ಹ್ಯುಂಡೈ ಕಂಪನಿ ಇದೀಗ ಗ್ರ್ಯಾಂಡ್ i10 CNG ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ ವಿವರ.
ನವದೆಹಲಿ(ಮೇ.07): ಹ್ಯುಂಡೈ ಕಂಪನಿ ನೂತನ ಗ್ರ್ಯಾಂಡ್ i10 CNG ಕಾರು ಬಿಡುಗಡೆ ಮಾಡಿದೆ. CNG ವೇರಿಯೆಂಟ್ ಎರಡು ಇಂಧನದಲ್ಲಿ ಕಾರ್ಯನಿರ್ವಹಸಲಿದೆ. CNG ಹಾಗೂ ಪೆಟ್ರೋಲ್‌ನಲ್ಲಿ ಓಡಲಿದೆ. ಹ್ಯುಂಡೈ ಗ್ರ್ಯಾಂಡ್ i10 CNG ಮ್ಯಾಗ್ನ ವೇರಿಯೆಂಟ್ ಮಾತ್ರ ಲಭ್ಯವಿದೆ. ನೂತನ ಕಾರಿನ ಬೆಲೆ ಪೆಟ್ರೋಲ್ ಕಾರಿಗಿಂತ ಸ್ವಲ್ಪ ಹೆಚ್ಚು, ಡೀಸೆಲ್‌ಗಿಂತ ಕಡಿಮೆ ಇದೆ.
ಇದನ್ನೂ ಓದಿ: ನೆಕ್ಸಾನ್ ಹಿಂದಿಕ್ಕಿದ ಮಹೀಂದ್ರ- ಇಲ್ಲಿದೆ ಎಪ್ರಿಲ್ ತಿಂಗಳ ಕಾರು ಮಾರಾಟದ ಲಿಸ್ಟ್ !
undefined
ಹ್ಯುಂಡೈ ಗ್ರ್ಯಾಂಡ್ i10 CNG ವೇರಿಯೆಂಟ್ ಕಾರಿನ ಬೆಲೆ 6.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 1.2 ಲೀಟರ್ VTVT ಪೆಟ್ರೋಲ್ ಎಂಜಿನ್ ಹೊಂದಿರುವ i10 CNG ಕಾರು 82 Bhp ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ಇನ್ನು CNS ಇಂಧನದಲ್ಲಿ 66 Bhp ಪವರ್ ಹಾಗೂ 98 Nm ಪೀಕ್ ಟಾರ್ಕ್ ಉತ್ಪಾದಸಲಿದೆ.
ಇದನ್ನೂ ಓದಿ: ಡಿ ಬಾಸ್ ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನ್ ಉರುಸ್ ಕಾರಿನ ವಿಶೇಷತೆ ಇಲ್ಲಿದೆ!
BS-VI ಎಮಿಶನ್ ನಿಯಮದಿಂದ ಹ್ಯುಂಡೈ ಕೂಡ 1.2 ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸುತ್ತಿದೆ. 2020ರಲ್ಲಿ ಪೆಟ್ರೋಲ್ ಹಾಗೂ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದೀಗ CNS ವೇರಿಯೆಂಟ್ ಕಾರು ಬಿಡುಗಡೆ ಮಾಡೋ ಮೂಲಕ, ಗ್ರಾಹಕರಿಗೆ ಮತ್ತೊಂದು ಕೊಡುಗೆ ನೀಡಿದೆ.