ಬಂಡಾಯದ ಮೂಲಕವೇ ಹೆಚ್ಚು ಸದ್ದುಮಾಡಿದ ಕಾಂಗ್ರೆಸ್ ಅನರ್ಹ ಶಾಸಕ MTB ನಾಗರಾಜ್ ಇದೀಗ ದುಬಾರಿ ಕಾರು ಖರೀದಿಸಿದ್ದಾರೆ. ನಾಗರಾಜ್ ಬರೋಬ್ಬರಿ 13 ಕೋಟಿ ರೂಪಾಯಿ ನೀಡಿ ಐಷಾರಾಮಿ ಕಾರು ಖರೀದಿಸಿದ್ದಾರೆ. ಈ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು(ಆ.14): ಕರ್ನಾಟಕ ರಾಜಕೀಯದಲ್ಲಿ ಬಂಡಾಯದ ಮೂಲಕ ಸರ್ಕಾರವನ್ನು ಕೆಡವಲು ಅನರ್ಹ ಶಾಸಕ MTB ನಾಗರಾಜ್ ಪ್ರಮುಖ ಪಾತ್ರನಿರ್ವಹಿಸಿದ್ದಾರೆ. MTB ಸೇರಿದಂತೆ 16 ಶಾಸಕರು ಮುಂಬೈಗೆ ಹಾರಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಇತ್ತ ಸ್ವೀಕರ್ MTB ಸೇರಿದಂತೆ 14 ಶಾಸಕರನ್ನು ಅನರ್ಹಗೊಳಿಸಿ ಮತ್ತೊಂದು ತಿರುವು ನೀಡಿದ್ದರು. ಹೈಡ್ರಾಮ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಿದೆ. ಬಂಡಾಯದ ಬೇಗುದಿ ಶಾಂತವಾಗಿದೆ. ಇದರ ಬೆನ್ನಲ್ಲೇ ಹೊಸಕೋಟೆ ಕಾಂಗ್ರೆಸ್ ಅನರ್ಹ ಶಾಸಕ MTB ನಾಗರಾಜ್ ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿ ಸದ್ದು ಮಾಡಿದ್ದಾರೆ.
undefined
ಇದನ್ನೂ ಓದಿ: ರೋಲ್ಸ್ ರಾಯ್ಸ್ ಕಲ್ಲಿನಾನ್ ವಿಶ್ವದ ಅತ್ಯಂತ ದುಬಾರಿ SUV ಕಾರು!
MTB ನಾಗರಾಜ್ ನೂತನ ರೋಲ್ಸ್ ರಾಯ್ಸ್ ಪ್ಯಾಂಥಮ್ ಕಾರು ಖರೀದಿಸಿದ್ದಾರೆ. ವಿಶ್ವದ ದುಬಾರಿ ಕಾರು ಖರೀದಿಸಿದ MTB ನಾಗರಾಜ್ ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೊಜೆ ಸಲ್ಲಿಸಿದ್ದಾರೆ. ಬಳಿಕ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಲು MTB ನಾಗರಾಜ್ ನೂತನ ರೋಲ್ಸ್ ರಾಯ್ಸ್ ಪ್ಯಾಂಥಮ್ ಕಾರಿನಲ್ಲಿ ತೆರಳಿದರು.
ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!
ಐಷಾರಾಮಿ ಹಾಗೂ ದುಬಾರಿ ಕಾರುಗಳಲ್ಲಿ ರೋಲ್ಸ್ ರಾಯ್ಸ್‌ಗೆ ಮೊದಲ ಸ್ಥಾನ. ಪ್ಯಾಂಥಮ್ ಕಾರಿನ ಬೆಲೆ 9.50 ಕೋಟಿಯಿಂದ ಆರಂಭವಾಗಲಿದ್ದು, ಗರಿಷ್ಠ ಬೆಲೆ 11.35 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಭಾರತಕ್ಕೆ ಈ ಕಾರುಗಳನ್ನು ದುಬೈನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಹೆಚ್ಚುವರಿ ಸುಂಕ ಕೂಡ ನೀಡಲೇಬೇಕು. ಐಷಾರಾಮಿ ಕಾರು ತೆರಿಗೆ, ರಸ್ತೆ ತೆರಿಗೆ, ಆಮದು ಸುಂಕ ಎಲ್ಲಾ ಸೇರಿದರೆ ಆನ್ ರೋಡ್ ಬೆಲೆ ಸರಿಸುಮಾರು 13 ಕೋಟಿ ರೂಪಾಯಿ .
ಇದನ್ನೂ ಓದಿ: ವಿಶ್ವದ ದುಬಾರಿ SUV ಕಾರು ಖರೀದಿಸಿದ ರೋನಾಲ್ಡೋ!
ಭಾರತದ ಶ್ರೀಮಂತ ಉದ್ಯಮಿ ಅಂಬಾನಿ ಸೇರಿದಂತೆ ಕೆಲವೇ ಕೆಲವರು ರೋಲ್ಸ್ ರಾಯ್ಸ್ ಪ್ಯಾಂಥಮ್ ಕಾರು ಖರೀದಿಸಿದ್ದಾರೆ. ಕರ್ನಾಟಕದಲ್ಲಿ ರೋಲ್ಸ್ ರಾಯ್ಸ್ ಪ್ಯಾಂಥಮ್ ಕಾರು ಹೊಂದಿರುವ 2ನೇ ರಾಜಕಾರಣಿ ಅನ್ನೋ ಹೆಗ್ಗಳಿಕೆಗೆ MTB ನಾಗರಾಜ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ರೋಲ್ಸ್ ರಾಯ್ಸ್ ಪ್ಯಾಂಥಮ್ ಕಾರು ಹೊಂದಿದ್ದಾರೆ. ಇದೀಗ ಈ ಸಾಲಿಗೆ ಕರ್ನಾಟಕದ ಶ್ರೀಮಂತ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ MTB ನಾಗರಾಜ್ ಕೂಡ ಸೇರಿಕೊಂಡಿದ್ದಾರೆ.
ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು 6751 Cc ಎಂಜಿನ್, 12 ಸಿಲಿಂಡರ್ ಹೊಂದಿದ್ದು, 563 bhp ಪವರ್ ಹಾಗೂ 850 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ವೈಟ್ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರಿನ ಮೈಲೇಜ್ 7 Kmpl. ಕಾರಿನ ಗರಿಷ್ಠ ವೇಗ 250 ಕಿ.ಮೀ ಪ್ರತಿ ಗಂಟೆಗೆ.
ಏರ್‌ಬ್ಯಾಗ್, ಎಬಿಎಸ್, ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಶನ್, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಮ್, ಚೈಲ್ಡ್ ಸೇಫ್ಟಿ ಲಾಕ್, ಪವರ್ ಡೋರ್ ಲಾಕ್, ಕ್ರ್ಯೂಸ್ ಕಂಟ್ರೋಲ್, ರೇರ್ ಪಾರ್ಕಿಂಗ್ ಕ್ಯಾಮರ, ಕ್ಲೈಮೇಟ್ ಕಂಟ್ರೋಲ್ ಸೇರಿಂತೆ ಹಲವು ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ.
5 ಜನರು ಆರಾಮದಾಯಕವಾಗಿ ಪ್ರಯಾಣ ಮಾಡಬಲ್ಲ ರೋಲ್ಸ್ ರಾಯ್ಸ್ ಪ್ಯಾಂಥಮ್ ಕಾರು ಇದೀಗ MTB ನಾಗರಾಜ್ ಮನೆ ಸೇರಿಕೊಂಡಿದೆ. ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ MTB, ಕಾರಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶ್ರೀಮಂತ ರಾಜಕಾರಣಿಯಾಗಿರುವ MTB, ಇದೀಗ ಶ್ರೀಮಂತರ ಕಾರನ್ನು ಖರೀದಿಸಿ ಸುದ್ದಿಯಾಗಿದ್ದಾರೆ.
ಕಾರು ಖರೀದಿಗೂ ಮುನ್ನ MTB ನಾಗರಾಜ್, ಪ್ರವಾಹ ಸಂತ್ರಸ್ಥರಿಗೆ 1 ಕೋಟಿ ರೂಪಾಯಿ ನೆರವು ನೀಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ MTB, 1 ಕೋಟಿ ದೇಣಿಗೆ ನೀಡಿದ್ದರು.
ಎಂ. ಟಿ. ಬಿ. ನಾಗರಾಜ್ ಆಸ್ತಿ ಎಷ್ಟು?
2013ರ ಚುನಾವಣೆಯಲ್ಲಿ ತಮ್ಮ ಕುಟುಂಬದ ಆಸ್ತಿ 470 ಕೋಟಿ ಎಂದು ಎಂ. ಟಿ. ಬಿ. ನಾಗರಾಜ್ ಘೋಷಣೆ ಮಾಡಿದ್ದರು. 2018ರ ಚುನಾವಣೆಗೆ ಸ್ಪರ್ಧೆ ಮಾಡುವಾಗ ಅವರು ತಮ್ಮ ವೈಯಕ್ತಿಕ ಆಸ್ತಿ 708 ಕೋಟಿ, ಪತ್ನಿ ಹೆಸರಿನಲ್ಲಿ 306 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದಾರೆ. ಎಂ. ಟಿ. ಬಿ. ನಾಗರಾಜ್ ಹೊಂದಿರುವ ಕೃಷಿಯೇತರ ಭೂಮಿ ಮೌಲ್ಯ 370 ಕೋಟಿ. ಕುಟುಂಬದ ಒಟ್ಟು ಸಾಲ 233 ಕೋಟಿಯಾಗಿದೆ.