ಹೈದರಾಬಾದ್ ಮೂಲದ ಆಟೋಮೊಬೈಲ್ ಸ್ಟಾರ್ಟ್ ಆಪ್ ಕಂಪನಿ ನೂತನ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಆಟಮ್ 1.0 ಎಲೆಕ್ಟ್ರಿಕ್ ಬೈಕ್ ಇದಾಗಿದೆ. ಈ ಬೈಕ್ ಓಡಿಸಲು ಲೈಸೆನ್ಸ್ ಬೇಕಿಲ್ಲ. ನೂತನ ಬೈಕ್ ಕುರಿತ ಮಾಹಿತಿ ಇಲ್ಲಿದೆ.
ಹೈದರಾಬಾದ್(ಸೆ.07): ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ತಯಾರಿಸುವ ಹಲವು ಸ್ಟಾರ್ಟ್ ಕಂಪನಿಗಳಿವೆ. ಒಂದರ ಮೇಲೊಂದರಂತೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆ ಮಾಡುತ್ತಿದೆ. ಇದೀಗ ಹೈದರಾಬಾದ್ ಮೂಲದ ಆಟೋಮೊಬೈಲ್ ಸ್ಟಾರ್ಟ್ ಅಪ್ ಕಂಪನಿ ಆಟಮ್ 1.0 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿದೆ. ಇದರ ವಿನ್ಯಾಸ ಆಕರ್ಷವಾಗಿದ್ದು, ರೆಟ್ರೋ ಲುಕ್ ನೀಡಲಾಗಿದೆ.
undefined
ಕಾರ್ಪೆಂಟರ್ ನಿರ್ಮಿಸಿದ ಮರದ ಸೈಕಲ್‌ಗೆ ಭಾರಿ ಬೇಡಿಕೆ; ಕೆನಡ, ಸೌತ್ಆಫ್ರಿಕಾದಿಂದ ಆರ್ಡರ್!
ವಿಶೇಷ ಅಂದರೆ ಈ ಎಲೆಕ್ಟ್ರಿಕ್ ಬೈಕ್ ಓಡಿಸಲು ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ. ಕಾರಣ ಈ ಆಟಮ್ 1.0 ಎಲೆಕ್ಟ್ರಿಕ್ ಬೈಕ್ ವೇಗ ಗರಿಷ್ಠ 25 ಕಿ.ಮೀ ಪ್ರತಿ ಗಂಟೆಗೆ. ನಿಯಮದ ಪ್ರಕಾರ ಪ್ರತಿ ಗಂಟೆಗೆ ಗರಿಷ್ಠ ವೇಗ 25 ಕಿ.ಮೀ ವೇಗಕ್ಕಿಂತ ಕಡಿಮೆ ಇದ್ದರೆ ಲೈಸೆನ್ಸ್ ಅಗತ್ಯವಿಲ್ಲ. ಈ ರೀತಿ ಕೆಲ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಆದರೆ ಆಟಮ್ ಇದೀಗ ಬೈಕ್ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ.
ಗ್ರಾಹಕರ ಕುತೂಹಲಕ್ಕೆ ಉತ್ತರ ನೀಡಿದ ಎದರ್ 450X!
ನೂತನ ಬೈಕ್‌ನಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಬಳಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ ಮೇಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಇದೇ ತಿಂಗಳಲ್ಲಿ ಆಟಮ್ 1.0 ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಬೆಲೆ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಬೈಕ್ ಇದಾಗಲಿದೆ ಎಂದ ಕಂಪನಿ ಹೇಳಿದೆ.