ವಾಹನ ಮಾರಾಟ ಚೇತರಿಕೆಗೆ 50% ರೋಡ್ ಟ್ಯಾಕ್ಸ್ ಕಡಿತ; ದಿಟ್ಟ ಹೆಜ್ಜೆ ಇಟ್ಟ ಸರ್ಕಾರ!

By Web Desk  |  First Published Oct 1, 2019, 6:40 PM IST

ವಾಹನ ಮಾರಾಟ ಕುಸಿತದಿಂದ ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಇದೀಗ ಮಾರಾಟಕ್ಕೆ ಚೇತರಿಕೆ ನೀಡಲು ಸರ್ಕಾರ ರೋಡ್ ಟ್ಯಾಕ್ಸ್ ಕಡಿತಗೊಳಿಸಿದೆ. ಬರೋಬ್ಬರಿ 50% ಶೇಕಡಾ ರಷ್ಟು ರಸ್ತೆ ತೆರಿಗೆ ಕಡಿತಗೊಳಿಸಿದೆ.


ಗೋವಾ(ಅ.01): ಭಾರತದಲ್ಲಿ ವಾಹನ ಮಾರಾಟ ಕುಸಿತದಿಂದ ಆಟೋಮೊಬೈಲ್ ಕಂಪನಿಗಳು ಸಂಕಷ್ಟದಲ್ಲಿದೆ. ವಾಹನ ತಯಾರಿಕಾ ಕಂಪನಿಗಳು ಉತ್ಪಾದನೆ ನಿಲ್ಲಿಸುತ್ತಿವೆ, ಉದ್ಯೋಗ ಕಡಿತಗೊಳಿಸುತ್ತಿದೆ. GST(ತೆರಿಗೆ) ಕಡಿತಗೊಳಿಸಲು ವಾಹನ ಕಂಪನಿಗಳು ಮನವಿ ಮಾಡಿದೆ. ಇದರ ಬೆನ್ನಲ್ಲೇ ವಾಹನ ಮಾರಾಟ ಪುನಶ್ಚೇತನಗೊಳಿಸಲು ಗೋವಾ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

ಇದನ್ನೂ ಓದಿ: ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!

Tap to resize

Latest Videos

undefined

ಹೊಸ ವಾಹನ ಖರೀದಿ ಮೇಲೆ ಶೇಕಡಾ 50 ರಷ್ಟು ತೆರಿಗೆ ಕಡಿತಗೊಳಿಸಲಾಗಿದೆ. ದಸರಾ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬದಲ್ಲಿ ಪ್ರತಿ ವರ್ಷ ದಾಖಲೆ ಪ್ರಮಾಣದಲ್ಲಿ ವಾಹನ ಮಾರಾಟವಾಗುತ್ತೆ. ಆದರೆ ಈ ಬಾರಿ ಕುಸಿತ ಕಂಡಿರುವ ಮಾರಾಟಕ್ಕೆ ಚೇತರಿಕೆ ನೀಡಲು ಗೋವಾ ಸರ್ಕಾರ 3 ತಿಂಗಳು ರೋಡ್ ಟ್ಯಾಕ್ಸ್‌ನಲ್ಲಿ 50 ಶೇಕಡಾ ಕಡಿತ ಮಾಡಿದೆ. ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ವರೆಗೆ ಗೋವಾ ಸರ್ಕಾರದ ಹೊಸ ಆಫರ್ ಚಾಲ್ತಿಯಲ್ಲಿರಲಿದೆ.

ಇದನ್ನೂ ಓದಿ: ಬಹುಬೇಡಿಕೆಯ ಮಾರುತಿ ಬಲೆನೋ ಕಾರು ಬೆಲೆ 1 ಲಕ್ಷ ರು. ಭಾರೀ ಇಳಿಕೆ!

ವಾಹನ ಮಾರಟ ಕುಸಿತ ತಪ್ಪಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 3 ತಿಂಗಳ ಕಾಲ ವಾಹನ ಕಂಪನಿ ಹಾಗೂ ಗ್ರಾಹಕರಿಗೆ ಇದರ ಸದುಪಯೋಗವಾಗಲಿದೆ. ಈ ಮೂಲಕ ಭಾರತದದಲ್ಲಿ ವಾಹನ ಮಾರಾಟ ಪುನಶ್ಚೇತನಕ್ಕೆ ರೋಡ್ ಟ್ಯಾಕ್ಸ್ ಕಡಿತಗೊಳಿಸಿದ ಮೊದಲ ಸರ್ಕಾರ ಗೋವಾ. ಇದು ರಾಜ್ಯದ ಆರ್ಥಿಕತೆಗೂ ಸಹಕಾರಿಯಾಗಲಿದೆ ಎಂದು ಗೋವಾ ಸಾರಿಗೆ ಸಚಿವ ಮೌವಿನ್ ಗೊಡ್ಹಿನೊ ಹೇಳಿದ್ದಾರೆ.

ಇದನ್ನೂ ಓದಿ: ಆಟೋ ಮಾರಟ ಕುಸಿತಕ್ಕೆ ಕಾರಣ ಬಿಚ್ಚಿಟ್ಟ ಬಜಾಜ್; ನಿಟ್ಟುಸಿರು ಬಿಟ್ಟ ಕೇಂದ್ರ!

ಗೋವಾ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ. ರಸ್ತೆ ತೆರಿಗೆಯನ್ನು 50% ಇಳಿಸಿರುವುದು ಜನಸಾಮಾನ್ಯರಿಗೆ ನೆರವಾಗಲಿದೆ. ಆದರೆ ಈ ನಿರ್ಧಾರದಲ್ಲಿ ಬಿಜೆಪಿ ದೇಶದ ಆರ್ಥಿಕತೆಯನ್ನು ನಿಭಾಯಿಸಲು ವಿಫಲವಾಗಿದೆ ಅನ್ನೋದು ಸ್ಪಷ್ಟವಾಗಿದೆ ಎಂದಿದೆ.
 

click me!