ಹ್ಯುಂಡೈ ಐ20 ಸುರಕ್ಷತಾ ಫಲಿತಾಂಶ ಪ್ರಕಟ-ಮಾರ್ಕ್ಸ್ ಎಷ್ಟು?

By Web Desk  |  First Published Nov 3, 2018, 4:02 PM IST

ಅಕರ್ಷಕ ಲುಕ್, ಪವರ್‌ಫುಲ್ ಎಂಜಿನ್‍‌ನೊಂದಿಗೆ ಭಾರತದ ಕಾರು ಪ್ರಿಯರನ್ನ ಮೋಡಿ ಮಾಡಿರುವ ಹ್ಯುಂಡೈ ಐ20 ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟಗೊಂಡಿದೆ. ಭಾರತದಲ್ಲೇ ತಯಾರಾದ ಈ ಕಾರಿನ ಸುರಕ್ಷತೆ ಹೇಗಿದೆ? ಇಲ್ಲಿದೆ.


ನವದೆಹಲಿ(ನ.03): ಹ್ಯುಂಡೈ ಸಂಸ್ಥೆಯ  ಐ20 ಕಾರು ಭಾರತದ ಬೆಸ್ಟ್ ಹ್ಯಾಚ್‌ಬ್ಯಾಕ್‌ ಕಾರುಗಳಲ್ಲೊಂದು. ಇದೀಗ ಹ್ಯುಂಡೈ ಸಂಸ್ಥೆ ಭಾರತದಲ್ಲೇ ಐ20 ಕಾರು ನಿರ್ಮಾಣ ಮಾಡಿದೆ. ಇದೀಗ ಈ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟಗೊಂಡಿದೆ. 

ಗ್ಲೋಬಲ್ NCAP ಟೆಸ್ಟ್‌ನಲ್ಲಿ ಹ್ಯುಂಡೈ ಐ20 ಕಾರನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಟ್ಟಾರೆ ಹ್ಯುಂಡೈ ಐ20 ಕಾರು 3 ಸ್ಟಾರ್ ಪಡೆದಿದೆ. ವಯಸ್ಕರ ಸುರಕ್ಷತೆಯಲ್ಲಿ 3 ಸ್ಟಾರ್ ಹಾಗೂ ಮಕ್ಕಳ ಸುರಕ್ಷತೆಯಲ್ಲಿ 2 ಸ್ಟಾರ್ ಪಡೆದುಕೊಂಡಿದೆ. ಈ ಮೂಲಕ ಹ್ಯುಂಡೈ ಸಾಧಾರಣ ಸುರಕ್ಷತೆ ಹೊಂದಿದೆ.

Latest Videos

ವಯಸ್ಕರ ಸುರಕ್ಷತೆಯಲ್ಲಿ 17ರಲ್ಲಿ 10.15 ಅಂಕಗಳಿಸಿದ ಹ್ಯುಂಡೈ ಐ20, ಮಕ್ಕಳ ಸುರಕ್ಷತೆಯಲ್ಲಿ 49 ಅಂಕಗಳಲ್ಲಿ 18.16 ಅಂಕಗಳಿಸಿದೆ. ಕ್ರಾಶ್ ಟೆಸ್ಟ್ ಪರೀಕ್ಷೆಯಲ್ಲಿ ಸಾಧಾರಣ ಸುರಕ್ಷತೆ ಅಂಕ ಪಡೆದ ಭಾರತದಲ್ಲಿ ತಯಾರಾದ ನೂತನ ಐ20 ಕಾರು ಆಫ್ರಿಕಾದಲ್ಲಿ ಮಾರಾಟವಾಗಲಿದೆ.  
 

click me!