ಪೈಲಟ್ ಆಗಲು ಬಿಡದ ಬಡತನ| ಪೈಲಟ್ ಆಗದಿದ್ದರೇನಂತೆ, ಹೆಲಿಕಾಪ್ಟರ್ ನಿರ್ಮಿಸಿದ ರೈನ ಮಗ| ಈತನ ಆವಿಷ್ಕಾರ ಕಂಡು ಇಡೀ ಊರೇ ಈತನೆಡೆ ಬೆರಗು ಕಣ್ಣುಗಳಿಂದ ನೋಡುತ್ತೆ
ಪಾಟ್ನಾ[ಆ.06]: ಬಿಹಾರದ ಓರ್ವ ಯುವಕ ಬಾಲ್ಯದಿಂದಲೂ ತಾನೊಬ್ಬ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದ, ಆದರೆ ಬಡತನದಿಂದಾಗಿ ಆತನ ಈ ಕನಸು ನನಸಾಗಲಿಲ್ಲ. ಆದರೆ ಇದರಿಂದ ಧೃತಿಗೆಡದ ಆತ ತನ್ನದೇ ಹೆಲಿಕಾಪ್ಟರ್ ಒಂದನ್ನು ನಿರ್ಮಿಸಿದ್ದಾನೆ. ಸದ್ಯ ೀತನ ಈ ಆವಿಷ್ಕಾರ ವಿಶ್ವದ ಗಮನ ಸೆಳೆದಿದೆ. ಸದ್ಯ ಈತನ ಕಠಿಣ ಪರಿಶ್ರಮ ಫಲ ಕೊಟ್ಟಿದ್ದು, ಖುದ್ದು ಇಂಜಿನಿಯರ್ ಗಳು ಕೂಡಾ ಇದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಿಹಾರದ ಛಾಪ್ರಾದ ಯುವಕ ಮಿಥಿಲೇಶ್
ವರದಿಗಳನ್ವಯ ಈ ಯುವಕ ಬಿಹಾರದ ಛಾಪ್ರಾದ ರೈತ ಕುಟುಂಬದಲ್ಲಿ ಜನಿಸಿದ ಮಿಥಿಲೇಶ್ ತಾನೊಬ್ಬ ಪೈಲೆಟ್ ಆಗಬೇಕೆಂಬ ಕನಸು ಹೊತ್ತಿದ್ದ. ಆದರೆ ಆರ್ಥಿಕ ಸ್ಥಿತಿ ಚೆನ್ನಾಗಿರದ ಪರಿಣಾಮ ಅವರ ಈ ಇಚ್ಛೆ ಈಡೇರಲಿಲ್ಲ.
ಗಾಳಿಯಲ್ಲಿ ಹಾರುವುದಿಲ್ಲ ಈ ಹೆಲಿಕಾಪ್ಟರ್
ಮಿಥಿಲೇಶ್ ಪೈಲಟ್ ಆಗಬೇಕೆಂಬ ತನ್ನ ಆಸೆ ಈಡೇರಿಸಲು ಒಂದು ಟಾಟಾ ನ್ಯಾನೋ ಕಾರು ಖರೀದಿಸಿ, ಅದಕ್ಕೆ ಹೆಲಿಕಾಪ್ಟರ್ ರೂಪ ಕೊಟ್ಟಿದ್ದಾನೆ. ಈ ಕಾರಿನ ಡಿಸೈನ್ ಹೆಲಿಕಾಪ್ಟರ್ ನಂತಿದೆ. ಆದರೆ ಇದೊಂದು ಕಾರು-ಹೆಲಿಕಾಪ್ಟರ್ ಆಗಿದ್ದು, ಇದು ಕೇವಲ ರಸ್ತೆ ಮೇಲೆ ಚಲಿಸುತ್ತದೆ. ಈ ಕಾರು ಮಕ್ಕಳಿಗೆ ಬಹಳ ಇಷ್ಟವಾಗಿದೆ. ಅಲ್ಲದೇ ಮಿಥಿಲೇಶ್ ಇದನ್ನು ಡ್ರೈವ್ ಮಾಡಿಕೊಂಡು ಹೋಗುವಾಗ ಜನರೆಲ್ಲಾ ಆತನೆಡೆ ನೋಡುತ್ತಾರಂತೆ.