ಸ್ಪೊರ್ಟಿ ಲುಕ್, 6 ಏರ್‌ಬ್ಯಾಗ್; ಫೋರ್ಡ್ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು ಬಿಡುಗಡೆ!

By Suvarna News  |  First Published Aug 13, 2020, 3:36 PM IST

ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಫೋರ್ಡ್ ಫ್ರೀ ಸ್ಟೈಲ್ ಹೆಚ್ಚು ಯಶಸ್ವಿಯಾಗಿದೆ. ಇದೀಗ ಈ ಯಶಸ್ಸಿನ ಬೆನ್ನಲ್ಲೇ ಫೋರ್ಡ್ ಇಂಡಿಯಾ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು ಬಿಡುಗಡೆಯಾಗಿದೆ. ಆಕರ್ಷಕ ಲುಕ್, ಅಗ್ರೆಸ್ಸೀವ್ ಹಾಗೂ ಸ್ಪೋರ್ಟ್ಸ್ ಸ್ಟೈಲ್ ಹಾಗೂ ಹೆಚ್ಚು ಸುರಕ್ಷತಾ ಫೀಚರ್ಸ್‌ನೊಂದಿಗೆ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿವರ ಇಲ್ಲಿದೆ.


ನವದೆಹಲಿ(ಆ.13): ಹ್ಯಾಚ್‌ಕ್ರಾಸೋವರ್ ಪೈಕಿ ಫೋರ್ಡ್ ಫ್ರೀ ಸ್ಟೈಲ್ ಹೆಚ್ಚು ಜನಪ್ರಿಯವಾಗಿದೆ. ಇದೀಗ ಸಾಲು ಸಾಲು ಹಬ್ಬದ ಪ್ರಯುಕ್ತ ಫೋರ್ಡ್ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು ಬಿಡುಗಡೆ ಮಾಡಲಾಗಿದೆ. ನೂತನ ಫೋರ್ಡ್ ಫ್ರೀ ಸ್ಟೈಲ್ ಫ್ಲೇರ್ ಪೆಟ್ರೋಲ್ ವೇರಿಯೆಂಟ್ ಕಾರಿನ ಬೆಲೆ 7.69 ಲಕ್ಷ ರೂಪಾಯಿ ಹಾಗೂ ಡೀಸೆಲ್ ವೇರಿಯೆಂಟ್ ಬೆಲೆ 8.79 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಫೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ AT ಕಾರು ಬಿಡುಗಡೆ!.

Latest Videos

undefined

ರೆಡ್ ಹಾಗೂ ಬ್ಲಾಕ್ ಕಲರ್‌ನೊಂದಿಗೆ ನೂತನ ಫ್ಲೇರ್ ಎಡಿಶನ್ ಕಾರು ಮತ್ತಷ್ಟು ಆಕರ್ಷಕವಾಗಿದೆ. ಬ್ಲಾಕ್ ಡ್ಯಾಶ್‌ಬೋರ್ಡ್, ರೆಡ್ ಅಸೆಂಟ್ಸ್, ಮಿರರ್, ಡೋರ್ ಹ್ಯಾಂಡಲ್ ಸೇರಿದಂತೆ ಹಲವು ಭಾಗಗಳಲ್ಲಿ ರೆಡ್ ಹಾಗೂ ಬ್ಲಾಕ್ ಕಲರ್ ಸೇರಿಸಲಾಗಿದ್ದು, ಸ್ಪೋರ್ಟೀವ್ ಲುಕ್ ನೀಡಿದೆ. 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ಟಾಲೈಟ್ ನ್ಯಾವಿಗೇಶನ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ಆಟೋಮ್ಯಾಟಿಕ್ ವೈಪರ್ಸ್, ಪುಶ್ ಬಟನ್ ಸ್ಟಾರ್ಟ್, ರಿವರ್ಸ್ ಪಾರ್ಕಿಂಗ್ ಕ್ಯಾಮರ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಮೋಟ್ ಸೆಂಟ್ರಲ್ ಲಾಕಿಂಗ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

ನ್ಯೂ ಎಂಡವರ್‌! 10 ಸ್ಪೀಡ್ ಆಟೋ ಮತ್ತು ಸೆಲೆಕ್ಟ್ ಶಿಫ್ಟ್ ತಂತ್ರಜ್ಞಾನದ ವಿಶ್ವದ ಮೊದಲ ಕಾರ್...

ಟಾಪ್ ಮಾಡೆಲ್ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು 6 ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆ್ಯಂಟಿ ರೋಲೋವರ್ ಪ್ರೊಟೆಕ್ಷನ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.

1.2 ಲೀಟರ್ ಪೆಟ್ರೋಲ್ ಎಂಜಿನ್, 1.5 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಆಯ್ಕೆ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್  ಹೊಂದಿದ್ದು, 96 hp ಪವರ್ ಹಾಗೂ  120 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಡೀಸೆಲ್ ಎಂಜಿನ್ ವೇರಿಯೆಂಟ್ 100 hp ಪವರ್ ಹಾಗೂ 215 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

click me!