ಭಾರತದಲ್ಲಿ ಬಜಾಜ್ ಬೈಕ್‌ಗಳಿಗೆ ಭಾರಿ ಬೇಡಿಕೆ ಯಾಕೆ?

Published : Nov 02, 2018, 03:18 PM IST
ಭಾರತದಲ್ಲಿ ಬಜಾಜ್ ಬೈಕ್‌ಗಳಿಗೆ ಭಾರಿ ಬೇಡಿಕೆ ಯಾಕೆ?

ಸಾರಾಂಶ

ಡೋಮಿನಾರ್, ಪಲ್ಸಾರ್ ಸೇರಿಂತೆ ಬಜಾಜ್ ಕಂಪೆನಿಯ ಬೈಕ್‌ಗಳು ಭಾರತದಲ್ಲಿ ಹೆಚ್ಚು ಜನಪ್ರಿಯ. ಇದೀಗ ಬಜಾಜ್ ಬೈಕ್‌ಗಳಿಗೆ ಭಾರತದಲ್ಲಿ ಬಹು ಬೇಡಿಕೆ ಎರ್ಪಟ್ಟಿದೆ. ಅಷ್ಟಕ್ಕೂ ಬಜಾಜ್ ಬೈಕ್‌ಗಳಿಗೆ ಭಾರಿ ಬೇಡಿಕೆ ಯಾಕೆ?  

ನವದೆಹಲಿ(ನ.02): ಭಾರತದ ಬಜಾಜ್ ಬೈಕ್ ಇತರ ಬೈಕ್‌ಗಳಿಗೆ ಹೋಲಿಸಿದರೆ ಕಡಿಮೆ ಬೆಲೆ ಹಾಗೂ ಆಕರ್ಷಕ ಲುಕ್ ಹೊಂದಿದೆ. ಹೀಗಾಗಿಯೇ ಭಾರತದಲ್ಲಿ ಬಜಾಜ್ ಬೈಕ್‌ಗಳಿಗೆ ಭಾರಿ ಬೇಡಿಕೆ ಇದೆ. ಇದೀಗ ಅಕ್ಟೋಬರ್ ತಿಂಗಳಲ್ಲಿ ಬಜಾಜ್ ಬೈಕ್ ಮಾರಾಟದ ಅಂಕಿ ಅಂಶಗಳು ಇದನ್ನ ಸಾಬೀತುಪಡಿಸುತ್ತಿದೆ.

2018ರ ಅಕ್ಟೋಬರ್‌ನಲ್ಲಿ ಬಜಾಜ್‌ನ 5 ಲಕ್ಷ ಬೈಕ್‌ಗಳು ಮಾರಾಟವಾಗಿದೆ. ಈ ಮೂಲಕ ಮಾರಾಟದಲ್ಲಿ 32% ಏರಿಕೆ ಕಂಡಿದೆ. 2017ರ ಅಕ್ಟೋಬರ್‌ನಲ್ಲಿ 3,82,464 ಬೈಕ್ ಮಾರಾಟವಾಗಿತ್ತು. ಇದೀಗ 2018ರ ಅಕ್ಟೋಬರ್‌ನಲ್ಲಿ 5,06,699 ಬೈಕ್ ಮಾರಾಟವಾಗಿದೆ.

ಬಜಾಜ್ ಶೀಘ್ರದಲ್ಲೇ ಪಲ್ಸಾರ್ 150 ಬೈಕ್ ಬಿಡುಗಡೆ ಮಾಡಲಿದೆ. ಹೊಸ ಅವತಾರದಲ್ಲಿ ಬಿಡುಗಡೆಯಾಗಲಿರುವ ಪಲ್ಸಾರ್ ಬೈಕ್ ಎಬಿಎಸ್ ಬೈಕ್ ಸೇರಿದಂತೆ ಹೆಚ್ಚುವರಿ ಫೀಚರ್ಸ್ ಹೊಂದಿದೆ.


 

PREV
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು