ಹೊಸ ವರ್ಷದಲ್ಲಿ ಮಾರುತಿ, ಟಾಟಾ, ಹ್ಯುಂಡೈ ಸೇರಿದಂತೆ ಎಲ್ಲಾ ಕಾರು ಕಂಪನಿಗಳು ಹೊಸ ಹೊಸ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಕೆಲ ಕಂಪನಿಗಳು ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ. ಆದರೆ ಹ್ಯುಂಡೈ ಒಂದು ಹೆಜ್ಜೆ ಮುಂದೆ ಇಟ್ಟಿದೆ. 2020ರಲ್ಲಿ ಹ್ಯುಂಡೈ ಹಾರುವ ಕಾರು ಬಿಡುಗಡೆ ಮಾಡಲಿದೆ.
ಸೌತ್ ಕೊರಿಯಾ(ಡಿ.30): 2020ರ ಹೊಸ ವರ್ಷದಲ್ಲಿ ಆಟೋಮೊಬೈಲ್ ಕ್ಷೇತ್ರ ಗಣನೀಯ ಬದಲಾವಣೆ ಕಾಣಲಿದೆ. 2019ರ ಅಂತ್ಯದಲ್ಲಿ ಎಲೆಕ್ಟ್ರಿಕ್ ಕಾರಿನತ್ತ ಎಲ್ಲಾ ದೇಶಗಳು ಗಮನ ಕೇಂದ್ರೀಕರಿಸಿದರೆ, 2020ರಲ್ಲಿ ಹಾರುವ ಕಾರು(ಫ್ಲೆಯಿಂಕ್ ಕಾರ್) ನಿರ್ಮಾಣಕ್ಕೆ ಪ್ರಮುಖ ಕಾರು ಕಂಪನಿಗಳು ಮುಂದಾಗಿದೆ. ಇದೀಗ ಹ್ಯುಂಡೈ ಕೂಡ ಹಾರುವ ಕಾರು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.
ಇದನ್ನೂ ಓದಿ: ಟಾಟಾ ಮೋಟಾರ್ಸ್ ಕ್ರಾಂತಿ; ಬಿಡುಗಡೆಯಾಗಲಿದೆ 12 ಹೊಸ ಕಾರು!
undefined
ನಗರ ಪ್ರದೇಶಗಳ ಭವಿಷ್ಯದ ಸಾರಿಗೆ ಎಂದೇ ಬಿಂಬಿತವಾಗಿರುವ ಹಾರುವ ಕಾರಿನತ್ತ ಹ್ಯುಂಡೈ ಗಮನ ಕೇಂದ್ರಿಕರಿಸಿದೆ. ಈ ಮೂಲಕ ಹ್ಯುಂಡೈ ತನ್ನ ಮೊತ್ತ ಮೊದಲ ಹಾರುವ ಕಾರು ಅನಾವರಣಕ್ಕೆ ತಯಾರಿ ನಡೆಸಿದೆ. ಹ್ಯುಂಡೈ ಅರ್ಬನ್ ಏರ್ ಮೊಬಿಲಿಟಿ ವಿಭಾಗದಡಿಯಲ್ಲಿ ಹಾರುವ ಕಾರು ನಿರ್ಮಾಣಗೊಳ್ಳಲಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ; ಬಿಡುಗಡೆಯಾಗುತ್ತಿದೆ ಸಣ್ಣ ಮಾರುತಿ ಕಾರು!.
ಖ್ಯಾತ ಏರೋನಾಟಿಕ್ಸ್ ಎಂಜಿನೀಯರ್ ಡಾ.ಜೈವೊನ್ ಶಿನ್ ಹ್ಯುಂಡೈ ಅರ್ಬನ್ ಏರ್ ಮೊಬಿಲಿಟಿ ವಿಭಾಗದ ನೇತೃತ್ವ ವಹಿಸಿದ್ದಾರೆ. 2020ರಲ್ಲಿ ಹ್ಯುಂಡೈ ತನ್ನ ಹಾರುವ ಕಾರು ಅನಾವರಣ ಮಾಡಲು ಉದ್ದೇಶಿಸಿದೆ. ಶೀಘ್ರದಲ್ಲೇ ಹ್ಯುಂಡೈ ಹಾರುವ ಕಾರಿನ ಟೀಸರ್ ಬಿಡುಗಡೆಯಾಗಲಿದೆ. ಈ ಕಾರಿಗಾಗಿ ಹ್ಯುಂಡೈ ಖರ್ಚು ಮಾಡುತ್ತಿರುವ ಹಣ, ಹಾರುವ ಕಾರಿನ ಅಂದಾಜು ಬೆಲೆ ಮಾಹಿತಿ ಬಹಿರಂಗವಾಗಿಲ್ಲ.