ಮಹೀಂದ್ರ XUV300 ಕಾರಿಗೆ ಭರ್ಜರಿ ಆಫರ್; ಗರಿಷ್ಠ 1 ಲಕ್ಷ ರೂ ಡಿಸ್ಕೌಂಟ್!

By Suvarna News  |  First Published Aug 11, 2020, 5:35 PM IST

ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಬಹತೇಕ ಕಂಪನಿಗಳು ಸಬ್‌ಕಾಂಪಾಕ್ಟ್ SUV ಕಾರುಗಳನ್ನು ಹೊರತಂದಿದೆ. ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಸೇರಿದಂತೆ ಹಲವು ಕಾರುಗಳು ಮಹೀಂದ್ರ XUV300 ಕಾರಿಗೆ ಪೈಪೋಟಿ ನೀಡುತ್ತಿದೆ. ಇದೀಗ ಮಹೀಂದ್ರ XUV300 ಕಾರ ಮಾರಾಟ ಉತ್ತೇಜಿಸಲು ಬರೋಬ್ಬರಿ 1 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್ ಘೋಷಿಸಿದೆ.


ನವದೆಹಲಿ(ಆ.11): ಸಬ್ ಕಾಂಪಾಕ್ಟ್ SUV ಕಾರು ವಿಭಾಗದಲ್ಲಿ ಗರಿಷ್ಠ ಪೈಪೋಟಿ ಇದೆ. ಪ್ರತಿ ಆಟೋಮೊಬೈಲ್ ಕಂಪನಿಗಳು ಕೂಡ SUV ಕಾರುಗಳನ್ನು ಬಿಡುಗಡೆ ಮಾಡಿ ಯಶಸಸ್ವಿಯಾಗಿದೆ. ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್ಸ, ಸೇರಿದಂತೆ ಹಲವು ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಮಹೀಂದ್ರ XUV300 ಇದೀಗ ಭರ್ಜರಿ ಆಫರ್ ಘೋಷಿಸಿದೆ.

ಭಾರತದ ಅತ್ಯಂತ ಸುರಕ್ಷತೆಯ ಮಹೀಂದ್ರ XUV300 ಸ್ಪೋರ್ಟ್ಸ್ ಕಾರು ಶೀಘ್ರದಲ್ಲೇ ಬಿಡುಗಡೆ!...

Tap to resize

Latest Videos

undefined

ಕನಿಷ್ಠ 1,000 ರೂಪಾಯಿಂದ ಡಿಸ್ಕೌಂಟ್ ಆರಂಭವಾಗುತ್ತಿದ್ದು, W8(O) ವೇರಿಯೆಂಟ್ ಕಾರಿಗೆ 87,000 ರೂಪಾಯಿ ರಿಯಾಯಿತಿ ನೀಡಲಾಗಿದೆ. ಕಾರಿನ ಆನ್‌ರೋಡ್ ಬೆಲೆಯಲ್ಲಿ ಗರಿಷ್ಠ 1 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.

ವೆಂಟಿಲೇಟರ್ ಬಳಿಕ ಕೊರೋನಾ ವೈರಸ್ ಹೋರಾಟಕ್ಕೆ ಮಹೀಂದ್ರ ಆ್ಯಂಬುಲೆನ್ಸ್! 

ಡಿಸ್ಕೌಂಟ್ ವಿವರ
ಮಹೀಂದ್ರ XUV300 W4 Petrol = 35,000 ರೂಪಾಯಿ
ಮಹೀಂದ್ರ XUV300 W6 Petrol = 17,000 ರೂಪಾಯಿ
ಮಹೀಂದ್ರ XUV300 W8 Petrol = 70,000 ರೂಪಾಯಿ
ಮಹೀಂದ್ರ XUV300 W8 Option Petrol =87,129 ರೂಪಾಯಿ
ಮಹೀಂದ್ರ XUV300 W4 Diesel = 1,000 ರೂಪಾಯಿ
ಮಹೀಂದ್ರ XUV300 W8 Diesel = 20,000 ರೂಪಾಯಿ
ಮಹೀಂದ್ರ XUV300 W8 Option Diesel = 39,000 ರೂಪಾಯಿ

ಮಹೀಂದ್ರ XUV300 ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ನಲ್ಲಿ ಲಭ್ಯವಿದೆ.  1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್,  108 Bhp ಪರ್ ಹಾಗೂ 200 nm ಪೀಕ್ ಟಾರ್ಕ್ ಉತ್ವಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 1.5 ಲೀಟರ್ ಡೀಸೆಲ್ ಎಂಜಿನ್ ಕೂಡ ಲಭ್ಯವಿದೆ.

click me!