ಟಾಟಾ ಅಲ್ಟ್ರೋಜ್ ಕಾರು ಬಿಡುಗಡೆಯಾದ ಬಳಿಕ ಮಾರುತಿ ಬಲೆನೋ, ಹ್ಯುಂಜೈ ಐ20 ಕಾರುಗಳಿಗೆ ತೀವ್ರ ಪೈಪೋಟಿ ಎದುರಾಗಿದೆ. ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಕಾರಣವಾಗಿರುವ ಅಲ್ಟ್ರೋಜ್ ಕಾರಿನ ಮೈಲೇಜ್ ಬಹಿರಂಗವಾಗಿದೆ.
ಮುಂಬೈ(ಫೆ.23): ಹ್ಯಾಚ್‌ಬ್ಯಾಕ್ ಕಾರಿನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿರುವ ಭಾರತದ ಏಕೈಕ ಕಾರು ಟಾಟಾ ಅಲ್ಟ್ರೋಜ್. ಮಾರುತಿ ಬಲೆನೋ, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಟಾಟಾ ಅಲ್ಟ್ರೋಜ್ ಕಾರಿನ ಮೈಲೇಜ್ ಪರೀಕ್ಷೆ ಮಾಡಲಾಗಿದ್ದು, ಮಾರುತಿ ಕಾರಿಗೆ ತೀವ್ರ ಹೊಡೆತ ನೀಡಿದೆ.
ಇದನ್ನೂ ಓದಿ: ಬಿಗ್‌ಬಾಸ್ ಶೈನ್ ಶೆಟ್ಟಿ ಗೆದ್ದ ಟಾಟಾ ಅಲ್ಟ್ರೋಝ್ ಕಾರಿನ ಬೆಲೆ, ವಿಶೇಷತೆ ಇಲ್ಲಿದೆ!
ಟಾಟಾ ಅಲ್ಟ್ರೋಜ್ ಪೆಟ್ರೋಲ್ ಕಾರು 60ರ ಸ್ಪೀಡ್‌ನಲ್ಲಿ ಚಲಾಯಿಸಿದಾ ಕಾರಿನ ಮೈಲೇಜ್ ಪ್ರತಿ ಲೀಟರ್‌ಗೆ 25 ಕಿ.ಮೀ. ಇನ್ನು 70 ರಿಂದ 80ರ ಸ್ಪೀಡ್‌ನಲ್ಲಿ ಕಾರು ಪ್ರತಿ ಲೀಟರ್‌ಗೆ 22 ಕಿ,ಮೀ ಮೈಲೇಜ್ ನೀಡುತ್ತಿದೆ. ನಗರ ಟ್ರಾಫಿಕ್ ರಸ್ತೆಗಳಲ್ಲಿ ಅಲ್ಟ್ರೋಜ್ ಕಾರು 17.92 ಮೈಲೇಜ್ ನೀಡುತ್ತಿದೆ.
ಇದನ್ನೂ ಓದಿ:ಟಾಟಾ ಅಲ್ಟ್ರೋಜ್ ಬಿಡುಗಡೆ; ಕಡಿಮೆ ಬೆಲೆ, ಅತ್ಯಂತ ಸುರಕ್ಷತೆಯ ಕಾರು!.
1.2 ಲೀಟರ್ ಪೆಟ್ರೋಲ್ ಎಂಜಿನ್ 85 PS ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್, 90 PS ಪವರ್ ಹಾಗೂ 200 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಟಾಟಾ ಅಲ್ಟ್ರೋಜ್ ಕಾರಿನ ಬೆಲೆ 5.29 ಲಕ್ಷ ರೂಪಾಯಿಯಿಂದ, ಟಾಪ್ ಮಾಡೆಲ್ ಬೆಲೆ 9.29 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).