ದುಬಾರಿ ದಂಡದ ಬಳಿಕ ವಾಹನ ಸವಾರರಿಗೆ ಮತ್ತೊಂದು ಶಾಕ್!

By Kannadaprabha News  |  First Published Jan 30, 2020, 12:41 PM IST

ರಾಜ್ಯದಲ್ಲಿ ದುಬಾರಿ ಟ್ರಾಫಿಕ್ ದಂಡ ಮತ್ತೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದರ ಬೆನ್ನಲ್ಲೇ ಸವಾರರಿಗೆ ಮತ್ತೊಂದು ಶಾಕ್ ನೀಡಿದೆ. ರಾಜ್ಯದಲ್ಲಿ ಓಡಾಡುವ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಕಡ್ಡಾಯ ಮಾಡಿದೆ. ಏನಿದು ಹೈ ಸೆಕ್ಯುರಿಟಿ ನಂಬರ್ ಪ್ಲೇಟ್? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ. 


ಬೆಂಗಳೂರು(ಜ.30):  ರಾಜ್ಯದಲ್ಲಿ ಹೈ-ಸೆಕ್ಯುರಿಟಿ ನಂಬರ್‌ ಪ್ಲೇಟ್‌ಗಳನ್ನು (ಗರಿಷ್ಠ ಭದ್ರತೆಯ ನೋಂದಣಿ ಫಲಕ) ಹಳೆಯ ವಾಹನಗಳಿಗೂ ಅಳವಡಿಸುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೈಕೋರ್ಟ್‌ಗೆ ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಸರ್ಕಾರ, ಈಗಾಗಲೇ 2018ರ ಏಪ್ರಿಲ್‌ನಿಂದ 2019ರ ಆಗಸ್ಟ್‌ವರೆಗೆ ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಅಳವಡಿಸದ ಒಟ್ಟು 20,487 ವಾಹನಗಳಿಂದ 46 ಲಕ್ಷ ರು. ದಂಡ ಸಂಗ್ರಹಿಸಲಾಗಿದೆ ಎಂದೂ ತಿಳಿಸಿದೆ.

ಇದನ್ನೂ ಓದಿ: ಜಾತಿ, ಧರ್ಮದ ಸ್ಟಿಕ್ಕರ್ ಅಂಟಿಸಿದ 250ಕ್ಕೂ ಹೆಚ್ಚು ವಾಹನಕ್ಕೆ ದಂಡ!

Tap to resize

Latest Videos

ಸುಪ್ರೀಂಕೋರ್ಟ್‌ ತೀರ್ಪು ಹಾಗೂ ಕೇಂದ್ರ ಸರ್ಕಾರದ ಆದೇಶವಿದ್ದರೂ ಕರ್ನಾಟಕದಲ್ಲಿ ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ವಕೀಲ ಕೆ.ಬಿ. ವಿಜಯಕುಮಾರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ಸರ್ಕಾರಿ ವಕೀಲ ವಿ.ಶ್ರೀನಿಧಿ ಪ್ರಮಾಣಪತ್ರ ಸಲ್ಲಿಸಿ ಈ ಮಾಹಿತಿ ಒದಗಿಸಿದರು.

ಇದನ್ನೂ ಓದಿ: 'ಚೌಕಿದಾರ್' ನಂಬರ್ ಪ್ಲೇಟ್- ಬಿಜೆಪಿ MLA ಕಾರಿಗೆ ದಂಡ!

ಅದನ್ನು ಪರಿಗಣಿಸಿದ ನ್ಯಾಯಪೀಠ, ಕೇಂದ್ರ ಮೋಟಾರು ವಾಹನ ಕಾಯ್ದೆ-1989ರ ಅಡಿಯಲ್ಲಿ ನಿಗದಿತ ನಮೂನೆಯಲ್ಲಿ ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಅಳವಡಿಸದ ಖಾಸಗಿ ಹಾಗೂ ವಾಣಿಜ್ಯ ಸೇರಿದಂತೆ ಎಲ್ಲಾ ಬಗೆಯ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ದಂಡ ವಿಧಿಸಬೇಕು. ಸಾಧ್ಯವಾದರೆ ಶುಲ್ಕ ವಸೂಲಿಗೆ ಕೋರ್ಟ್‌ ಮಾದರಿಯಲ್ಲಿ ಕೆಲಸ ಮಾಡುವ ವ್ಯವಸ್ಥೆ ಆರಂಭಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿತು. ಜತೆಗೆ, ಈ ಕುರಿತಂತೆ ಕೈಗೊಂಡ ಕ್ರಮಗಳ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ: ಎಲ್ಲಾ ವಾಹನಗಳಿಗೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ-ಸುಪ್ರೀಂ ಕೋರ್ಟ್

ಮೋಟಾರು ವಾಹನ ನಿಯಮಗಳು-1989ರ ಸೆಕ್ಷನ್‌ 50ಕ್ಕೆ ಕೇಂದ್ರ ಸರ್ಕಾರವು 2018ರಲ್ಲಿ ತಿದ್ದುಪಡಿ ತಂದು, ಹೊಸ ಮೋಟಾರು ವಾಹನ ನಿಯಮಗಳನ್ನು ಜಾರಿಗೆ ತಂದಿದೆ. ಅದರಂತೆ 2019ರ ಏ.1ರ ನಂತರ ನಿರ್ಮಾಣವಾದ ವಾಹನಗಳಿಗೆ ತಯಾರಿಕಾ ಸಂಸ್ಥೆಗಳೇ ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಅಳವಡಿಸುವ ಜವಾಬ್ದಾರಿ ಹೊಂದಿವೆ. ಅದರಂತೆ ವಾಹನ ತಯಾರಿಕಾ ಕಂಪನಿಗಳು ಹಾಗೂ ಡೀಲರ್‌ ಕಂಪನಿಗಳು ತಾವು ಮಾರಾಟ ಮಾಡುವ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಅಳವಡಿಸುತ್ತಿವೆ. 

ಇದನ್ನೂ ಓದಿ:ಕಾರಿಗಿಂತಲೂ ಈ ನಂಬರ್ ಪ್ಲೇಟ್ ಬೆಲೆ ಜಾಸ್ತಿ-ಬರೋಬ್ಬರಿ 132 ಕೋಟಿ!

ಆದರೆ, 2019ರ ಏ.1ಕ್ಕೂ ಮುನ್ನ ತಯಾರಾದ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಅಳವಡಿಕೆ ಕಡ್ಡಾಯಗೊಳಿಸುವ ನೀತಿ ಜಾರಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಆದರೆ, ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಪೂರೈಕೆದಾರರ ಆಯ್ಕೆಗೆ ಟೆಂಡರ್‌ ಪ್ರಕ್ರಿಯೆ ಕೈಗೊಳ್ಳುವವರೆಗೂ ಇದರಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಟೆಂಡರ್‌ ಪ್ರಕ್ರಿಯೆ ಆರಂಭಿಸಿ, ಸದರಿ ನೀತಿಯನ್ನು ಜಾರಿಗೊಳಿಸಲು ಸರ್ಕಾರ ಸಿದ್ಧವಿದೆ ಎಂದು ಪ್ರಮಾಣಪತ್ರದಲ್ಲಿ ಭರವಸೆ ನೀಡಲಾಗಿದೆ.

ಇದನ್ನೂ ಓದಿ:ಕಾರಿನ ನಂಬರ್ ಪ್ಲೇಟ್‌ಗೆ 60 ಕೋಟಿ ರೂ ಖರ್ಚು ಮಾಡಿದ ಭಾರತೀಯ ಉದ್ಯಮಿ!

ಪ್ರಮಾಣಪತ್ರದ ವಿವರ:
ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಅಳವಡಿಕೆ ನಿಯಮಾವಳಿ ಉಲ್ಲಂಘಿಸಿದವರಿಂದ ಈಗಾಗಲೇ 46 ಲಕ್ಷ ದಂಡ ವಸೂಲಿ ಮಾಡಲಾಗಿದೆ. 2018ರ ಏಪ್ರಿಲ್‌ನಿಂದ 2019ರ ಆಗಸ್ಟ್‌ವರೆಗೆ ರಾಜ್ಯದಾದ್ಯಂತ ಒಟ್ಟು 5,85,830 ವಾಹನ ತಪಸಾಣೆ ನಡೆಸಿದ್ದು, ನಿಮಯ ಉಲ್ಲಂಘಿಸಿದ 20,487 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ಈ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

click me!