ಹೊಸ ವರ್ಷಕ್ಕೆ 60 ವರ್ಷ ಹಳೇ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬೈಕ್ ಮತ್ತೆ ಬಿಡುಗಡೆ!

Suvarna News   | Asianet News
Published : Dec 31, 2019, 08:59 PM IST
ಹೊಸ ವರ್ಷಕ್ಕೆ 60 ವರ್ಷ ಹಳೇ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬೈಕ್ ಮತ್ತೆ ಬಿಡುಗಡೆ!

ಸಾರಾಂಶ

ರಾಯಲ್ ಎನ್‌ಫೀಲ್ಡ್ ಹೊಸ ವರ್ಷದಲ್ಲಿ ಹಲವು ಬೈಕ್ ಬಿಡುಗಡೆ ಮಾಡುತ್ತಿದೆ. 2020ರಲ್ಲಿ ಬಿಡುಗಡೆಯಾಗಲಿರುವ ಬೈಕ್‌ಗಳ ಪೈಕಿ ಶೆರ್ಪಾ ಎಲ್ಲರ ಗಮನೆಸೆಳೆದಿದೆ. ಕಾರಣ ಬರೋಬ್ಬರಿ 60  ವರ್ಷಗಳ ಬಳಿಕ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬೈಕ್ ಮತ್ತೆ ಬಿಡುಗಡೆಯಾಗುತ್ತಿದೆ. 

ಚೆನ್ನೈ(ಡಿ.31): ರಾಯಲ್ ಎನ್‌ಫೀಲ್ಡ್ ಬೈಕ್ ಪ್ರೀಯರಿಗೆ ಶೆರ್ಪಾ ಹೆಸರು ಹೊಸದಲ್ಲ. 1960ರಲ್ಲಿ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬೈಕ್ ಭಾರತದಲ್ಲಿ ಜನಪ್ರಿಯವಾಗಿತ್ತು. 173 cc, 2 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 4 ಸ್ಪೀಡ್ ಗೆರ್ ಬಾಕ್ಸ್ ಹಾಗೂ ಮಲ್ಟಿ ಪ್ಲೇಟ್ ಕ್ಲಚ್ ಹೊಂದಿತ್ತು. ಆದರೆ 1978ರಲ್ಲಿ ಶೆರ್ಪಾ ಬೈಕ್ ಸ್ಥಗಿತಗೊಂಡಿತು.

ಇದನ್ನೂ ಓದಿ: ಅಲೋಯ್ ವೀಲ್ಹ್, BS6: ಹೊಸ ರೂಪದಲ್ಲಿ ನೂತನ ರಾಯನ್ ಎನ್‌ಫೀಲ್ಡ್ ಕ್ಲಾಸಿಕ್ 350!

60 ವರ್ಷಗಳ ಬಳಿಕ ಅಂದರೆ 2020ರಲ್ಲಿ ಇದೇ ಶೆರ್ಪಾ ಬೈಕ್ ಮತ್ತೆ ಬಿಡುಗಡೆ ಮಾಡಲು ರಾಯಲ್ ಎನ್‌ಫೀಲ್ಡ್ ಸಜ್ಜಾಗಿದೆ. ಕೆಲ ಬದಲಾವಣೆ, ಆಧುನಿಕ ತಂತ್ರಜ್ಞಾನಜದ ಜೊತೆಗೆ ರೆಟ್ರೋ ಶೈಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ಮಹಿಳೆಯರಿಗಾಗಿ ಬರುತ್ತಿದೆ ಕಡಿಮೆ ತೂಕದ ರಾಯಲ್ ಎನ್‌ಫೀಲ್ಡ್ ಬೈಕ್

ನೂತನ ಶೆರ್ಪಾ 250cc ಎಂಜಿನ್ ಎನ್ನಲಾಗುತ್ತಿದೆ. ಇಷ್ಟೇ ನೂತನ ಬೈಕ್ ಬೆಲೆ 1.20 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಅಂದಾಜಿಸಲಾಗಿದೆ. 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ