ನ.15ಕ್ಕೆ ಅನಾವರಣಗೊಳ್ಳಲಿದೆ 4 ಜಾವಾ ಮೋಟಾರ್ ಬೈಕ್!

Published : Nov 03, 2018, 03:22 PM ISTUpdated : Nov 03, 2018, 03:31 PM IST
ನ.15ಕ್ಕೆ ಅನಾವರಣಗೊಳ್ಳಲಿದೆ 4 ಜಾವಾ ಮೋಟಾರ್ ಬೈಕ್!

ಸಾರಾಂಶ

ಜಾವಾ ಬೈಕ್ ಭಾರತದಲ್ಲಿ ಮೋಡಿ ಮಾಡಿ ವರುಷಗಳೇ ಉರುಳಿದೆ. ಇದೀಗ ಮತ್ತೆ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಜಾವಾ ಬೈಕ್ ಸಜ್ಜಾಗಿದೆ.  ನವೆಂಬರ್ 15 ರಂದು 4 ಜಾವಾ ಬೈಕ್ ಅನಾವರಣವಾಗಲಿದೆ. ನೂತನ ಬೈಕ್ ಹೇಗಿದೆ? ಇಲ್ಲಿದೆ.

ಮುಂಬೈ(ನ.03): ಭಾರತದಲ್ಲಿ ಮತ್ತೆ ಜಾವಾ ಮೋಟಾರ್ ಬೈಕ್ ಬಿಡುಗಡೆಗೆ ಕ್ಷಣಗಣನೆಗೆ ಆರಂಭವಾಗಿದೆ. ನವೆಂಬರ್ 15 ರಂದು ಜಾವಾ ಮೋಟಾರ್‌ಸೈಕಲ್ ನೂತನ ಬೈಕ್ ಅನಾವರಣ ಮಾಡಲಿದೆ. ವಿಶೇಷ ಅಂದರೆ 4 ವಿವಿಧ ಮಾಡೆಲ್ ಬೈಕ್‌ಗಳು ಅನಾವರಣಗೊಳ್ಳಲಿದೆ.

ನ.15 ರಂದು ಅನಾವರಣವಾಗಲಿರುವ 4 ಬೈಕ್‌ಗಳ ಸ್ಕೆಚ್ ಈಗಾಗಲೇ ಬಿಡುಗಡೆಯಾಗಿದೆ. ಕ್ಲಾಸಿಕ್, ಸ್ಕ್ರಾಂಬ್ಲರ್, ಅಡ್ವೆಂಚರ್ ಹಾಗೂ ಕ್ರೂಸರ್ ಮಾದರಿ ಜಾವಾ ಬೈಕ್ ಸ್ಕೆಚ್ ಬಿಡುಗಡೆ ಮಾಡಿದೆ.

6 ಸ್ಪೀಡ್ ಗೇರ್ ಬಾಕ್ಸ್ ಇರುವ 293 ಸಿಸಿಯ ಬೈಕ್ ಅನ್ನು ಬಿಡುಗಡೆಗೊಳಿಸುವುದಾಗಿ ಕಂಪನಿ ಘೋಷಿಸಿದೆ. ವಿಶೇಷ ಅಂದರೆ ರೆಟ್ರೋ ಶೈಲಿಯಲ್ಲೇ ಜಾವಾ ಬೈಕ್‌ಗಳು ಬಿಡುಗಡೆಯಾಗಲಿದೆ. 80 ಹಾಗೂ 90ರ ದಶಕದಲ್ಲಿ ಭಾರತದಲ್ಲಿ ಮೋಡಿ ಮಾಡಿದ ಜಾವಾ ಬೈಕ್‌ಗಾಗಿ ಬೈಕ್ ಪ್ರಿಯರು ಕಾಯುತ್ತಿದ್ದಾರೆ.

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ