BS6, 1.2L i-VTEC ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಹೊಚ್ಚ ಹೊಸ ಹೊಂಡಾ ಜಾಝ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಬುಕಿಂಗ್ ಕೂಡ ಆರಂಭಗೊಂಡಿದೆ. ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಆ.11): ಹೊಂಡಾ ಜನಪ್ರಿಯ ಜಾಝ್ ಕಾರು ಹೆಚ್ಚುವರಿ ಫೀಚರ್ಸ್ ಹಾಗೂ ಕೆಲ ಬದಲಾವಣೆಯೊಂದಿಗೆ ಬಿಡುಗಡೆಗೆ ಸಜ್ಜಾಗಿದೆ. ನೂತನ ಕಾರನ್ನು 21,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು. 2020ರ ನೂತನ ಜಾಝ್ ಹಲವು ವಿಶೇಷತೆಗಳನ್ನೂ ಒಳಗೊಂಡಿದೆ.
ಮೇಡ್ ಇನ್ ಇಂಡಿಯಾ ಹೈಬ್ರಿಡ್ ಕಾರು ಬಿಡುಗಡೆಗೆ ಮಾಡಲಿದೆ ಹೊಂಡಾ!.
undefined
ಮುಂಭಾದ ಬ್ಲಾಕ್ ಗ್ಲಾಸಿ ಗ್ರಿಲ್, ಹೊಸ LED ಹೆಡ್‌ಲೈಟ್ಸ್, LED ಫಾಗ್ ಲ್ಯಾಂಪ್ಸ್, ರೇರ್ LED ವಿಂಗ್ ಲೈಟ್ ಹಾಗೂ ಹೊಸದಾಗಿ ಡಿಸೈನ್ ಮಾಡಲಾದ ಮುಭಾಗದ ಹಾಗೂ ರೇರ್ ಬಂಪರ್ ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಒನ್ ಟಚ್ ಎಲೆಕ್ಟ್ರಿಕ್ ಸನ್‌ರೂಫ್, ಸ್ಮಾರ್ಟ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್ ಹಾಗೂ ಸ್ಟಾಪ್ ಹೊಂದಿದೆ. ಇದೇ ಮೊದಲ ಬಾರಿಗೆ ಸ್ಟೀರಿಂಗ್ ವೀಲ್‌ನಲ್ಲಿ ಅಳವಡಿಸಲಾದ ಪೆಡಲ್ ಶಿಫ್ಟ್ CVT ಟ್ರಾನ್ಸ್‌ಮಿಶನ್ ವೇರಿಯೆಂಟ್ ಹೊಂದಿದೆ.
ಸುಲಭ ಸಾಲ, ಕಡಿಮೆ ಬಡ್ಡಿ, 999 ರೂ EMI; ಹೊಸ ಆಫರ್ ಘೋಷಿಸಿದ ಹೊಂಡಾ!.
BS6 ಎಮಿಶನ್ , 1.2L i-VTEC ಪೆಟ್ರೋಲ್ ಎಂಜಿನ್ ಹೊಂದಿದ್ದು. ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಲಭ್ಯವಿದೆ. ಜಾಝ್ ಪೆಟ್ರೋಲ್ ಕಾರಿಗೆ ದೇಶದಲ್ಲೇ ಭಾರಿ ಬೇಡಿಕೆ ವ್ಯಕ್ತವಾಗಿದೆ. ಹೀಗಾಗಿ ಹೆಚ್ಚು ದಕ್ಷ ಎಂಜಿನ್, ಬಲಿಷ್ಠ ಸಾಮರ್ಥ್ಯದ ಹಾಗೂ ಮೈಲೇಜ್ ನೀಡುವ ಅತ್ಯುತ್ತಮ ಜಾಝ್ ಕಾರು ಬಿಡುಗಡೆಗೆ ರೆಡಿಯಾಗಿದೆ ಎಂದು ಹೊಂಡಾ ಇಂಡಿಯಾದ ಉಪಾಧ್ಯಕ್ಷ ಹಾಗೂ ನಿರ್ದೇಶಕ ರಾಜೇಶ್ ಗೋಯಲ್ ಹೇಳಿದ್ದಾರೆ.