73ನೇ ಸ್ವಾತಂತ್ರ್ಯ ದಿನಾಚರಣೆ; ಬದಲಾಯಿತು ಪ್ರಧಾನಿ ಮೋದಿ ಕಾರು!

By Web Desk  |  First Published Aug 15, 2019, 4:40 PM IST

ದೇಶದಲ್ಲಿ ಮಹತ್ತರ ಬದಲಾವಣೆ ತಂದಿರುವ ಪ್ರಧಾನಿ ನರೇಂದ್ರ ಮೋದಿ 73ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹೊಸ ಕನಸಿನ ಭಾರತ ಕಟ್ಟೋ ಭರವಸೆ ನೀಡಿದ್ದಾರೆ. ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿದ ಮೋದಿ, ತಮ್ಮ  ಕಾರು ಬದಲಾಯಿಸಿದ್ದಾರೆ. ಪ್ರಧಾನಿ ಮೋದಿ ರೇಂಜ್ ರೋವರ್ ಕಾರಿನ ಬದಲು ಬಳಸಿದ ಕಾರು ಯಾವುದು? ಇಲ್ಲಿದೆ ವಿವರ.


ದೆಹಲಿ(ಆ.15):  73ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಭಾರತೀಯರಿಗೆ ಸ್ಮರಣೀಯವಾಗಿದೆ. ಕಾರಣ, ಮಂಗಳಯಾನ, ಜಮ್ಮು ಮತ್ತು ಕಾಶ್ಮೀರ ಮೇಲಿನ ಆರ್ಟಿಕಲ್ 370 ರದ್ದು ಸೇರಿದಂತೆ ಹಲವು ಮಹತ್ವದ ಘಟ್ಟಗಳನ್ನು ಭಾರತ ದಾಟಿ ಮುಂದೆ ಸಾಗಿದೆ. ದೆಹಲಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೇರವೆರಿಸಿದ ಪ್ರಧಾನಿ ನರೇಂದ್ರ ಮೋದಿ, ಹೊಸ ಭಾರತದ ಕನಸನ್ನು ತೆರೆದಿಟ್ಟಿದ್ದಾರೆ. ಒಂದು ರಾಷ್ಟ್ರ ಒಂದು ಮತ, ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮ ಸೇರಿದಂತೆ ಹಲವು ಸುಧಾರಣೆಗಳ ಕುರಿತು ಮೋದಿ ಬೆಳಕು ಚೆಲ್ಲಿದ್ದಾರೆ. ಭಾರತವನ್ನು ಬದಲಾಯಿಸುವ ಮೋದಿ ಇದೀಗ ತಮ್ಮ ಕಾರನ್ನು ಬದಲಾಯಿಸಿದ್ದಾರೆ.

ಇದನ್ನೂ ಓದಿ: ಭಾರತದ 2ನೇ ಪ್ರಧಾನ ಮಂತ್ರಿ ಕಾರು ಖರೀದಿಸಲು ಸಾಲ ಮಾಡಿದ್ದರು!

Latest Videos

2017ರಿಂದ ಪ್ರಧಾನಿ ಮೋದಿ ಸರ್ಕಾರಿ ಕಾರ್ಯಕ್ರಮ, ಸ್ವಾತಂತ್ರ್ಯ ದಿನಾಚರಣೆ, ಗಣರಾಜೋತ್ಸವ, ಕಚೇರಿ ತೆರಳಲು ಸೇರಿದಂತೆ ಎಲ್ಲಾ ಕಾರ್ಯಕ್ಕೂ ಗರಿಷ್ಠ ಸುರಕ್ಷತೆಯ ರೇಂಜ್ ರೋವರ್ SUV ಕಾರನ್ನು ಬಳಕೆ ಮಾಡುತ್ತಿದ್ದರು. ಆದರೆ 2019ರ ಹಾಗೂ 2ನೇ ಬಾರಿ ಚುನಾಯಿತರಾದ ಬಳಿಕದ ಮೊದಲ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮೋದಿ ತಮ್ಮ ಎಂದಿನ ರೇಂಜ್ ರೋವರ್ ಬದಲು ಟೊಯೊಟಾ ಲ್ಯಾಂಡ್ ಕ್ರೂಸರ್ ವಾಹನ ಬಳಸಿದ್ದಾರೆ.

ಇದನ್ನೂ ಓದಿ: ಮೋದಿ ಮನೆ ಸಮೀಪ ಕಾರ್ ಸ್ಟಂಟ್; ಹಣಕಾಸು ಸಚಿವನ ಸಂಬಂಧಿ ಅರೆಸ್ಟ್!

ಹಾಗಂತ ಮೋದಿ ಟೊಯೊಟಾ ಲ್ಯಾಂಡ್ ಕ್ರೂಸರ್ ವಾಹನ ಬಳಸುತ್ತಿರುವುದು ಇದೇ ಮೊದಲಲ್ಲ. ಮೋದಿ ತಮ್ಮ ತವರೂರಾದ ಅಹಮ್ಮದಾಬಾದ್‌ನಲ್ಲಿ ಟೊಯೊಟಾ ಲ್ಯಾಂಡ್ ಕ್ರೂಸರ್ ವಾಹನ ಬಳಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ ದೆಹಲಿಯಲ್ಲಿನ ಸರ್ಕಾರಿ ಕಾರ್ಯಕ್ರಮದಲ್ಲಿ ಲ್ಯಾಂಡ್ ಕ್ರೂಸ್ ವಾಹನ ಬಳಸಿದ್ದಾರೆ.  ರೇಂಜ್ ರೋವರ್ ಕಾರು ಬಳಕೆ ಮಾಡುತ್ತಿದ್ದಾಗ, ಬೆಂಗಾವಲು ಪಡೆ ಲ್ಯಾಂಡ್ ರೋವರ್ ಕಾರು ಬಳಕೆ ಮಾಡುತ್ತಿದ್ದರು. ಆದರೆ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿ ಟೊಯೊಟಾ ಲ್ಯಾಂಡ್ ಕ್ರೂಸರ್ ಬಳಸಿದರೆ, ಕಾನ್ವಾಯ್ ಕಾರುಗಳಾಗಿ ಟೊಯೊಟಾ ಫಾರ್ಚುನರ್ ಕಾರು ಬಳಕೆ ಮಾಡಲಾಗಿದೆ.

2014ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿ  BMW 7-ಸೀರಿಸ್ ಕಾರು ಬಳಕೆ ಮಾಡಿದ್ದರು. 2017ರ ವರೆಗೆ  BMW 7-ಸೀರಿಸ್ ಕಾರು ಬಳಸುತ್ತಿದ್ದರು. ಈ ವೇಳೆ ಮೋದಿಗೆ ಬೆಂಗಾವಲು ಪಡೆಗಳು  BMW 5 ಸೀರಿಸ್ ಕಾರು ಬಳಕೆ ಮಾಡುತ್ತಿತ್ತು. 2017ರಲ್ಲಿ  BMW 7 ಸೀರಿಸ್ ಕಾರಿನಿಂದ ರೇಂಜ್ ರೋವರ್ SUV ಕಾರನ್ನು ಆಯ್ಕೆ ಮಾಡಿಕೊಂಡರು. ಬಳಿಕ ಇಲ್ಲೀವರೆಗೂ ಆಧೀಕೃತ ಕಾರ್ಯಕ್ರಮ, ಸರ್ಕಾರಿ ಕಾರ್ಯಕ್ರಮ, ಚುನಾವಣಾ ಪ್ರಚಾರ ಸೇರಿದಂತೆ ಯಾವುದೇ ಕಾರ್ಯಕ್ಕೂ ರೇಂಜ್ ರೋವರ್ ಕಾರನ್ನೇ ಬಳಕೆ ಮಾಡುತ್ತಿದ್ದರು. ಇದೀಗ ಮೋದಿ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರು ಉಪಯೋಗಿಸಿದ್ದಾರೆ.

click me!