ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಇತರೆಲ್ಲಾ ಕಾರುಗಳಿಗಿಂತ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಪ್ರತಿ ಕಾರು ಕಂಪನಿಗಳು SUV ಸೆಗ್ಮೆಂಟ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ ಕಾರು ಹೆಚ್ಚಿನ ಯಶಸ್ಸು ಸಾಧಿಸಿದೆ. ಇದೀಗ ಈ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಹೊಂಡಾ ಹೊಸ ಕಾರು ಬಿಡುಗಡೆ ಮಾಡುತ್ತಿದೆ.
ನವದೆಹಲಿ(ಫೆ.24): ಹೊಂಡಾ ಮೋಟಾರ್ಸ್ ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ. ಅತ್ಯಂತ ಆಕರ್ಷಕ ಲುಕ್ ಹಾಗೂ ಬಲಿಷ್ಠ ಎಂಜಿನ್ ಮೂಲಕ ಹೊಂಡಾ ಕಾರು ಬಿಡುಗಡೆಯಾಗಲಿದೆ.
ಇದನ್ನೂ ಓದಿ: BS6 ಹೊಂಡಾ ಅಮೇಜ್ ಬಿಡುಗಡೆ; ಬೆಲೆ 6.10 ಲಕ್ಷ ರೂ!
undefined
ನೂತನ ಕಾರಿನ ವಿನ್ಯಾಸ ಹೊಂಡಾ WR-V ಕಾರನ್ನು ಹೋಲುತ್ತಿದೆ. LED ಹೆಡ್‌ಲ್ಯಾಂಪ್ಸ್, ಟೈಲ್‌ಲ್ಯಾಂಪ್ಸ್ ಸೇರಿದಂತೆ ಹಲವು ಹೊಸತನಗಳು WR-V ಕಾರಿಗಿಂತ ಭಿನ್ನವಾಗಿದೆ. ನೂತನ ಕಾರು ಭಾರತದಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದೆ.
ಇದನ್ನೂ ಓದಿ: ಆಕರ್ಷಕ ಲುಕ್ ಹಾಗೂ ವಿನ್ಯಾಸ, ಹೊಸ ಅವತಾರದಲ್ಲಿ ಹೊಂಡಾ ಜಾಝ್!
2020ರ ಮಧ್ಯಭಾಗದಲ್ಲಿ ಹೊಂಡಾ SUV ಅನಾವರಣಗೊಳ್ಳಲಿದೆ. 2021ರ ಆರಂಭದಲ್ಲೇ ಕಾರು ಬಿಡುಗಡೆಯಾಗಲಿದೆ. ನೂತನ ಕಾರಿನ ಬೆಲೆ ಮಾಹಿತಿ ಬಹಿರಂಗವಾಗಿಲ್ಲ. ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗುವುದು ಎಂದು ಹೊಂಡಾ ಹೇಳಿದೆ.
ಇದನ್ನೂ ಓದಿ: 30 ನಿಮಿಷ ಚಾರ್ಜ್, 201 ಕಿ.ಮಿ ಮೈಲೇಜ್- ಬರುತ್ತಿದೆ ಹೊಂಡಾ ಜಾಝ್ ಎಲೆಕ್ಟ್ರಿಕ್ ಕಾರು!
ಹೊಂಡಾ ನೂನತ ಕಾರು, ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ, ಮಹೀಂದ್ರ XUV300, ಫೋರ್ಡಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಸೇರಿದಂತೆ ಸಬ್‌ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.