ಆಮದು ಸುಂಕ ಕಡಿತ- ಕಡಿಮೆ ಬೆಲೆಗೆ ಸಿಗಲಿದೆ ಎಲೆಕ್ಟ್ರಿಕ್ ಕಾರು, ಬೈಕ್ !

By Web Desk  |  First Published Feb 1, 2019, 5:30 PM IST

ಭಾರತದಲ್ಲಿ ಇನ್ಮುಂದೆ ಎಲೆಕ್ಟ್ರಿಕ್ ಕಾರು ಬೈಕ್ ಕಡಿಮೆ ಬೆಲೆಗೆ ಸಿಗಲಿದೆ. ಕೇಂದ್ರ ಸರ್ಕಾರದ ಹೊಸ ಯೋಜನೆ ಇದೀಗ ಭಾರತವನ್ನ ಮಾಲಿನ್ಯ ಮುಕ್ತ ದೇಶವನ್ನಾಗಿ ಮಾಡಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.


ನವದೆಹಲಿ(ಫೆ.01): ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಹಲವರ ಪಾಲಿಗೆ ಆಶಾಕಿರಣವಾಗಿದೆ. ಇದೀಗ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸೇರಿದಂತೆ ಬಿಡಿ ಭಾಗಗಳ ಮೇಲಿನ ಆಮದು ಸುಂಕವನ್ನ ಕಡಿತ ಮಾಡಲಾಗಿದೆ. ಹೀಗಾಗಿ ಭಾರತದಲ್ಲಿ ಇನ್ಮುಂದೆ ಎಲೆಕ್ಟ್ರಿಕ್ ಕಾರು, ಬೈಕ್ ಕಡಿಮೆ ಬೆಲೆಗೆ ಸಿಗಲಿದೆ.

Latest Videos

ಇದನ್ನೂ ಓದಿ: ಬ್ರೈಟ್ ಹೆಡ್‌ಲೈಟ್ಸ್ ಅಳವಡಿಸಿದರೆ ವಾಹನದ RC, ಲೈಸೆನ್ಸ್ ರದ್ದು!

ಮಾಲಿನ್ಯ ನಿಯಂತ್ರಣ ಹಾಗೂ ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನ ಬಳಸಲು ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಇದಕ್ಕಾಗಿ ಎಲೆಕ್ಟ್ರಿಕ್ ವಾಹನದ ಬಿಡಿ ಭಾಗಗಳ ಆಮದು ಸುಂಕವನ್ನು 15 ರಿಂದ 30 ಶೇಕಡಾದಿಂದ 10 ರಿಂದ 15% ಇಳಿಸಲಾಗಿದೆ.

ಇದನ್ನೂ ಓದಿ: ಡ್ರೈವ್ ಮಾಡುವಾಗ ಧೂಮಪಾನ - ಮೊಬೈಲ್ ಫೋನ್‌ನಷ್ಟೇ ಅಪಾಯಕಾರಿ!

ಕೇಂದ್ರ ಸರ್ಕಾರ ಪೆಟ್ರೋಲ್ ಬೈಕ್‌ಗಳ ಮೇಲೆ ಗ್ರೀನ್ ಸೆಸ್ ವಿಧಿಸೋ ಮೂಲಕ ಜನರನ್ನ ಎಲೆಕ್ಟ್ರಿಕ್ ಬೈಕ್ ಹಾಗೂ ಕಾರುಗಳತ್ತ ಚಿತ್ತ ಹರಿಸುವಂತೆ ಮಾಡುತ್ತಿದೆ. ಇದಕ್ಕೆ ಅನುಗುಣವಾಗಿ ಇದೀಗ ಎಲೆಕ್ಟ್ರಿಕ್ ಕಾರು, ಬೈಕ್ ಬಿಡಿ ಭಾಗಗಳ ಆಮದು ಸುಂಕ ಕಡಿತಗೊಳಿಸಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಭಾರತ ಸಂಪೂರ್ಣ ಎಲೆಕ್ಟ್ರಿಕ್ ವಾಹನದತ್ತ ಹೆಜ್ಜೆ ಹಾಕಲಿದೆ.

ಇದನ್ನೂ ಓದಿ: ಮತ್ತೆ ರಸ್ತೆಗಿಳಿಯುತ್ತಿದೆ ಬಜಾಜ್ ಸ್ಕೂಟರ್!

2020ರಲ್ಲಿ ಭಾರತದಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗುತ್ತಿದೆ. ಮಾರುತಿ ಸುಜುಕಿಯ ವ್ಯಾಗನ್ಆರ್, ಹ್ಯುಂಡೈ ಸಂಸ್ಥೆಯ ಕೋನಾ, ಮಹೀಂದ್ರ ಸಂಸ್ಥೆ XUV 300, ಟಾಟಾ ಸಂಸ್ಥೆಯ ಟಿಯಾಗೋ, ಟಿಗೋರ್ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿದೆ.
 

click me!