ಟೆಸ್ಲಾ ಎಲೆಕ್ಟ್ರಿಕ್ ಕಾರು ಭಾರತ ಆಗಮನ ಖಚಿತ ಪಡಿಸಿದ ಎಲನ್ ಮಸ್ಕ್!

By Suvarna News  |  First Published Oct 4, 2020, 5:45 PM IST

ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಟೆಸ್ಲಾ ಭಾರತ ಪ್ರವೇಶ ಖಚಿತಪಡಿಸಿದೆ. ಹಲವು ವರ್ಷಗಳಿಂದ ಭಾರತದಲ್ಲಿ ಟೆಸ್ಲಾ ಕಾರು ಆಗಮನಕ್ಕಾಗಿ ಹಲವರು ಕಾಯುತ್ತಿದ್ದಾರೆ. ಇದೀಗ ಟೆಸ್ಲಾ ಸಿಇಓ ಎಲನ್ ಮಸ್ಕ್, ಭಾರತೀಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.


ಕ್ಯಾಲಿಫೋರ್ನಿಯ(ಅ.04): ವಿಶ್ವದ ಕೆಲ ರಾಷ್ಟ್ರಗಳಲ್ಲಿ ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರು ರಾರಾಜಿಸುತ್ತಿದೆ. ಆದರೆ ಇದುವರೆಗೆ ಭಾರತಕ್ಕೆ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಎಂಟ್ರಿಕೊಟ್ಟಿಲ್ಲ. ಆದರೆ ಭಾರತೀಯರು ಅಮೆರಿಕದಿಂದ ಕಾರು ಅಮದು ಮಾಡಿಕೊಂಡಿದ್ದಾರೆ. ಇದೇ ವೇಳೆ ಭರಾತದಲ್ಲಿ ಟೆಸ್ಲಾ ಕಾರು ಬಿಡುಗಡೆ ಯಾವಾಗ ಎಂದು ಹಲವು ಬಾರಿ ಪ್ರಶ್ನಿಸಿದ್ದಾರೆ. ಇದೀಗ ಟೆಸ್ಲಾ ಸಿಇಓ ಎಲನ್ ಮಸ್ಕ್ ಭಾರತದಲ್ಲಿ ಕಾರು ಬಿಡುಗಡೆ ಖಚಿತಪಡಿಸಿದ್ದಾರೆ.

ಟೆಸ್ಲಾ ಎಲೆಕ್ಟ್ರಿಕ್ ಕಾರಿನ ಐತಿಹಾಸಿಕ ನಿರ್ಧಾರ, ಕರ್ನಾಟಕದಲ್ಲಿ R&D ಸೆಂಟರ್ ತೆರೆಯಲು ಮಾತುಕತೆ!

Tap to resize

Latest Videos

undefined

2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಟೆಸ್ಲಾ ತನ್ನು ಕ್ಯಾಲಿಫೋರ್ನಿಯಾದ ಘಟಕಕ್ಕೆ ಆಹ್ವಾನಿಸಿತ್ತು. ಈ ವೇಳೆ 2017ರಲ್ಲಿ ಟೆಸ್ಲಾ ಭಾರತದಲ್ಲಿ ಘಟಕ ಆರಂಭಿಸುವುದಾಗಿ ಘೋಷಿಸಿತ್ತು. ಬಳಿಕ ಹಲವು ಕಾರಣಗಳಿಂದ ಭಾರತ ಪ್ರವೇಶವನ್ನು ಮಂದೂಡಿತ್ತು. ಇದೀಗ ಭಾರತದಲ್ಲಿರುವ ಅನಧೀಕೃತ ಟೆಸ್ಲಾ ಫ್ಯಾನ್ ಕ್ಲಬ್ ಟ್ವಿಟರ್ ಖಾತೆ, ಭಾರತೀಯರು ಟೆಸ್ಲಾ ಕಾರಿಗಾಗಿ ಕಾಯುತ್ತಿರುವುದಾಗಿ ಸಂದೇಶ ರವಾನಿಸಿತ್ತು.

ಟೆಸ್ಲಾ ಫ್ಯಾನ್ ಕ್ಲಬ್ ಟ್ವೀಟ್‌ಗೆ ಎಲನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. 2021ರಲ್ಲಿ ಖಚಿತವಾಗಿ ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಸದ್ಯ ಆತ್ಮನಿರ್ಭರ್ ಭಾರತ ಪರಿಕಲ್ಪನೆಯಿಂದ ವಿದೇಶದಿಂದ ಅಮದು ಮಾಡಿ ಇಲ್ಲಿ ಕಾರು ಜೋಡಣೆ ದುಬಾರಿಯಾಗಲಿದೆ. ಭಾರತದಲ್ಲಿ ಉತ್ಪಾದನೆ ಮಾಡಲು ಹೆಚ್ಚಿನ ಬಂಡವಾಳ ಹೂಡಬೇಕಾಗಿದೆ. ಹೀಗಾಗಿ ಟೆಸ್ಲಾ 2021ರಲ್ಲಿ ಆಗಮನಕ್ಕೆ ಹಲವು ಕಸರತ್ತು ಮಾಡಬೇಕಿದೆ.

click me!