ಪ್ರಿಮಿಯರ್ ಪದ್ಮಿನಿ ಕಾರಿಗೆ ಮಿನಿ ಕೂಪರ್ ರೂಪ, ಕಣ್ಣು ಕುಕ್ಕುತ್ತಿದೆ ಮಾಡಿಫಿಕೇಶನ್!

By Suvarna News  |  First Published Jul 4, 2020, 3:13 PM IST

ಪ್ರಿಮಿಯರ್ ಪದ್ಮಿನಿ ಭಾರತದಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ.  ಮೂರೂವರೆ ದಶಕಗಳಷ್ಟು ಕಾಲ ಭಾರತದಲ್ಲಿ ಮಿಂಚಿದ ಈ ಕಾರು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹಲವರು ಹಳೇ ಕಾರನ್ನು ಇಟ್ಟುಕೊಂಡಿದ್ದಾರೆ. ಇದೀಗ ಇದೇ ಪ್ರಿಮಿಯರ್ ಪದ್ಮಿನಿ ಕಾರನ್ನು ಮಾಡಿಫಿಕೇಶನ್ ಮಾಡಿ ಮಿನಿ ಕೂಪರ್ ಕಾರಾಗಿ ಪರಿವರ್ತನೆ ಮಾಡಲಾಗಿದೆ


ಕೇರಳ(ಜು.04): ವಾಹನ ಮಾಡಿಫಿಕೇಶನ್‌ ಮಾಡಿ ಸೂಪರ್ ಕಾರಾಗಿ ಪರಿವರ್ತಿಸಲಾಗುತ್ತದೆ. ಆದರೆ ಮೋಟಾರು ವಾಹನ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಆದರೂ ಹಲವರು ತಮ್ಮ ಹಳೇ ಕಾರುಗಳನ್ನು ಮಾಡಿಫಿಕೇಶ್ ಮಾಡಿ ಎಲ್ಲರ ಗಮನಸೆಳೆಯುತ್ತಾರೆ. ಇದೀಗ ಕೇರಳದಲ್ಲಿ ಪ್ರಿಮಿಯರ್ ಪದ್ಮಿನಿ ಕಾರನ್ನು ಮಿನಿ ಕೂಪರ್ ಕಾರಾಗಿ ಮಾಡಿಫಿಕೇಶನ್ ಮಾಡಲಾಗಿದೆ.

ಚೀನಾದ ಬಿಡಿಭಾಗ ಆಮದು ಸಮಸ್ಯೆ; ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ ವಿಳಂಬ!

Latest Videos

undefined

1964ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಪ್ರಿಮಿಯರ್ ಪದ್ಮಿನಿ 2000ನೇ ಇಸವಿ ವರೆಗೆ ಸಕ್ರಿಯವಾಗಿತ್ತು. ಫಿಯೆಟ್ ಕಂಪನಿಯ ಈ ಕಾರು ಭಾರತದಲ್ಲಿ ಮೋಡಿ ಮಾಡಿತ್ತು. ಇದೀಗ ಪ್ರಿಮಿಯರ್ ಪದ್ಮಿನಿ ಹಳೇ ಕಾರನ್ನು BMW ಕಂಪನಿಯ ಮಿನಿ ಕೂಪರ್ ಕಾರಾಗಿ ಪರಿವರ್ತಿಸಲಾಗಿದೆ.

ಮೊದಲ ಎಲೆಕ್ಟ್ರಿಕ್ ಮಿನಿಬಸ್ ಬಿಡುಗಡೆ ಮಾಡಿದ ಹ್ಯುಂಡೈ!..

ರೆಡ್ ಕಲರ್ ಹಾಗೂ ಆಲೋಯ್ ವೀಲ್ಸ್ ಮೂಲಕ ನೂತನ ಮಾಡಿಫಿಕೇಶನ್ ಕಾರು ಕಂಗೊಳಿಸುತ್ತಿದೆ. ಮಿನಿ ಕೂಪರ್ ಕಾರು ಪರಿವರ್ತನಗೆ 8 ಲಕ್ಷ ರೂಪಾಯಿ ಖರ್ಚು ತಗುಲಿದೆ. LED drls, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, LED ಟೈಲ್ ಲ್ಯಾಂಪ್ಸ್ ಸೇರಿದಂತೆ ಹಲವು ಫೀಚರ್ಸ್ ಸೇರಿಸಲಾಗಿದೆ. ಇನ್ನು ಕಾರಿನ ಒಳಭಾಗದಲ್ಲೂ ಬದಲಾವಣೆ ಮಾಡಲಾಗಿದೆ.

ಕಾರಿನ ಸೀಟ್, ಕ್ಯಾಬಿನ್, ಡ್ಯಾಶ್ ಬೋರ್ಡ್ ಸೇರಿದಂತೆ ಹಲವು ಬದಲಾವಣೆ ಮಾಡಲಾಗಿದೆ. ಮಾರುತಿ 800 ಹಳೇ ಕಾರನ್ನು ಇದೇ ರೀತಿ ಮಾಡಿಫಿಕೇಶನ್ ಮಾಡಲು ಸಾಧ್ಯ ಎಂದು ಮಿನಿ ಕೂಪರ್ ಕಾರಾಗಿ ಪರಿವರ್ತಿಸಿದ ಸನ್ ಎಂಟರ್‌ಪ್ರೈಸ್ ಹೇಳಿದೆ.
 

click me!