ಕೆಟ್ಟ ರಸ್ತೆಯಲ್ಲಿ ಕೈಕೊಟ್ಟ BMW ಕಾರು, ಎತ್ತಿನ ಗಾಡಿಯಲ್ಲಿ ಆಫೀಸ್ ತಲುಪಿದ ಉದ್ಯಮಿ!

By Suvarna NewsFirst Published Jun 9, 2020, 2:53 PM IST
Highlights

 ಲಾಕ್‌ಡೌನ್ ಸಡಿಲಿಕೆ ಮಾಡಿದ ಕಾರಣ ಬಹುತೇಕ ಎಲ್ಲಾ ಕಚೇರಿಗಳು, ಉದ್ಯಮಗಳು ಆರಂಭಗೊಂಡಿದೆ. ಸುದೀರ್ಘ ದಿನಗಳ ಬಳಿಕ ತನ್ನ ಕಚೇರಿಗೆ BMW ಕಾರಿನ ಮೂಲಕ ಪ್ರಯಾಣ ಆರಂಭಿಸಿದ ಉದ್ಯಮಿ, ಕೊನೆಗೆ ಆಫೀಸ್ ತಲುಪಿದ್ದು ಎತ್ತಿನ ಗಾಡಿ ಮೂಲಕ. ಈ ರೋಚಕ ಸ್ಟೋರಿ ಇಲ್ಲಿದೆ.
 

ಮಧ್ಯ ಪ್ರದೇಶ(ಜೂ.09): ಸುದೀರ್ಘ ದಿನಗಳ ಬಳಿಕ ಇದೀಗ ಜನರು ತಮ್ಮ ತಮ್ಮ ಆಫೀಸ್‌ನತ್ತ ಮುಖ ಮಾಡುತ್ತಿದ್ದಾರೆ. ಹಲವರಿಗೆ ಕಚೇರಿಗೆ ತೆರಳು ರಸ್ತೆಗಳೇ ಮರೆತು ಹೋಗಿದೆ. ಹೀಗೆ ಮಧ್ಯ ಪ್ರದೇಶದ ಪಲ್ಲಾಡ ಕೈಗಾರಿಕಾ ಪ್ರದೇಶದಲ್ಲಿ ವಿಚಿತ್ರ ಘಟನೆ ನಡೆದಿದೆ. ಲಾಕ್‌ಡೌನ್ ಸಡಿಲಿಕೆ ಕಾರಣ ಕೈಗಾರಿಕೆಗಳು ಆರಂಭಗೊಂಡಿದೆ. ಹೀಗಾಗಿ ಉದ್ಯಮಿ ಹಾಗೂ ಪಲ್ಲಾಡ ಕೈಗಾರಿಕೆ  ಸಂಘದ ಅಧ್ಯಕ್ಷ ಪ್ರಮೋದ್ ಜೈನ್ ಸಂಕಷ್ಟಕ್ಕೆ ಸಿಲುಕಿ, ಪರದಾಡಿ ಆಫೀಸ್ ತಲುಪಿದ್ದಾರೆ.

BS6 ಎಮಿಶನ್ ಜೊತೆ ಮತ್ತೊಂದು ನಿಯಮ ಕಡ್ಡಾಯ ಮಾಡಿದ ಕೇಂದ್ರ ಸರ್ಕಾರ!

ಕೈಗಾರಿಕಾ ಪ್ರದೇಶವಾದ ಕಾರಣ ಸರಕು ಸಾಮಾನುಗಳ ಲಾರಿ, ಟ್ರಕ್ ಆಗಮಿಸುತ್ತಿರುವ ಕಾರಣ ಡಾಮರು ಕಾಣದೇ ವರ್ಷಗಳಾಗಿದ್ದ ರಸ್ತೆ ಕಿತ್ತು ಹೋಗಿದೆ. ಜೊತೆಗೆ ಮಳೆ ಬಂದ ಕಾರಣ ರಸ್ತೆ ನದಿಯಂತಾಗಿದೆ. ಇತ್ತ ಕೈಗಾರಿಕಾ ಸಂಘದ ಅಧ್ಯಕ್ಷ, ಎಲ್ಲಾ ಕೈಗಾರಿಕೆಗಳಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮ ಹಾಗೂ ಇತರ ಮಾಹಿತಿ ಪರಿಶೀಲಿಸಲು ತೆರಳಿದ್ದಾರೆ. ಪ್ರಮೋದ್ ಜೈನ್ ತಮ್ಮ BMW ಕಾರಿನ ಮೂಲಕ ಪಲ್ಲಾಡ ಕೈಗಾರಿಕಾ ಪ್ರದೇಶಕ್ಕೆ ಎಂಟ್ರಿಕೊಡುತ್ತಿದ್ದಂತೆ ಕೆಟ್ಟ ರಸ್ತೆ ನೋಡಿ ಬೆಚ್ಚಿ ಬಿದ್ದಿದ್ದಾರೆ.

 

Industrialists in Palada, M.P. ride bullock carts to work. Stage protest against poor road conditions, complain about pits & muddy roads pic.twitter.com/B8XzhiMvjh

— Mojo Story (@themojo_in)

ಸಂಪೂರ್ಣ ರೋಡಿನಲ್ಲಿ ಅತ್ತಿಂದಿತ್ತ ಕಾರು ಡ್ರೈವ್ ಮಾಡುತ್ತಾ ಮುಂದೆ ಸಾಗಿದ ಪ್ರಮೋದ್ ಜೈನ್‌ಗೆ ಎದುರಿಗೆ ರಸ್ತೆಯೇ ಕಾಣದಂತಾಗಿದೆ. ಕೆಸರು, ಗುಂಡಿ, ನೀರಿಂದ ತುಂಬಿ ಹೋಗಿತ್ತು. ಹೀಗಾಗಿ BMW ಕಾರು ಮುಂದಕ್ಕೆ ಚಲಿಸಲಿಲ್ಲ. ಕಾರಿನಿಂದ ಇಳಿದ ಪ್ರಮೋದ್ ಜೈನ್ ಹಾಗೂ ಕಾರ್ಯದರ್ಶಿ ಕೊನೆಗೆ ಎತ್ತಿನ ಗಾಡಿ ಮೂಲಕ ಅಫೀಸ್‌ಗೆ ತೆರಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎತ್ತಿನ ಗಾಡಿಯಲ್ಲಿ ಹರಸಾಹಸ ಮಾಡಿ ಆಫೀಸ್ ತಲುಪಿದ್ದಾರೆ. ಬಳಿಕ ಕೆಟ್ಟ ರಸ್ತೆ ವಿರುದ್ಧ ಕಿಡಿ ಕಾರಿದ್ದಾರೆ. ಸುಮಾರು 450 ಕೈಗಾರಿಕೆಗಳು, ಫ್ಯಾಕ್ಟರಿಗಳು ಪಲ್ಲಾಡ ವಲಯದಲ್ಲಿದೆ. ಎಲ್ಲಾ ಕಂಪನಿಗಳಿಗೆ ಕೆಟ್ಟ ರಸ್ತೆಯಿಂದ ಸಮಸ್ಯೆ ಎದುರಾಗಿತ್ತಿದೆ. ಕಂಪನಿಗೆ ಆಗಮಿಸುವವರು 2 ಕಿ.ಮೀ ದೂರದಲ್ಲಿ ಕಾರು, ಬೈಕ್ ನಿಲ್ಲಿಸಿ ನಡೆದುಕೊಂಡು, ಜೀಪ್ ಮೂಲಕ ಕಂಪನಿಗೆ ಆಗಮಿಸುತ್ತಿದ್ದಾರೆ ಎಂದು ಪ್ರಮೋದ್ ಜೈನ್ ಹೇಳಿದ್ದಾರೆ.

ಸರ್ಕಾರಗಳು ಮೂಲ ಸೌಕರ್ಯ  ಅಭಿವೃದ್ಧಿಗೆ ಗಮನಹರಿಸಬೇಕು. ಇದು ಈ ಕೈಗಾರಿಕ ಪ್ರದೇಶ ಮಾತ್ರವಲ್ಲ, ಬಹುಚೇಕ ಕಡೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಹೀಗಾಗಿ ಇದು ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಪ್ರಮೋದ್ ಜೈನ್ ಹೇಳಿದ್ದಾರೆ.

click me!