ಅಂಬಾಸಿಡರ್‌ಗೆ ಗುಡ್‌ಬೈ; ಭಾರತೀಯ ಸೇನೆಗೆ ಮಹೀಂದ್ರ E ವೆರಿಟೊ ಕಾರು!

By Web DeskFirst Published Aug 6, 2019, 6:54 PM IST
Highlights

ಸೇನೆ ಅಂದರೆ ಸೈನಿಕರು ಮಾತ್ರವಲ್ಲ. ಮದ್ದುಗುಂಡುಗಳಲ್ಲ, ಕೇವಲ ಶಸ್ತ್ರಾಸ್ತಗಳಲ್ಲ. ಪಿಸ್ತೂಲು ಬಂದೂಕು ಯುದ್ಧವಿಮಾನಗಳಲ್ಲ. ದೇಶ ಕಾಯುವ ಒಂದು ಸೂಜಿಪಿನ್ನೂ ಯೋಧನೇ ಹೌದು. ದಶಕಗಳ ಕಾಲ ಭಾರತೀಯ ಸೇನೆಯ ಸವಾರಕನಾಗಿದ್ದ ನಂಬಿಕಸ್ಥ ಅಂಬಾಸಿಡರ್ ಕಾರ್ ಸೇನೆಗೆ ಗುಡ್ ಬೈ ಹೇಳುತ್ತಿದೆ. ಜೈ ಹಿಂದ್ ಹಿಂದೂಸ್ಥಾನ್ ಮೋಟಾರ್ಸ್ !

ನವದೆಹಲಿ(ಆ.06): ಹಿಂದೂಸ್ತಾನ್ ಅಂಬಾಸಿಡರು ಕಾರು ಸದ್ಯ ಸರ್ಕಾರಿ ಅಧಿಕಾರಿಗಳು ಬಳಿ ಮಾತ್ರ ಕಾಣಸಿಗುತ್ತವೆ. ಇದೀಗ ಬಹುತೇಕ ಸರ್ಕಾರಿ ಕಚೇರಿಗಳು ಅಂಬಾಸಿಡರ್ ಕಾರು ಬದಲು ಮಾರುತಿ ಸಿಯಾಝ್ ಹಾಗೂ ಮಾರುತಿ ಡಿಸೈರ್ ಕಾರು ಉಪಯೋಗಿಸುತ್ತಿವೆ. ಭಾರತೀಯ ಸೇನೆಯಲ್ಲಿ ಸೇನಾಧಿಕಾರಿಗಳು ಕೂಡ ಅಂಬಾಸಿಡರ್ ಕಾರು ಬಳಕೆ ಮಾಡುತ್ತಿದ್ದರು. ಇದೀಗ ಅಂಬಾಸಿಡರ್ ಕಾರಿಗೆ ಗುಡ್‌ ಬೈ ಹೇಳಿರುವ ಇಂಡಿಯನ್ ಆರ್ಮಿ, ನೂತನ ಮಹೀಂದ್ರ ಇ ವೆರಿಟೋ ಎಲೆಕ್ಟ್ರಿಕ್ ಕಾರು ಖರೀದಿಸಿದೆ.

ಇದನ್ನೂ ಓದಿ: ಭಾರತೀಯ ಸೇನೆಗೆ ಬಲಿಷ್ಠ ಟಾಟಾ ಮರ್ಲಿನ್ LSV ವಾಹನ!

ಅಂಬಾಸಿಡರ್ ಕಾರಿನ ಬದಲು ಭಾರತೀಯ ಸೇನೆ ಮಹೀಂದ್ರ ಇ ವೆರಿಟೋ ಕಾರು ಬಳಕೆ ಮಾಡುತ್ತಿದೆ. ಸದ್ಯ ಭಾರತೀಯ ಸೇನೆ 10 ಇ ವೆರಿಟೋ ಕಾರು ಖರೀದಿಸಿದೆ. ಶೀಘ್ರದಲ್ಲೇ ಹೆಚ್ಚಿನ ಇ ವೆರಿಟೋ ಎಲೆಕ್ಟ್ರಿಕ್ ಕಾರು ಖರೀದಿಸಲು ಸೇನೆ ಮುಂದಾಗಿದೆ. ಇಷ್ಟೇ ಅಲ್ಲ ಕೇಂದ್ರ ಸರ್ಕಾರ ಬರೋಬ್ಬರಿ 10,000 ಎಲೆಕ್ಟ್ರಿಕ್ ಕಾರುಗಳನ್ನು ವಿವಿದ ಸರ್ಕಾರಿ ಕಚೇರಿಗಳಿಗೆ ನೀಡಲು ಮುಂದಾಗಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನ ಮೇಲಿನ GST(ತೆರಿಗೆ) ಕಡಿತಗೊಳಿಸಿದ ಬೆನ್ನಲ್ಲೇ, ಮಹೀಂದ್ರ ಇ ವೆರಿಟೋ ಕಾರಿನ ಬೆಲೆ 80,000ರೂಪಾಯಿ ಇಳಿಕೆಯಾಗಿದೆ. ಎಲೆಕ್ಟ್ರಿಕ್ ಸೆಡಾನ್ ಇ ವೆರಿಟೊ ಕಾರು 3 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.  E2, E4 ಹಾಗೂ E6 ಟ್ರಿಮ್.  E2 ಬೆಲೆ 15.95 ಲಕ್ಷ,  E4 ಬೆಲೆ 16.24 ಲಕ್ಷ ಹಾಗೂ E6 ಬೆಲೆ 16.36ಲಕ್ಷ ರೂಪಾಯಿ( ದೆಹಲಿ ಆನ್ ರೋಡ್ ಬೆಲೆ). ಇ ವೆರಿಟೋ ಕಾರು ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು,  42 Bhp ಪವರ್ ಹಾಗೂ 91 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಎಲ್ಲಾ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
 

click me!