ಆಯ್ದ ಕಾರುಗಳಿಗೆ ಡಿಸ್ಕೌಂಟ್ ಆಫರ್ ಘೋಷಿಸಿದ ಹ್ಯುಂಡೈ!

Published : Aug 11, 2020, 07:02 PM IST
ಆಯ್ದ ಕಾರುಗಳಿಗೆ ಡಿಸ್ಕೌಂಟ್ ಆಫರ್ ಘೋಷಿಸಿದ ಹ್ಯುಂಡೈ!

ಸಾರಾಂಶ

ಹ್ಯುಂಡೈ ಇಂಡಿಯಾ ನೂತನ ಆಗಸ್ಟ್ ಆಫರ್ ಘೋಷಿಸಿದೆ. ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ. ಸ್ಯಾಂಟ್ರೋ, ಐ10, ಐ20, ಔರಾ ಸೇರಿದಂತೆ ಕೆಲ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದೆ. 

ನವದೆಹಲಿ(ಆ.11): ಕೊರೋನಾ ವೈರಸ್ ನಡುವೆ ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ಜುಲೈ ತಿಂಗಳಲ್ಲಿ ವಾಹನ ಮಾರಾಟ ಸಮಾಧಾನ ತಂದಿದೆ. ಇದೀಗ ಮತ್ತಷ್ಟು ಗ್ರಾಹಕರನ್ನು ಆಕರ್ಷಸಲು ಹ್ಯುಂಡೈ ಇಂಡಿಯಾ ಆಗಸ್ಟ್ ಆಫರ್ ಘೋಷಿಸಿದೆ.

ಹ್ಯುಂಡೈ ಶೋರೂಂ ಸೇಲ್ಸ್‌ಮೆನ್ ಆಗಿ ಬೀದಿ ನಾಯಿ ನೇಮಕ; ಸಂಚಲನ ಮೂಡಿಸಿದೆ ಹೃದಯ ಸ್ಪರ್ಶಿ ಘಟನೆ... 

ಹ್ಯುಂಡೈ ಸ್ಯಾಂಟ್ರೋ ಕಾರಿಗೆ ಕ್ಯಾಶ್ ಡಿಸ್ಕೌಂಟ್ 15,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 5,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಗ್ರ್ಯಾಂಡ್ ಐ10 ಕಾರಿಗೆ 40,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ  5,000 ರೂಪಾಯಿ ಕಾರ್ಪೋರೇಟ್ ಆಫರ್ ನೀಡಲಾಗಿದೆ. 

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ವಿನ್ಯಾಸ, ಮತ್ತಷ್ಟು ಆಕರ್ಷಕ ಹ್ಯುಂಡೈ i20!...

ಗ್ರ್ಯಾಂಡ್ ನಿಯೋಸ್ ಐ10 ಕಾರಿಗೆ 10,000 ರೂಪಾಯಿ ಡಿಸ್ಕೌಂಟ್, 10,000 ರೂಪಾಯಿ ಎಕ್ಸ್‌ಚೇಂಜ್ ಆಫರ್ ಹಾಗೂ 5,000 ರೂಪಾಯಿ ಕಾರ್ಪೋರೆೇಟ್ ಬೋನಸ್ ನೀಡಲಾಗಿದೆ. ಹ್ಯುಂಡೈ ಎಲೈಟ್ ಐಟಿ20 ಕಾರಿಗೆ 15,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ 5,000 ರೂಪಾಯಿ ಕಾರ್ಪೋರೇಟ್ ಆಫರ್ ನೀಡಲಾಗಿದೆ.

ಹ್ಯುಂಡೈ ಔರಾ ಕಾರಿಗೆ 15,000 ರೂಪಾಯಿ ಎಕ್ಸ್‌ಚೇಂಜ್ ಹಾಗೂ 5,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಹ್ಯುಂಡೈ ಎಲಾಂಟ್ರಾ ಕಾರಿಗೆ 30,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ.

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ