ಗ್ರಾಹಕರ ಕುತೂಹಲಕ್ಕೆ ಉತ್ತರ ನೀಡಿದ ಎದರ್ 450X!

By Suvarna NewsFirst Published Sep 7, 2020, 7:17 PM IST
Highlights

ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಬೆಂಗಳೂರು ಮೂಲಕ ಎದರ್ ಎನರ್ಜಿ ಇದೀಗ ಬಹುಬೇಡಿಕೆ ಎದರ್ 450x ಸ್ಕೂಟರ್ ಡೆಲಿವರಿ ದಿನಾಂಕ ಬಹಿರಂಗ ಪಡಿಸಿದೆ. ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಎದರ್ 450x ಸ್ಕೂಟರ್ ಡೆಲಿವರಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರು(ಸೆ.07): ಎದರ್ ಎನರ್ಜಿ ಕೊರೋನಾ ವೈರಸ್ ಲಾಕ್‌ಡೌನ್‌ಗೂ ಮೊದಲು ಎದರ್ ಎನರ್ಜಿ 450X ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿತ್ತು. ಮಾರ್ಚ್ ತಿಂಗಳಲ್ಲಿ ಸ್ಕೂಟರ್ ಬಿಡುಗಡೆಯಾದ ಬೆನ್ನಲ್ಲೇ ಲಾಕ್‌ಡೌನ್ ಆದೇಶ ಜಾರಿಗೊಂಡಿತ್ತು. ಹೀಗಾಗಿ ಸ್ಕೂಟರ್ ಡೆಲಿವರಿ ಸೇರಿದಂತೆ ಎಲ್ಲಾ ಕಾರ್ಯಗಳು ಸ್ಥಗಿತಗೊಂಡಿತು. ಇದೀಗ ಎದರ್ ಎನರ್ಜಿ 450X ಹೈಎಂಡ್ ಸ್ಕೂಟರ್ ನವೆಂಬರ್ ತಿಂಗಳಲ್ಲಿ ಡೆಲಿವರಿ ಮಾಡುವುದಾಗಿ ಎದರ್ ಹೇಳಿದೆ.

ದೆಹಲಿಯಲ್ಲಿ ಬಿಡುಗಡೆಯಾಗುತ್ತಿದೆ ಬೆಂಗಳೂರಿನ ಎದರ್ ಎಲೆಕ್ಟ್ರಿಕ್ ಸ್ಕೂಟರ್!

ಕಂಪನಿ ಹೆಡ್‌ಕ್ವಾರ್ಟರ್ ಬೆಂಗಳೂರು ಹಾಗೂ ಇತರ ನಗರಗಳಾದ ಪುಣೆ ಹಾಗೂ ಹೈದರಾಬಾದ್‌ನಲ್ಲಿ ಎದರ್ ಎನರ್ಜಿ ಸ್ಕೂಟರ್ ಮಾರಾಟ ಜಾಲ ಹೊಂದಿದೆ. ಹೀಗಾಗಿ ಈ ನಗರಗಳಲ್ಲಿ ಸ್ಕೂಟರ್ ಲಭ್ಯವಾಗಲಿದೆ. ಇದರೊಂದಿಗೆ ಇನ್ನು 8 ನಗರಗಳಿಗೆ ಎದರ್ ಮಾರಾಟ ಜಾಲ ವಿಸ್ತರಿಸಲಿದೆ. 

ಎಲೆಕ್ಟ್ರಿಕ್ ಸ್ಕೂಟರ್ ಯಶಸ್ಸಿನ ಬೆನ್ನಲ್ಲೇ ಬೈಕ್ ಬಿಡುಗಡೆಗೆ ಎದರ್ ಸಿದ್ಧತೆ!.

ಎಲೆಕ್ಟ್ರಿಕ್ ವಾಹನಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದ ಬೆನ್ನಲ್ಲೇ ಬೆಂಗಳೂರು ಮೂಲದ ಎದರ್ ಎನರ್ಜಿ ಸ್ಕೂಟರ್ ಬಹುಬೇಡಿಕೆ ಸ್ಕೂಟರ್ ಆಗಿ ಹೊರಹೊಮ್ಮಿದೆ. ಹೀಗಾಗಿ ಹಂತ ಹಂತದಲ್ಲಿ ಹೆಚ್ಚಿನ ನಗರಗಳಿಗೆ ಎದರ್ ಮಾರಾಟ ಜಾಲ ವಿಸ್ತರಿಸುತ್ತಿದೆ. ಇದೀಗ 450X ಸ್ಕೂಟರ್ ಭಾರತದ 11 ನಗರಗಳಲ್ಲಿ ನವೆಂಬರ್ ತಿಂಗಳಿನಿಂದ ಲಭ್ಯವಾಗಲಿದೆ.

click me!