ಕಡಿಮೆ ಬೆಲೆಯ ಕಾರು. ನೂತನ ಕಾರು 2020ರ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ